Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಬ್ರಿಜಿಟಲ್ ನೇಷನ್” ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣ


ದೇಶದ ಸಾಮಾಜಿಕ ಮತ್ತು ವ್ಯಾಪಾರಿ ನಾಯಕತ್ವಕ್ಕೆ ಸದಾ ಪ್ರೇರಣೆ ನೀಡುತ್ತಿರುವ ರತನ್ ಟಾಟಾ ಅವರೇ, ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎನ್. ಚಂದ್ರಶೇಖರನ್ ಅವರೇ, ಸೋದರಿ ರೂಪಾ ಅವರೇ ಹಾಗೂ ಮಹಿಳೆಯರೇ ಮತ್ತು ಮಹನೀಯರೇ!!

ರತನ್ ಟಾಟಾ ಅವರನ್ನು ಮತ್ತು ಚಂದ್ರಶೇಖರನ್ ಅವರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಮಾತನಾಡುವುದು ನನಗೆ ಯಾವಾಗಲೂ ಒಂದು ಹೊಸ ಅನುಭವ ನೀಡುತ್ತದೆ. ದೇಶದ ಒಂದು ಬೃಹತ್ ಸಂಸ್ಥೆಗೆ ನಾಯಕತ್ವವನ್ನು ಒದಗಿಸುವಂತಹ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ.

ಇಷ್ಟೊಂದು ದೊಡ್ಡ ಜವಾಬ್ದಾರಿಯ ಹೊರತಾಗಿಯೂ ಅವರು ಹೇಗೆ ನಗು-ನಗುತ್ತಾ ಒತ್ತಡರಹಿತವಾಗಿರುವುದನ್ನು ಸಾಧ್ಯವಾಗಿಸಿಕೊಳ್ಳುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಚಂದ್ರಶೇಖರನ್ ಅವರು ಭವಿಷ್ಯದಲ್ಲಿ ಇದರ ಬಗ್ಗೆಯೂ ಒಂದು ಪುಸ್ತಕ ಬರೆಯಬಹುದು ಎಂದು ನನಗೆ ಅನ್ನಿಸುತ್ತದೆ. ಈ ಆಲೋಚನೆ ನೀಡಿದ್ದಕ್ಕೆ ನಾನೇನೂ ಪೇಟೆಂಟ್ ಕೇಳುವುದಿಲ್ಲ. ನೀವು ಯಾವುದೇ ಆತಂಕವಿಲ್ಲದೇ ಪುಸ್ತಕ ಬರೆಯಬಹುದು.

ಸ್ನೇಹಿತರೇ,

ಅವರು ಪುಸ್ತಕ ಬರೆಯುತ್ತಾರೋ ಇಲ್ಲವೋ ಎಂದು ನಾನು ಖಚಿತವಾಗಿ ಹೇಳಲಾರೆ. ಆದರೆ, ಒತ್ತಡರಹಿತ ನಗುಮೊಗದ ಮನಸ್ಸಿನ ಪರಿಣಾಮ ಏನಾಗಬಹುದು ಎಂಬುದು ನಿಮ್ಮೆದುರಿಗಿದೆ. ಅದೇ ‘ಬ್ರಿಜಿಟಲ್ ನೇಷನ್’.

ಸಕಾರಾತ್ಮಕತೆ, ಕ್ರಿಯಾಶಿಲತೆ ಮತ್ತು ರಚನಾತ್ಮಕ ಮನಃಸ್ಥಿತಿ, ದೇಶದ ಸಮಸ್ಯೆಗಳನ್ನು ಬಗೆಹರಿಸುವಂಥ ಹೊಸ ಆಲೋಚನೆಗಳಿಗೆ ನಾಂದಿ ಹಾಡಬಲ್ಲದು.

ಈ ಸಕಾರಾತ್ಮಕತೆ ಆಶಾಭಾವನೆ ಮತ್ತು ನಮ್ಮ ಪ್ರತಿಭೆ ಹಾಗೂ ಸಂಪನ್ಮೂಲಗಳ ಮೇಲೆ ನಂಬಿಕೆ, ಇವು ನವ ಭಾರತದ ಆಲೋಚನೆಗಳಾಗಿವೆ.

ಈ ಪುಸ್ತಕವು, ಮಹತ್ವಾಕಾಂಕ್ಷೆಯುಳ್ಳ ಭಾರತವನ್ನು ಪ್ರೇರೇಪಿಸುವುದಲ್ಲದೇ, ಸಮಾಜದ ಕೆಲವು ವೃತ್ತಿಪರ ನಿರಾಶಾವಾದಿಗಳಿಗೆ ಹೊಸ ದೃಷ್ಠಿಕೋಣವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ನಾನು ನಂಬಿದ್ದೇನೆ. ಚಂದ್ರಶೇಖರನ್ ಜೀ ಮತ್ತು ರೂಪಾ ಜೀ ಅವರಿಗೆ ಈ ದೂರದೃಷ್ಠಿಯನ್ನು ದಾಖಲೆ ರೂಪದಲ್ಲಿ ಹೊರ ತಂದಿದ್ದಕ್ಕಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ತಂತ್ರಜ್ಞಾನಕ್ಕೆ ಒಂದು ಬೃಹತ್ ರೂಪವನ್ನ ನಿಡುವ ಬಹು ದೊಡ್ಡ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಈ ಪುಸ್ತಕ ಹೊರ ಬಂದಿದೆ. ಭಯ ಹುಟ್ಟಿಸುವಂತಹ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ.

ಅದರಲ್ಲೂ, ವಿಶೇಷವಾಗಿ ನಮ್ಮ ಜನಸಂಖ್ಯಾ ಲಾಭಾಂಶಕ್ಕೆ ಸವಾಲಾಗಿ ತಂತ್ರಜ್ಞಾನವನ್ನು ಬಿಂಬಿಸಲಾಗುತ್ತಿದೆ.

ಈ ಪುಸ್ತಕದಲ್ಲಿ ಸರ್ಕಾರದ ದೃಷ್ಠಿಕೋಣವನ್ನು ಮತ್ತಷ್ಟು ಸದೃಢಗೊಳಿಸಲಾಗಿದೆ. ಇದರಲ್ಲಿ, ತಂತ್ರಜ್ಞಾನವನ್ನು ಅಡತಡೆಯನ್ನು ಸೃಷ್ಠಿಸುವ ಮೂಲದಂತಲ್ಲದೇ, ಸಂಪರ್ಕದ ದು ಸಾಧನವಾಗಿ ತೋರಲಾಗಿದೆ.

ತಂತ್ರಜ್ಞಾನವನ್ನು ಅಡ್ಡಗೋಡೆಯಲ್ಲ ದು ಸೇತುವೆ

ತಂತ್ರಜ್ಞಾನ ಮತ್ತು ಪ್ರತಿಭೆ ಆತಂಕವಲ್ಲ ಬದಲಾಗಿ ಶಕ್ತಿಯನ್ನು ವೃದ್ಧಿಸುವಂಥವು.

ತಂತ್ರಜ್ಞಾನ ಆಕಾಂಕ್ಷೆ ಮತ್ತು ಸಾಧನೆಗಳ ನಡುವಿನ ಸೇತುವೆ ಇದ್ದಂತೆ.

ತಂತ್ರಜ್ಞಾನ ಬೇಡಿಕೆ ಮತ್ತು ಪೂರೀಕೆ ಮಧ್ಯದ ಸೇತುವೆ ಇದ್ದಂತೆ.

ತಂತ್ರಜ್ಞಾನ ಸರ್ಕಾರ ಮತ್ತು ಆಡಳಿತದ ಮಧ್ಯೆ ಸೇತುವೆ ಇದ್ದಂತೆ.

ತಂತ್ರಜ್ಞಾನ ಸರ್ವರಿಗೂ ಅಭಿವೃದ್ಧಿಯೆಡೆಗೆ ಸಂಪರ್ಕ ಕಲ್ಪಿಸುವ ಸೇತುವೆ.

ಸ್ನೇಹಿತರೇ,

ನಮ್ಮ ಕಳೆದ 5 ವರ್ಷಗಳ ಅಧಿಕಾರಾವಧಿಯಲ್ಲಿ ಈ ಭಾವನೆಗಳು ಪ್ರಸ್ತುತವಾಗಿದ್ದವು ಮತ್ತು ಭವಿಷ್ಯತ್ತಿಗೂ ಇದೇ ನಮ್ಮ ನಿಲುವಾಗಿದೆ.

