Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೇಸಿಗೆ ಯುವ ಒಲಿಂಪಿಕ್ಸ್ 2018 ರಲ್ಲಿ ಪದಕ ವಿಜೇತರನ್ನು ಪ್ರಧಾನಮಂತ್ರಿ ಸನ್ಮಾನಿಸಿದರು

ಬೇಸಿಗೆ ಯುವ ಒಲಿಂಪಿಕ್ಸ್ 2018 ರಲ್ಲಿ ಪದಕ ವಿಜೇತರನ್ನು ಪ್ರಧಾನಮಂತ್ರಿ ಸನ್ಮಾನಿಸಿದರು

ಬೇಸಿಗೆ ಯುವ ಒಲಿಂಪಿಕ್ಸ್ 2018 ರಲ್ಲಿ ಪದಕ ವಿಜೇತರನ್ನು ಪ್ರಧಾನಮಂತ್ರಿ ಸನ್ಮಾನಿಸಿದರು

ಅರ್ಜೆಂಟೀನಾದಲ್ಲಿ ಜರುಗಿದ ಬೇಸಿಗೆ ಯುವ ಒಲಿಂಪಿಕ್ಸ್ 2018 ರಲ್ಲಿ ಪದಕ ವಿಜೇತರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿ ಸನ್ಮಾನಿಸಿದರು

ಮುಂಬರುವ ಒಲಿಂಪಿಕ್ಸ್ ನಲ್ಲಿ ಗೆಲುವು ಸಾಧಿಸಲು ಕ್ರೀಡಾಪಟುಗಳು ಏಕಾಗ್ರತೆಯಿಂದ ಕಠಿಣಶ್ರಮವಹಿಸಿ ಸಾಧನೆ ಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸರಕಾರ ಕ್ರೀಡಾಪಟುಗಳಿಗೆ ಸಾಕಷ್ಟು ಬೆಂಬಲ ಮತ್ತು ಸೌಲಭ್ಯಗಳನ್ನು ಪೂರೈಸಲಿದೆ ಎಂಬ ಭರವಸೆಯನ್ನು ಅವರು ನೀಡಿದರು.

ಯುವ ಕ್ರೀಡಾಪಟುಗಳು ತಮ್ಮ ಶಾಲೆ ಹಾಗೂ ಹಳ್ಳಿಗಳಲ್ಲಿರುವ ಯುವಜನಾಂಗಕ್ಕೆ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಳವಾಗಲು ಕೊಡುಗೆ ನೀಡಿದ ಪದಕ ವಿಜೇತರ ತರಬೇತುದಾರರಿಗೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು.