Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೋಡೋ ಒಪ್ಪಂದ ಬೋಡೋ ಜನರಿಗೆ ಹೊಸ ಶಕೆ ಅಸ್ಸಾಂನ ಏಕತೆ ಮತ್ತು ಸಮಗ್ರತೆ ಬಲವರ್ಧನೆ : ಪ್ರಧಾನಿ


ಬೋಡೋ ಒಪ್ಪಂದ ಅಸ್ಸಾಂನ ಶಾಂತಿ ಮತ್ತು ಅಭಿವೃದ್ಧಿಯ ಐತಿಹಾಸಿಕ ಅಧ್ಯಾಯ ಎಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು,   ‘ಸಬ್ಕಾ ಸಾಥ್ಸಬ್ಕಾ ವಿಕಾಸ್ಸಬ್ಕಾ ವಿಶ್ವಾಸ್‘ ಹಾಗು ‘ಏಕ್ ಭಾರತ್ಶ್ರೇಷ್ಠ ಭಾರತ್‘   ಸ್ಫೂರ್ತಿಯಿಂದ ಪ್ರೇರಿತವಾಗಿದೆ ಎಂದು ಬೋಡೋ ಒಪ್ಪಂದವನ್ನು ಶ್ಲಾಘಿಸಿದರು.

ತಮ್ಮ ಟ್ವೀಟ್ಗಳಲ್ಲಿಪ್ರಧಾನಮಂತ್ರಿಯವರು, “ಭಾರತ ಪೂಜ್ಯ ಬಾಪುರವರನ್ನು ಅವರ ಪುಣ್ಯ ತಿಥಿಯಲ್ಲಿ ನೆನಪಿಸಿಕೊಳ್ಳುವ ಸಂದರ್ಭದಲ್ಲಿಅಸ್ಸಾಂ ಶಾಂತಿ ಮತ್ತು ಅಭಿವೃದ್ಧಿಯ ಒಂದು ಐತಿಹಾಸಿಕ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. 50 ವರ್ಷಗಳ ಕಾಯುವಿಕೆಯ ನಂತರನಮ್ಮ ಬೋಡೋ ಸ್ನೇಹಿತರೊಂದಿಗಿನ ಒಪ್ಪಂದವು ಹೊಸ ಶಕೆಯನ್ನು ಆರಂಭಿಸಿದೆ.  ಇದು ಅಸ್ಸಾಂನ ಐಕ್ಯತೆಯನ್ನು ಬಲಪಡಿಸುತ್ತದೆಅಭಿವೃದ್ಧಿಯನ್ನು ತರುತ್ತದೆ ಮತ್ತು ಉಜ್ವಲ ಭವಿಷ್ಯವನ್ನು ನೀಡುತ್ತದೆ“ ಎಂದು ಟ್ಟೀಟ್ ಮಾಡಿದ್ದಾರೆ.

ಬೋಡೋ  ಸಂಘಟನೆಗಳೊಂದಿಗೆ  ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ನಂತರನಮ್ಮ ಸರ್ಕಾರದ ಪ್ರಮುಖ ಆದ್ಯತೆಯೆಂದರೆ ಬೋಡೋ ಪ್ರದೇಶಗಳ ಅಭಿವೃದ್ಧಿ.  1500 ಕೋಟಿ ರೂ.ಗಳ ಪ್ಯಾಕೇಜ್ ಸಮಗ್ರ ಕಾಮಗಾರಿ ಕಾರ್ಯವು ಪ್ರಾರಂಭವಾಗಿದೆ.  ನಮ್ಮ ವಿಶೇಷ ಗಮನವು ಜೀವನದ ಗುಣಮಟ್ಟ ಸುಧಾರಣೆ ಮಾಡುವುದಾಗಿದೆ ಮತ್ತು ಬೋಡೋ ಜನರು ಸರ್ಕಾರಿ ಯೋಜನೆಗಳಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸುವುದಾಗಿದೆ.

 

ಬೋಡೋ ಸ್ನೇಹಿತರು ನಮ್ಮೊಂದಿಗೆ ಶಾಂತಿಯ ಹಾದಿಯಲ್ಲಿ ಜೊತೆಯಾಗಿರುವುದುಹಿಂಸಾಚಾರದ ಹಾದಿಯನ್ನು ತೊರೆದಾಗ ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯನ್ನು ಇಟ್ಟಾಗ ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎನ್ನುವ ಸಂದೇಶವನ್ನು  ಸಾರುತ್ತದೆ.   ನನ್ನ ಬೋಡೋ ಸ್ನೇಹಿತರನ್ನು ಮುಖ್ಯವಾಹಿನಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆಬೋಡೋ ಪ್ರದೇಶಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಸದಾ ಬದ್ಧರಾಗಿದ್ದೇವೆ.

ಐದು ದಶಕಗಳಷ್ಟು ಹಳೆಯದಾದ ಬೋಡೋ ವಿವಾದವು ಇಂದು ಪೂಜ್ಯ ಬಾಪುವಿನ ಪುಣ್ಯತಿಥಿಯಂದು ಪರಿಹಾರ ಕಂಡುಕೊಂಡಿದೆಬೋಡೋ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಒಪ್ಪಂದವು ಅಸ್ಸಾಂನ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತದೆಹಿಂಸಾಚಾರವನ್ನು ತೊರೆಯಲು ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ನನ್ನ ಬೋಡೋ ಸ್ನೇಹಿತರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.

ನಮ್ಮ ಬೋಡೋ ಸ್ನೇಹಿತರೊಂದಿಗಿನ ಒಪ್ಪಂದವು ಅಸ್ಸಾಂ ಮತ್ತು ದೇಶದ ಇತರ ಹಿಂಸಾಚಾರ ಭಾದಿತ ಭಾಗಗಳಿಗೆ ಒಂದು ಸಂದೇಶವಾಗಿದೆಹಿಂಸಾಚಾರ ಮತ್ತು ನಿರ್ಭಯವಾದ  ವಾತಾವರಣದಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ವೇಗವನ್ನು ನೀಡಬಹುದು.  ನಮ್ಮ ಬೋಡೋ ಸ್ನೇಹಿತರ ಸಂಪೂರ್ಣ ಸಾಮರ್ಥ್ಯವು,  ಅಸ್ಸಾಂನ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡುತ್ತದೆ  ಎನ್ನುವುದು  ನನಗೆ ಸಂತೋಷವಾಗಿದೆ.

ಅಸ್ಸಾಂನ ಇತರ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡಲು  ನಮ್ಮ ಬೋಡೋ ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತುಇದು ಎಲ್ಲರಿಗೂ ಸಂದ ಜಯಇದು ಮಾನವೀಯತೆಯ ಗೆಲುವುಇದು ‘ಸಬ್ಕಾ ಸಾಥ್ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್‘ ಎನ್ನುವ ಮಂತ್ರದಿಂದ ಮತ್ತು ‘ಏಕ್ ಭಾರತ್ಶ್ರೇಷ್ಠ ಭಾರತ್‘ ಎನ್ನುವ ಮನೋಭಾವದಿಂದ ಪ್ರೇರಿತವಾಗಿದೆ.

***