ಕೃತಕ ಜಾಣ್ಮೆ, ಯಂತ್ರೋಪಕರಣ ಕಲಿಕೆ ಮತ್ತು ರೊಬೊಟಿಕ್ಸ್ ನಂತಹ ಆಧುನಿಕ ತಂತ್ರಜ್ಞಾನಗಳು, ಅಭಿವೃದ್ಧಿಗೆ ಪರಿಹಾರ ರೂಪದಲ್ಲಿ ಅಥವಾ ಸಾಧನದ ರೂಪದಲ್ಲಿ ಕೆಲಸ ಮಾಡಲಿವೆ ಎಂಬುದನ್ನು ಈ ಪುಸ್ತಕ ವರ್ಣಿಸುತ್ತದೆ.

ನನ್ನ ಅನುಭವಕ್ಕನುಸಾರ, ನಾನೂ ಅದನ್ನೇ ಹೇಳ ಬಯಸುತ್ತೇನೆ. ಕಳೆದ 5 ವರ್ಷಗಳಲ್ಲಿ, ಭಾರತದಲ್ಲಿ, ಆಡಳಿತ ನಡೆಸಲು ತಂತ್ರಜ್ಞಾನದ ಅಳವಡಿಕೆ ಎಷ್ಟೊಂದು ಸುಧಾರಣೆ ಮತ್ತು ಬದಲಾವಣೆಗಳನ್ನು ತಂದಿದೆ ಎಂಬುದನ್ನು ನೀವು ಮನಗಾಣಬಹುದಾಗಿದೆ. ಇದೆಲ್ಲವೂ ನಡೆಯುತ್ತಿದೆ ಎಂಬುದಕ್ಕೆ ನಾನು ನಿಮಗೆ ಉದಾಹರಣೆಯನ್ನು ನೀಡುತ್ತೇನೆ.

ಮಿತ್ರರೇ,

ನಮ್ಮ ದೇಶದಲ್ಲಿ ಎಲ್ ಪಿ ಜಿ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಮತ್ತು ಸಬ್ಸಿಡಿ ನೀಡುವುದು ಜಾರಿಯಲ್ಲಿದ್ದು ದಶಕಗಲೇ ಕಳೆದಿವೆ.

ನಾವು ಉಜ್ವಲ್ ಯೋಜನೆಯನ್ನು ಆರಂಭಿಸಿದಾಗ ಬಹಳಷ್ಟು ಜನ ಬಹುಶಃ ಇದು ಕೂಡಾ ಈ ಹಿಂದೆ ನಡೆದುಕೊಂಡು ಬಂದ ಪದ್ಧತಿಯನ್ನೇ ಅನುಸರಿಸುತ್ತದೆ ಎಂದು ಆಲೋಚಿಸಿದ್ದರು. ಆದರೆ, ನಾವು ಇದರ ಹಿಂದಿರುವ ಲೋಚನೆಯನ್ನೇ ಬದಲಿಸಿದೆವು. ತಲುಪುವ ರೀತಿಯನ್ನು ಬದಲಿಸಿ ಅದರಲ್ಲಿ ತಂತ್ರಜ್ಞಾನವನ್ನು ಪರಿಚಯಿಸಿದೆವು.

ಸ್ನೇಹಿತರೇ,

ನಾವು ಈ ಹಿಂದಿನ ಪದ್ಧತಿಯನ್ನೇ ಅನುಸರಿಸಿದ್ದರೆ, ಒಂದು ಸಮಿತಿಯನ್ನು ರಚಿಸಬೇಕಾಗಿತ್ತು. ಆ ಸಮಿತಿ ಬೇರೆ-ಬೇರೆ ಪಾಲುದಾರರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಬೇಕಿತ್ತು, ಹೀಗೆ ಮಾಡಿದರೆ, ನಾವು ಗುರಿ ತಲುಪುವುದು ಅಸಾಧ್ಯವಾಗಿತ್ತು. ಆದರೆ, ಸಮಿತಿ ರಚಿಸುವ ಬದಲಾಗಿ ನಾವು ತಂತ್ರಜ್ಞಾನದ ಮೂಲಕ ತಲುಪುವ ಪ್ರಯತ್ನ ಮಾಡಿದೆವು.

