Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ನಾಯಕರ ಸರ್ವಸದಸ್ಯರ ಸಭೆಯಲ್ಲಿ ಪ್ರಧಾನಮಂತ್ರಿಯವರ ಸ್ವಾಗತ ಹೇಳಿಕೆ

ಬ್ರಿಕ್ಸ್ ನಾಯಕರ ಸರ್ವಸದಸ್ಯರ ಸಭೆಯಲ್ಲಿ ಪ್ರಧಾನಮಂತ್ರಿಯವರ ಸ್ವಾಗತ ಹೇಳಿಕೆ


ಘನತೆವೆತ್ತ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೇ, ಘನತೆವೆತ್ತ ಅಧ್ಯಕ್ಷ ಜಾಕೋಬ್ ಜುಮಾ ಅವರೇ, ಘನತೆವೆತ್ತ ಅಧ್ಯಕ್ಷ ಮೈಖೆಲೆ ಟೆಮೆರ್ ಅವರೇ,

ಘನತೆವೆತ್ತ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ,

ಗೌರವಾನ್ವಿತ ಪ್ರತಿನಿಧಿಗಳೇ,

ಗೋವಾದಲ್ಲಿ 8ನೇ ಬ್ರಿಕ್ಸ್ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಲು ನಾನು 125 ಕೋಟಿ ಭಾರತೀಯರೊಂದಿಗೆ ಸೇರುತ್ತೇನೆ.

ಬ್ರಿಕ್ಸ್ ನಾಯಕರ ಸರ್ವಸದಸ್ಯ ಸಭೆಯ ಅಧ್ಯಕ್ಷತೆ ವಹಿಸುವ ಗೌರವ ನನ್ನದಾಗಿದೆ. ಇಂದು ಬೆಳಗ್ಗೆ ನಾವು ನಡೆಸಿದ ಮಾತುಕತೆಗಳು ಫಲಪ್ರದವಾಗಿವೆ.

ಈ ಅಧಿವೇಶನವು ಬ್ರಿಕ್ಸ್ ಕಾರ್ಯಗಳ ಪರವಾದ ಕಾರ್ಯಕ್ರಮದ ನಿರ್ಣಯದ ಮೇಲೆ ನಿರ್ಮಿತವಾದುದಾಗಿದೆ.ಅಂತರ ಬ್ರಿಕ್ಸ್ ಕಾರ್ಯಕ್ರಮಗಳ ಹೆಜ್ಜೆಗುರುತು ಆರ್ಥಿಕ ಚಟುವಟಿಕೆಗಳ ಕ್ಷೇತ್ರವನ್ನು ಸೇರಿಸುವ ಸಲುವಾಗಿ ವಿಸ್ತರಣೆಗೊಂಡಿವೆ.

ಇಂದು ನಮ್ಮ ಪಾಲುದಾರಿಕೆಯು ಕೃಷಿಯಿಂದ ಕೈಗಾರಿಕೆ ಮತ್ತು ನಾವಿನ್ಯತೆಯವರೆಗೆ; ವಾಣಿಜ್ಯದಿಂದ ಪ್ರವಾಸೋದ್ಯಮದವರೆಗೆ; ಪರಿಸರದಿಂದ ಇಂಧನದವರೆಗೆ; ಚಲನಚಿತ್ರದಿಂದ ಫುಟ್ಬಾಲ್ ವರೆಗೆ; ಕೌಶಲ ವರ್ಧನೆಯಿಂದ ಸ್ಮಾರ್ಟ್ ಸಿಟಿಗಳವರೆಗೆ; ಮತ್ತು ನಮ್ಮ ಸಮಾಜವವನ್ನು ಸುರಕ್ಷಿತಗೊಳಿಸಲು ಭ್ರಷ್ಟಾಚಾರದ ವಿರುದ್ಧ ಮತ್ತು ಅಕ್ರಮ ಹಣ ರವಾನೆ ವಿರುದ್ಧ ಹೋರಾಟದವರೆಗೂ ವ್ಯಾಪಿಸಿದೆ.

ಈ ವರ್ಷ, ನಾವು ಬ್ರಿಕ್ಸ್ ಅನ್ನು ನಮ್ಮ ನಗರಗಳಿಗೆ ಮತ್ತು ಪ್ರಾಂತ್ಯಗಳಿಗೆ ತೆಗೆದುಕೊಂಡು ಹೋಗಿದ್ದೇವೆ ಮತ್ತು ವಿವಿಧ ವರ್ಗದ ನಮ್ಮ ಜನರೊಂದಿಗೆ ಸಂಪರ್ಕಿಸಿದ್ದೇವೆ.

ಘನತೆವೆತ್ತರೇ,

ನಾವು ಬ್ರಿಕ್ಸ್ ನಡಿ 10ನೇ ವರ್ಷದ ಪಾಲುದಾರಿಕೆಯನ್ನು ಆಚರಿಸುತ್ತಿದ್ದೇವೆ. ಒಂದು ದಶಕದ ಸಹಯೋಗವು ನಮ್ಮ ಸಹಕಾರಕ್ಕೆ ಬಲವಾದ ಲಾಭವನ್ನು ತಂದಿದೆ.

ನಾವು ನಮ್ಮ ಉಪಕ್ರಮಗಳು ಮತ್ತು ಸಾಧನೆಯ ಗೌರವಕ್ಕೆ ಅರ್ಹರಾಗಿದ್ದೇವೆ.
ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಸ್ಥಾಪನೆ ಹಾಗೂ ಆಕಸ್ಮಿಕ ಮೀಸಲು ಸಿದ್ಧತೆಗಳು ಅಂಕಿತ ಸಾಧನೆಗಳಾಗಿವೆ.
ಆರ್ಥಿಕ ಅನಿಶ್ಚಿತತೆ ಮುಂದುವರಿದಿರುವ ಮತ್ತು ಹೊಸ ಭದ್ರತೆಯ ಸವಾಲುಗಳ ವಿಶ್ವದಲ್ಲಿ ಬ್ರಿಕ್ಸ್ ಶಾಂತಿ ಸಂಭಾವ್ಯ ಮತ್ತು ಭರವಸೆಯನ್ನು ಸಂಕೇತವಾಗಿ ನಿಲ್ಲುತ್ತದೆ.

ನಮ್ಮ ಕಾರ್ಯ ಅಭಿವೃದ್ಧಿಶೀಲ ವಿಶ್ವದಲ್ಲಿ ಹೆಚ್ಚು ಅರ್ಥಪೂರ್ಣವಾಗಿ ನಿಲ್ಲುತ್ತದೆ.
ಕಳೆದ ವರ್ಷ, ಬದಲಾವಣೆ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಕಾರ್ಯಕ್ರಮ ರೂಪಿಸಲು ಬ್ರಿಕ್ಸ್ ಸಕ್ರಿಯ ಪಾತ್ರ ವಹಿಸಿದೆ.
2030ರ ಕಾರ್ಯಕ್ರಮ, ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ಹಣಕಾಸು ಕುರಿತ ಅಡ್ಡೀಸ್ ಅಬಾಬಾ ಕ್ರಿಯಾ ಕಾರ್ಯಕ್ರಮದೊಂದಿಗಿನ ನಮ್ಮ ನಂಟು ಉದೇಶಯುಕ್ತ ಮತ್ತು ಉತ್ಪಾದಕವಾಗಿದೆ.

ಮತ್ತು, ಜಾಗತಿಕ ಆಡಳಿತ ಸ್ವರೂಪವನ್ನು ಬದಲಾವಣೆಯತ್ತ ಸಾಗಿಸುವಲ್ಲಿ ನಾವು ಮುಂಪಡೆಯಲ್ಲಿಯೇ ನಿಂತಿದ್ದೇವೆ.
ಘನತೆವೆತ್ತರೆ,

ನಮ್ಮ ಸಾಧನೆಗಳು ಗಮನಾರ್ಹ ಪ್ರಮಾಣದಲ್ಲಿರಬೇಕಾದರೆ, ನಾವು ಧನಾತ್ಮಕ ದಿಕ್ಕಿನಲ್ಲಿ ಸ್ಥಿರತೆ ಉಳಿಸಿಕೊಳ್ಳುವುದು ಮತ್ತು ನಮ್ಮ ಅಂತರ ಬ್ರಿಕ್ಸ್ ಚಾಲನೆಯನ್ನು ಉಳಿಸಿಕೊಳ್ಳುವುದು ಅಗತ್ಯ.

ನಾವು ಅದಕ್ಕೆ ಹೆಚ್ಚು ವಿಷಯಗಳನ್ನು ಸೇರಿಸುವ ಅಗತ್ಯವಿದೆ.

ನಾವು ನಿಮ್ಮ ಅವಗಾಹನೆಗೆ ಕೆಲವು ಚಿಂತನೆಗಳನ್ನು ತರಲು ಬಯಸುತ್ತೇನೆ.

ಮೊದಲನೆಯದಾಗಿ, ಬ್ರಿಕ್ಸ್ ನಲ್ಲಿ ಸಾಂಸ್ಥಿಕ ನಿರ್ಮಾಣ ಪ್ರಕ್ರಿಯೆ ಗಮನ ಹರಿಸುವ ಕ್ಷೇತ್ರವಾಗಿ ಮುಂದುವರಿಯಬೇಕು.
ನಾವು ನಿರ್ಮಿಸುವ ಸಂಸ್ಥೆಗಲು ನಮ್ಮ ದೇಶಗಳ ಮತ್ತು ವಲಯದ ಅಭಿವೃದ್ಧಿಗೆ ಬೆಂಬಲವಾಗಿರಬೇಕು.
ನಮ್ಮ ಅಭಿವೃದ್ಧಿ ಆದ್ಯತೆಗಳಿಗೆ ಸ್ಪಂದಿಸಲು ವಿಸ್ತೃತ ಆಯ್ಕೆಗಳನ್ನು ಒದಗಿಸಬೇಕು ಮತ್ತು ಅವು ಹೆಚ್ಚಿನ ನಮ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡಬೇಕು.

ಬ್ರಿಕ್ಸ್ ಕ್ರೆಡಿಟ್ ಶ್ರೇಣೀ ಸಂಸ್ಥೆಯ ಕಲ್ಪನೆಯನ್ನು ಸಾಕಾರಗೊಳಿಸುವತ್ತ ನಾವು ಗಮನ ಹರಿಸಬೇಕಾಗಿದೆ.

ನಾವು ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ, ಬ್ರಿಕ್ಸ್ ರೈಲ್ವೆ ಸಂಶೋಧನಾ ಜಾಲ ಮತ್ತು ಬ್ರಿಕ್ಸ್ ಕ್ರೀಡಾ ಮಂಡಳಿಯ ಸ್ಥಾಪನೆಯ ಕಾರ್ಯವನ್ನು ತ್ವರಿತಗೊಳಿಸಬೇಕಾಗಿದೆ.

ನಿಯಮಗಳನ್ನು ರೂಪಿಸುವ, ಕಟ್ಟಡ ನಿರ್ಮಿಸುವ ಮತ್ತು ತೆರಿಗೆ ವಂಚನೆ ತಡೆಯಲು ಸಾಮರ್ಥ್ಯ ಹೆಚ್ಚಿಸುವ ಮತ್ತು ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಸ್ಪಷ್ಟ ಅಗತ್ಯವಿದೆ.

ನಮ್ಮ ಸಂಸ್ಥೆಗಳು ತೆರಿಗೆ ವಂಚಕರು ಮತ್ತು ಅಕ್ರಮ ಹಣ ರವಾನೆ ಮಾಡುವವರನ್ನು ನ್ಯಾಯಾಂಗದ ವ್ಯಾಪ್ತಿಗೆ ತರಲು ಮಾಹಿತಿ ವಿನಿಮಯ ವ್ಯವಸ್ಥೆ ರೂಪಿಸಬೇಕು.

ಇಂದಿನ ವಾಸ್ತವತೆಯ ಪ್ರತಿಬಿಂಬಿಸಲು ಜಾಗತಿಕ ಆಡಳಿತ ಸಂಸ್ಥೆಗಳ ಸಬಲೀಕರಣಕ್ಕೆ ಬ್ರಿಕ್ಸ್ ಉತ್ತೇಜನ ನೀಡಬೇಕು.
ಎರಡನೆಯದಾಗಿ, ಬ್ರಿಕ್ಸ್ ನಡುವೆ ಗೊತ್ತಾದ ಪರಿಮಾಣದ ಮತ್ತು ವ್ಯಾಪಾರ ಮತ್ತು ಬಂಡವಾಳ ಕೊಂಡಿಯನ್ನು ಗುಣಮಟ್ಟ ರೂಪಾಂತರ ಮಾಡಬೇಕಾಗಿದೆ.

2015ರಲ್ಲಿ, ಅಂತರ ಬ್ರಿಕ್ಸ್ ವಾಣಿಜ್ಯ ವಹಿವಾಟು 250 ಶತಕೋಟಿ ಅಮೆರಿಕನ್ ಡಾಲರ್ ತಲುಪಿತ್ತು.
ಈ ಸಂಖ್ಯೆಯನ್ನು 2020ರಹೊತ್ತಿಗೆ 500 ಶತಕೋಟಿ ಅಮೆರಿಕನ್ ಡಾಲರ್ ಗೆ ಹೆಚ್ಚಿಸಲು ನಾವು ಸ್ವಯಂ ಗುರಿಯನ್ನು ಹಾಕಿಕೊಳ್ಳಬೇಕಾಗಿದೆ.
ಇದು ಎಲ್ಲ ಐದು ರಾಷ್ಟ್ರಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕಾರ್ಯಕ್ರಮಗಳನ್ನು ಹೆಚ್ಚಿಸುವ ಅಗತ್ಯವಿದೆ.
ಮತ್ತು, ಸರಕಾರಗಳಿಗೆ ಪೂರ್ಣವಾಗಿ ಈ ಪ್ರಕ್ರಿಯೆ ಸುಲಭಗೊಳಿಸಲು ಅವಕಾಶ ನೀಡಬೇಕಾಗಿದೆ. ತೆರಿಗೆ ಮತ್ತು ಸೀಮಾಸಂಕ ಸಹಕಾರದ ಚೌಕಟ್ಟಿಗೆ ನಮ್ಮ ಒಪ್ಪಂದ ಉತ್ತಮ ಆರಂಭವಾಗಿದೆ.

ಬ್ರಿಕ್ಸ್ ವಾಣಿಜ್ಯ ಮೇಳ ಮತ್ತು ವಸ್ತುಪ್ರದರ್ಶನ ಈಗಷ್ಟೇ ನವದೆಹಲಿಯಲ್ಲಿ ಸಮಾರೋಪಗೊಂಡಿದ್ದು, ನಿಯಮಿತವಾದ ವಾಣಿಜ್ಯ ವಿನಿಮಯಕ್ಕೆ ಇದು ವೇದಿಕೆ ಆಗಲಿದೆ.

ಮತ್ತು, ಬ್ರಿಕ್ಸ್ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಈ ಉದ್ದೇಶ ಈಡೇರಿಕೆಗೆ ಸಕ್ರಿಯ ಪಾತ್ರ ವಹಿಸಬೇಕು ಮತ್ತು ಬೆಂಬಲಿಸಬೇಕು.
ಇದು ನಮ್ಮ ಎಸ್.ಎಂ.ಇ.ಯನ್ನು ಜಾಗತಿಕ ಮೌಲ್ಯ ಸರಣಿಯಾಗಿ ಸಮಗ್ರೀಕರಣಗೊಳಿಸಲು ನೆರವಾಗಲಿದೆ. ಡಬ್ಲ್ಯುಟಿಓ ಮತ್ತು ದೋಹಾ ಅಭಿವೃದ್ಧಿ ಸುತ್ತಿನ ಪಾತ್ರವನ್ನು ಸಂರಕ್ಷಿಸಲು ನಾವು ಆಪ್ತವಾಗಿ ಸಹಯೋಗ ನೀಡಬೇಕಾಗಿದೆ.
ಅದರ ಜೊತೆಗೆ, ಜಿ 20, ಡಬ್ಲ್ಯುಟಿಓ ಮತ್ತು ಇತರ ವೇದಿಕೆಗಳಲ್ಲಿ ನಮ್ಮ ಸಹಕಾರ ಮತ್ತು ಒಗ್ಗೂಡಿಸುವಿಕೆಯನ್ನು ಹೆಚ್ಚಿಸಬೇಕಾಗಿದೆ.
ಭಾರತವು ಡಬ್ಲ್ಯುಟಿಓದಲ್ಲಿ ಸೇವೆಗಳಿಗಾಗಿ ವಾಣಿಜ್ಯ ಅವಕಾಶಗಳ ಒಪ್ಪಂದದ ಕರಡನ್ನು ಮಂಡಿಸಿದೆ.

ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೇವಾ ಉದಾರೀಕರಣ ಮತ್ತು ವಾಣಿಜ್ಯವನ್ನು ಗರಿಷ್ಠಗೊಳಿಸುವಂತೆ ಕೋರುತ್ತದೆ.

ಈ ಪ್ರಸ್ತಾಪಕ್ಕೆ ಬ್ರಿಕ್ಸ್ ನ ಬಲವಾದ ಬೆಂಬಲ ನಮ್ಮ ಸಂಚಯಿತ ಆರ್ಥಿಕ ಹಿತದಲ್ಲಿದೆ.

ಮೂರನೆಯದಾಗಿ, ಆರ್ಥಿಕ ಪರಿವರ್ತನೆಯ ಪ್ರಮುಖ ಆದ್ಯತೆಯ ಗಮನವಾಗಿದೆ.

ನಗರೀಕರಮ, ಮೂಲಸೌಕರ್ಯ ಮತ್ತು ನಾವಿನ್ಯ ನಮ್ಮ ಬ್ರಿಕ್ಸ್ ಆರ್ಥಿಕತೆಗಳ ಆದ್ಯ ಗಮನದ ಕ್ಷೇತ್ರವಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ, ಡಿಜಿಟಲ್ –ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ನಗರೀಕರಣ ಮತ್ತು ನಮ್ಮ ನಗರಗಳ ನಡುವಿನ ಸಹಕಾರಕ್ಕೆ ಒತ್ತು ನೀಡಿದ್ದೇವೆ.

ಹೊರಹೊಮ್ಮುತ್ತಿರುವ ಮಾರುಕಟ್ಟೆಯಿಂದ ಮುಂದಿನ ಶತಕೋಟಿ ಅಂತರ್ಜಾಲ ಬಳಕೆದಾರರು ಬರಲಿದ್ದಾರೆ.

ನಮ್ಮ ಆರ್ಥಿಕತೆಯ ಮೂಲ ವಿನ್ಯಾಸವನ್ನು ಪರಿವರ್ತಿಸುವ ಅವಕಾಶವನ್ನು ನಮ್ಮ ಸಹಕಾರ ಬಳಸಿಕೊಳ್ಳಬೇಕು.
ನಾಲ್ಕನೆಯದು, ನಮ್ಮ ಸಮಾಜವನ್ನು ಸುರಕ್ಷಿತವಾಗಿಡುವುದು.

ನಾವು ವಾಸಿಸುವ ಜಗತ್ತಿನಲ್ಲಿ, ನಮ್ಮ ಪ್ರಜೆಗಳ ಬದುಕನ್ನು ಸುರಕ್ಷಿತವಾಗಿಡಲು, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸಹಕಾರ ಅಗತ್ಯವಾಗಿದೆ.
ನಮ್ಮ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಮೇಲೆ ಭಯೋತ್ಪಾದನೆಯ ಪ್ರಸಾರದ ದೀರ್ಘ ನೆರಳು ಆವರಿಸಿದೆ.
ಇದು ಈಗ ವಿಶ್ವವ್ಯಾಪಿಯಾಗಿದೆ. ಇದು ಇಂದು ಮಾರಕವಾಗಿ ಬೆಳೆದಿದೆ ಮತ್ತು ತಂತ್ರಜ್ಞಾನ ಬಳಕೆಯಲ್ಲೂ ಪ್ರಾವಿಣ್ಯತೆ ಪಡೆದಿದೆ.

ಹೀಗಾಗಿ ಭಯೋತ್ಪಾದನೆಗೆ ನಮ್ಮ ಸ್ಪಂದನೆ, ಸಮಗ್ರತೆಗಿಂತ ಕಡಿಮೆ ಇರಲೇಬಾರದು.

ಮತ್ತು, ನಾವು ವೈಯಕ್ತಿಕವಾಗಿ ಮತ್ತು ಸಮಗ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಭಯೋತ್ಪಾದನೆ ವಿರುದ್ಧ ಆಯ್ದ ವಿಧಾನಗಳು, ವೈಯಕ್ತಿಕ ಮತ್ತು ಸಂಸ್ಥೆಗಳು ಕೇವಲ ನಿರರ್ಥಕವಷ್ಟೇ ಅಲ್ಲ, ಜೊತೆಗೆ ವಿರುದ್ಧವೂ ಆಗಿದೆ. .

ಕೃತಕ ಮತ್ತು ಸ್ವಯಂ ಸೇವಾ ನೆಲೆಯ ಆಧಾರದಲ್ಲಿ ಯಾವುದೇ ತಾರತಮ್ಯ ಇರಬಾರದು.

ಭಯೋತ್ಪಾದಕ ಚಟುವಟಿಕೆಗೆ ಜವಾಬ್ದಾರರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಪರಾಧೀಕರಣ ಒಂದೇ ಆಧಾರವಾಗಬೇಕು.

ಭಯೋತ್ಪಾದಕರಿಗೆ ಆರ್ಥಿಕ ನೆರವು, ಅವರಿಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ವ್ಯವಸ್ಥಿತವಾಗಿ ಕಡಿದು ಹಾಕಬೇಕು.

ಈ ನಿಟ್ಟಿನಲ್ಲಿ, ನಾವು ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಭದ್ರತಾ ಸಹಕಾರವನ್ನು ಆಳಗೊಳಿಸುವ ಅಗತ್ಯವಿದೆ.
ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದದ ಕರಡನ್ನು ಶೀಘ್ರ ಅಂಗೀಕರಿಸುವುದು ಈ ಪಿಡುಗಿನ ವಿರುದ್ಧದ ಹೋರಾಡುವ ನಮ್ಮ ಸಂಕಲ್ಪದ ವಿಸ್ತರಣೆಯಾಗುತ್ತದೆ.

ಐದನೆಯದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜನರಿಂದ ಜನರ ವಿನಿಮಯ ಬ್ರಿಕ್ಸ್ ಜೀವಸತ್ತ್ವವಾಗಿದೆ.

ಇದು ನಮ್ಮ ಪಾಲುದಾರಿಕೆಗೆ ಶ್ರೀಮಂತಿಕೆ ಮತ್ತು ಚಲನಶೀಲತೆ ತಂದಿದೆ. ನಾವು ಈ ವರ್ಷ ಈ ಆಯಾಮವನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಆಯ್ಕೆ ಮಾಡಿಕೊಂಡಿದ್ದೇವೆ.

ಬ್ರಿಕ್ಸ್ ಚಲನಚಿತ್ರೋತ್ಸವ, ವಾಣಿಜ್ಯ ಮೇಳ, ಪ್ರವಾಸೋದ್ಯಮ ಸಮಾವೇಶ, ಕ್ರೀಡಾ ಮಂಡಳಿ, ಫುಟ್ಬಾಲ್ ಪಂದ್ಯಾವಳಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳು ನಮ್ಮ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಕೋಟ್ಯಂತರ ಯುವ ಬಾಧ್ಯಸ್ಥರಿಗೆ ನೆರವಾಗುತ್ತಿದೆ.
ಘನತೆವೆತ್ತರೆ,

ಬಲವಾದ, ಆಳವಾದ ಮತ್ತು ಚಲನಶೀಲವಾದ ಬ್ರಿಕ್ಸ್ ಸಮುದಾಯಕ್ಕೆ ಸಂಬಂಧಿಸಿದಂತೆ ನಾನು ನನ್ನ ಸಹ ಬ್ರಿಕ್ಸ್ ನಾಯಕರ ಅಭಿಪ್ರಾಯ ಆಲಿಸಲು ಉತ್ಸುಕನಾಗಿದ್ದೇನೆ.

ನಿಮ್ಮ ಗಮನಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ.

ಧನ್ಯವಾದಗಳು

***


AKT/HS