ಡೇಟಾ ಇಂಟೆಲಿಜೆನ್ಸ್ ಸಹಾಯದೊಂದಿಗೆ ಮೊದಲು ನಾವು ಕಾರ್ಯ ನಿರ್ವಹಿಸುತ್ತಿರುವ 17000 ಎಲ್ ಬಟವಾಡೆದಾರ ಕೇಂದ್ರಗಳನ್ನು ಗುರುತಿಸಿದೆವು, ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ 10000 ಕೇಂದ್ರಗಳನ್ನು ತೆರೆದೆವು. ಇದಕ್ಕಾಗಿ ನಾವು ದೇಶದ ಪ್ರತಿಯೊಂದು ಗ್ರಾಮವನ್ನು ಡಿಜಿಟಲ್ ರೂಪದಲ್ಲಿ ಗುರುತಿಸಿದೆವು.

ವ್ಯಾಪಾರದ ವರದಿ, ಎಲ್ ಪಿ ಜಿ ಅಳವಡಿಕೆ, ಜನ ಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮುಂತಾದ ದತ್ತಾಂಶ ವಿವರಗಳಿಗಾಗಿ ಈ ತಂತ್ರಾಶವನ್ನು ಪರಿಶೀಲನೆಗೆ ಒಳ ಪಡಿಸಲಾಯಿತು.

ಲಕ್ಷಾಂತರ ಗ್ರಾಮಗಳ ಸುಮಾರು 64 ಲಕ್ಷ ವೈವಿಧ್ಯಮಯ ದತ್ತಾಂಶ ವಿವರಗಳ ಪರಿಶೀಲನೆಯನ್ನು ಆಧರಿಸಿ, ಯಾವ ಸ್ಥಳದಲ್ಲಿ ವಿತರಣಾ ಕೇಂದ್ರಗಳನ್ನು ನಿರ್ಮಿಸ ಬೇಕು ಎಂಬುದನ್ನು ನಿರ್ಧರಿಸಲಾಯಿತು. ಆದರೆ, ನಮ್ಮ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ಮತ್ತೊಂದು ಪ್ರಮುಖ ಸಮಸ್ಯೆಗೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು.

ಡ್ಯಾಶ್ ಬೋರ್ಡ್ ನಲ್ಲಿಯ ಅರ್ಜಿಗಳ ಮತ್ತು ವಿತರಣೆಯ ವಸ್ತು ಸ್ಥಿತಿ ಪರಿಶೀಲನೆ ಸಂದರ್ಭದಲ್ಲಿ, ಬಹಳಷ್ಟು ಮಹಿಳೆಯರ ಅರ್ಜಿಗಳು ಅವರು ಬ್ಯಾಂಕ್ ಖಾತೆ ಹೊಂದಿಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಳ್ಳುತ್ತಿರುವುದು ಕಂಡು ಬಂತು.

ಈ ಸಮಸ್ಯೆಯ ಪರಿಹಾರಕ್ಕಾಗಿ ಜನ್ ಧನ್ ಕ್ಯಾಂಪ್ ಗಳನ್ನು ಆಯೋಜಿಸಲಾಯಿತು ಮತ್ತು ಅಂಥ ಮಹಿಳೆಯರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು.

ಪರಿಣಾಮ, 3 ವರ್ಷಗಳಲ್ಲಿ 8 ಕೋಟಿ ಸಂಪರ್ಕ ಒದಗಿಸುವ ನಮ್ಮ ಗುರಿಯನ್ನು ನಾವು ಅಂತಿಮ ಗಡುವಿಗಿಂತ ಬಹಳ ಮೊದಲೇ ತಲುಪಲು ಸಾಧ್ಯವಾಯಿತು.

ಸ್ನೇಹಿತರೇ,

ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವುದೇ ಇಲ್ಲಿ ಪ್ರಮುಖ ವಿಷಯವಾಗಿತ್ತು. ಈಗ ತಂತ್ರಜ್ಞಾನದ ಬಳಕೆಯಿಂದ ನಡವಳಿಕೆಯಲ್ಲಿ ಆಗುವಂತಹ ಬದಲಾವಣೆಗಳ ಕುರಿತು ಒಂದು ಉದಾಹರಣೆಯನ್ನು ನೀಡ ಬಯಸುತ್ತೇನೆ. ನಿಮ್ಮ ಪುಸ್ತಕ ದೇಶದಲ್ಲಿ ಆರೋಗ್ಯ ರಕ್ಷಣಯ ಸ್ಥಿತಿಯ ಕುರಿತು ಬೆಳಕು ಚೆಲ್ಲಿದೆ. ಅದರಲ್ಲೂ ವಿಶೇಷವಾಗಿ, ಬಡತನ ಮತ್ತು ಹಣದ ಕೊರತೆಯಿಂದಾಗಿ ನಮ್ಮ ದೇಶದಲ್ಲಿ ಚಿಕಿತ್ಸೆ ಪಡೆಯಬಾರದು ಎಂಬ ಮಾನಸಿಕ ತಡೆಗೋಡೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ಈ ಸ್ಥಿತಿಯನ್ನು ಬದಲಿಸುವಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿಂದೆ, ಚಿಕಿತ್ಸೆ ಪಡೆಯಲು ಎಲ್ಲವನ್ನೂ ಮಾರಬೇಕಾಗುತ್ತದೆ ಎಂಬ ಭೀತಿಯಿಂದ ಹಿಂದಡಿ ಇರಿಸುತ್ತಿದ್ದ ಬಡವರು ಈಗ ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಮೆಟ್ಟಿಲೇರಲು ಹಿಂಜರಿಯುತ್ತಿದ್ದ ಬಡ ಜನತೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪರಿಸ್ಥಿತಿ ಬದಲಾಗಿದೆ, ಬಡವರ ನಡವಳಿಕೆಯಲ್ಲೂ ಬದಲಾವಣೆ ಕಾಣಬಹುದಾಗಿದೆ. ವೈದ್ಯಕೀಯ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಬಡವರೂ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಆಸ್ಪತ್ರೆಗಳು ಸರ್ಕಾರದಿಂದ ಧನ ಸಹಾಯ ಪಡೆಯುತ್ತಿವೆ. ಇವೆಲ್ಲಾ ತಂತ್ರಜ್ಞಾನದಿಂದಲೇ ಸಾಧ್ಯವಾಗಿದೆ.

ಸ್ನೇಹಿತರೇ,

ತಂತ್ರಜ್ಞಾನವನ್ನು ಬಳಸಿ ನಾವು ಆಯುಷ್ಮಾನ್ ಭಾರತ್ ಯೋಜನೆಯನ್ನು ಸಂಪೂರ್ಣ ಾರೋಗ್ಯ ರಕ್ಷಣೆಯ ಪ್ಯಾಕೆಜ್ ಆಗಿ ಅಭಿವೃದ್ಧಿ ಪಡೆಸುತ್ತಿದ್ದೇವೆ.

ಈ ಹಿಂದೆ, ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆಯ ಕುರಿತು ಹೆಚ್ಚು ಗಮನ ಹರಿಸಲಾಗಿರಲಿಲ್ಲ. ಪ್ರಾಥಮಿಕ ಆರೋಗ್ಯ ರಕ್ಷಣೆ ಎಂಬುದು ಕೇವಲ ತಲೆನೋವು, ಹೊಟ್ಟೆ ನೋವಿಗೆ ಮಾತ್ರ ಸೀಮಿತವಾಗಿತ್ತು ಮತ್ತು ತೃತೀಯ ಆರೋಗ್ಯ ರಕ್ಷಣೆ ವಿಭಿನ್ನ ದಾರಿಯಲ್ಲೇ ಸಾಗಿತ್ತು.

ಪ್ರಸ್ತುತ ದೇಶಾದ್ಯಂತ 1.5 ಲಕ್ಷ ಆರೋಗ್ಯ ರಕ್ಷಣಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಮತ್ತು ಇವುಗಳನ್ನು ತೃತೀಯ ವಿಭಾಗದ ಆರೋಗ್ಯ ರಕ್ಷಣಾ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ 21 ಸಾವಿರಕ್ಕೂ ಹೆಚ್ಚು ಇಂತಹ ಕೇಂದ್ರಗಳನ್ನು ಇಲ್ಲಿಯವರೆಗೆ ಸ್ಥಾಪಿಸಲಾಗಿದೆ.

ಇಷ್ಟು ಕಡಿಮೆ ಅವಧಿಯಲ್ಲಿ, 1.5 ಕೋಟಿಗಿಂತಲೂ ಹೆಚ್ಚು ರಕ್ತದೊತ್ತಡ ಹೊಂದಿದವರನ್ನು, 1.25 ಕೋಟಿ ಮಧುಮೇಹಿಗಳನ್ನು ಮತ್ತು 1.5 ಕೋಟಿಗಿಂತಲೂ ಹೆಚ್ಚು ಕ್ಯಾನ್ಸರ್ ರೋಗಿಗಳ, ರೋಗ ಪತ್ತೆಯನ್ನು ಈ ಕೇಂದ್ರಗಳಲ್ಲಿ ಮಾಡಲಾಗಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು.

ಈ ಹಿಂದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದು ಸಾಧ್ಯವಿರಲಿಲ್ಲ. ಪ್ರಸ್ತುತ, ಇಂತಹ ಕೇಸ್ ಗಳನ್ನು ಈ ಆರೋಗ್ಯ ಮತ್ತು ತಪಾಸಣಾ ಕೇಂದ್ರಗಳಿಂದ ಮುಂದಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ ಹಾಗೂ ಈ ದತ್ತಾಂಶ ಮತ್ತು ಮಾಹಿತಿಯನ್ನು ಆಧರಿಸಿ ಅತ್ಯಂತ ಶಿಘ್ರ ಗತಿಯಲ್ಲಿ ತೃತೀಯ ವಿಭಾಗದ ಆರೋಗ್ಯ ರಕ್ಷಣಾ ಜಾಲದಲ್ಲಿ ಚಿಕಿತ್ಸೆ ಸಾಧ್ಯವಾಗುತ್ತಿದೆ.

ಸ್ನೇಹಿತರೇ,

ತಂತ್ರಜ್ಞಾನ ಸೇತುವೆಯಂತಾದಾಗ, ಪಾರದರ್ಶಕತೆ ಮತ್ತು ನಿಗದಿತ ಸಮಯಕ್ಕೆ ಸರಿಯಾದ ವಿತರಣೆಗೂ ನಾವು ಪರಿಹಾರ ಕಂಡುಕೊಳ್ಳಬಹುದಾಗಿದೆ. ಭಾರತದಲ್ಲಿ ಬ್ರೋಕರ್ ಗಳು ಅಥವಾ ದಲ್ಲಾಳಿಗಳ ಪಾತ್ರದ ಕುರಿತು ನಿಮಗೆಲ್ಲಾ ಚೆನ್ನಾಗಿ ಗೊತ್ತು.

‘ದೇಶವನ್ನು ಸರ್ಕಾರ ಮುನ್ನಡಿಸುತ್ತದೆ; ಮತ್ತು ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಾರೆ’ ಎಂಬ ಮಾತು ನಿಯಮದಂತೆ ಒಪ್ಪಿಕೊಳ್ಳಲಾಗುತ್ತಿತ್ತು. ಏಕೆಂದರೆ, ವ್ಯವಸ್ಥೆ ಮತ್ತು ಜನರ ನಡುವೆ ಒಂದು ಕಂದಕವಿತ್ತು. ಜನನದಿಂದ ಮರಣದವರೆಗೆ, ಸಾಮಾನ್ಯ ನಾಗರಿಕ ಸುದಿರ್ಘವಾದಂತಹ ಪ್ರಮಾಣ ಪತ್ರದ ವ್ಯವಸ್ಥೆಯಲ್ಲಿ ಸಿಲುಕಿ ನಲುಗಿದ್ದ.

ಇಂದು ಸರ್ಕಾರಿ ಸೇವೆಗಳು, ಜನನದಿಂದ ಜೀವನದ ಪ್ರಮಾಣದ ಪತ್ರದವರೆಗೆ ಆನ್ ಲೈನ್ ನಲ್ಲಿ ಲಭ್ಯ. ಇಂದು ಸ್ವಯಂ ಪ್ರಮಾಣೀಕರಣ ದೇಶದ ಸಾಮಾನ್ಯ ನಡಾವಳಿಯಾಗುತ್ತಿದೆ. ಇಂದು ನಾವು ಸ್ವ ಪರಿಶೀಲನೆ, ಸ್ವ ಘೀಷಣೆ ಮತ್ತು ಸ್ವಯಂ ತೆರಿಗೆ ಪರಿಶೀಲನೆ ದಂತಹ ವ್ಯವಸ್ಥೆಗಳತ್ತ ದಾಪುಗಾಲಿಡುತ್ತಿದ್ದೇವೆ.

ಸ್ನೇಹಿತರೇ,

ಭಾರತದ ಅತಿ ದೊಡ್ಡ ಜಾಲ ಪೋಸ್ಟ್ ಪೇಮೆಂಟ್ ಬ್ಯಾಂಕ್ – ತಂತ್ರಜ್ಞಾನಸ ಪರಿಣಾಮಕಾರಿ ಬಳಕೆ ಹೇಗೆ ಸವಾಲುಗಳನ್ನು ಪರಿಣಾಮಕಾರಿ ಅವಕಾಶಗಳನ್ನಾಗಿ ಪರಿವರ್ತಿಸುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಮೊಬೈಲ್ ಮತ್ತು ಅಂತರ್ಜಾಲ ಪ್ರಸರಣ ಅತ್ಯಂತ ಹೆಚ್ಚಾದ್ದರಿಂದ ಭಾರತೀಯ ಅಂಚೆ ಸೇವೆ ಅಳಿವಿನ ಅಂಚಿಗೆ ಸರಿದಿತ್ತು. ಲಕ್ಷಾಂತರ ಜನರ ಉದ್ಯೋಗಗಳು ಆತಂಕದಲ್ಲಿದ್ದವು.

ಆದರೆ ಇಂದು, ತಂತ್ರಜ್ಞಾನದಿಂದಾಗಿ ಬ್ಯಾಂಕಿಂಗ್ ಸೇವೆಗಳು ಮತ್ತು ಡಿಜಿಟಲ್ ವಹಿವಾಟುಗಳನ್ನು ಮನೆಗಳಿಗೆ ತಲುಪಿಸುವ ಕೇಂದ್ರಗಳಾಗಿ ಅಂಚೆ ಕಛೇರಿಗಳು ಬದಲಾಗಿವೆ.

ಅದೇ ರೀತಿ, ಗ್ರಾಮಗಳಲ್ಲಿ ಆನ್ ಲೈನ್ ಸೇವೆಗಳನ್ನು ಒದಗಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಜಾಲವು ಈಗ ಸುಮಾರು 12 ಲಕ್ಷಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗಳನ್ನು ಕಲ್ಪಿಸುತ್ತಿವೆ.

ಸ್ನೇಹಿತರೇ,

ಔದ್ಯಮಿಕ ಸ್ಫೂರ್ತಿ ಮತ್ತು ಎಂ ಎಸ್ ಎಂ ಇ ಗಳಿಗೆ ಪುಷ್ಠಿ ನೀಡಿ, ಅವುಗಳನ್ನು ಪ್ರಮುಖ ಉದ್ಯೋಗ ಸೃಷ್ಠಿಸುವ ಕೇಂದ್ರಗಳನ್ನಾಗಿ ಪರಿವರ್ತಿಸುವ ಬಗ್ಗೆ, ಪುಸ್ತಕದಲ್ಲಿ ನೀಡಲಾದ ಸಲಹೆಗಳನ್ನು ನಾನು ಸಮಗ್ರವಾಗಿ ಒಪ್ಪಿಕೊಳ್ಳುತ್ತೇನೆ. ಇದರಲ್ಲಿ ಹುದುಗಿದಂತಹ ಲೋಪ-ದೋಷಗಳನ್ನು ತೆಗೆದುಹಾಕಲು ಇಲ್ಲಿ ನಾವು ತೀವ್ರವಾಗಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುತ್ತಿದ್ದೇವೆ

ನಿಮಗೆ ಸರ್ಕಾರಿ ಇ-ಮಾರ್ಕೆಟ್ ಬಗ್ಗೆ ತಿಳಿದಿದೆ. ಅಂದರೆ, ಸಾರ್ವಜನಿಕ ವ್ಯವಹಾರಕ್ಕಾಗಿ ಜಿಇಎಮ್. ಇದು ಸರ್ಕಾರದ ಬೆಡಿಕೆ ಮತ್ತು ಎಂ ಎಸ್ ಎಂ ಇ ಗಳ ಸರಬರಾಜು ವ್ಯವಸ್ಥೆಗೆ ಒಂದು ಸೇತುವೆ ಇದ್ದಂತೆ.

ಇದರ ಮೂಲಕ ಈ ವರ್ಷ 50,000 ಕೋಟಿ ರೂಪಾಯಿಗಳ ಖರಿದಿಯ ಗುರಿ ತಲುಪಿರುವುದರ ಮೂಲಕ ನಾವು ಈ ವ್ಯವಸ್ಥೆಯ ಯಶಸ್ಸನ್ನು ಅಂದಾಜಿಸಬಹುದಾಗಿದೆ.

ಸ್ನೇಹಿತರೇ,

ಇದೇ ರೀತಿ, ಸ್ಟಾರ್ಟ್–ಅಪ್ ಇಂಡಿಯಾ, ಸ್ಥಳಿಯ ಬೇಡಿಕೆ ಮತ್ತು ಸರಬರಾಜಿಗೆ ಸೇತುವೆಯಂತೆ ಮೇಕ್ ಇನ್ ಇಂಡಿಯಾ, ಸ್ಥಳೀಯ ಸರಬರಾಜು ಮತ್ತು ಜಾಗತಿಕ ಬೇಡಿಕೆಗೆ ಕಾರ್ಯ ನಿರ್ವಹಿಸುತ್ತಿವೆ.

ಈ ಪುಸ್ತಕದಲ್ಲಿ ನೀವು ಬೇಡಿಕೆ ಮತ್ತು ಸರಬರಾಜು ಸಮಸ್ಯೆಗಳ ಕುರಿತು ಬಹಳ ಸೂಕ್ಷ್ಮವಾಗಿ ವಿವರಿಸಿದ್ದೀರಿ. ಸ್ಟಾರ್ಟ್–ಅಪ್ ಇಂಡಿಯಾ ಸಹ ಇಂಥದ್ದೇ ಸಮಸ್ಯೆಗಳನ್ನು ನಿಭಾಯಿಸುತ್ತಿದೆ.

ಭಾರತದಲ್ಲಿಯ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು, ಹೊಸ ಆಲೋಚನೆಗಳ ಮೂಲಕ ಉದ್ಯಮಗಳನ್ನು ರೂಪಾಂತರಗೊಳಿಸುವ ಪ್ರಯತ್ನ ಇದಾಗಿದೆ. ಇದೇ ಕಾರಣಕ್ಕಾಗಿಯೇ, ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ಹೆಚ್ಚು ಸ್ಟಾರ್ಟ್-ಅಪ್ ಗಳು ಉದಯಿಸುತ್ತಿವೆ.

ಸ್ನೇಹಿತರೇ,

ಇವೆಲ್ಲದರ ನಡುವೆ, ತಂತ್ರಜ್ಞಾನ ಒಂದೇ ಎಲ್ಲಕ್ಕೂ ಪರಿಹಾರ ಎಂದಲ್ಲ. ಮಾನವ ಉದ್ದೇಶಗಳು ಅದರಲ್ಲೂ ಸಕಾರಾತ್ಮಕ ಉದ್ದೇಶಗಳು ಬಹಳ ಮುಖ್ಯ. ಇದೇ ನೀತಿ ಕೃತಕ ಜಾಣ್ಮೆಗೂ ಅನ್ವಯಿಸುತ್ತದೆ. ಕೃತಕ ಜಾಣ್ಮೆಯಿಂದಾಗುವ ಆಘಾತಗಳೇನು ಎಂಬ ಕುರಿತು ಚರ್ಚೆ ಸಲ್ಲದು ಅಥವಾ ಯಂತ್ರ ಮಾನವ, ಮಾನವನಿಗಿಂತ ಹೆಚ್ಚು ಬುದ್ಧಿಶಾಲಿಯಾಗಲು ಎಷ್ಟು ಸಮಯ ಬೇಕು ಎಂಬ ಬಗ್ಗೆ ಚರ್ಚೆ ಬೇಕಿಲ್ಲ.

ಇದರ ಬದಲಾಗಿ, ಕೃತಕ ಜಾಣ್ಮೆ ಮತ್ತು ಮಾನವ ಧ್ಯೇಯೋದ್ದೇಶಗಳ ಮಧ್ಯೆ ಹೇಗೆ ಸೇತುವೆ ನಿರ್ಮಿಸಬಹುದು ಮತ್ತು ಹೊಸ ಬೇಡಿಕೆಗಳಿಹೆ ಅನುಸಾರ ನಮ್ಮ ಕೌಶಲ್ಯಾಭಿವೃದ್ಧಿ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆಗಳಾಗ ಬೇಕು.

ಎ ಐ (ಕೃತಕ ಜಾಣ್ಮೆ) ಮತ್ತೊಂದು ಸುಧಾರಿತ ಪರಿಹಾರವಾಗಿ ಹೊರ ಹೊಮ್ಮಲಿ.

ಇನ್ನೂ ಹೇಳುವುದು ಸಾಕಷ್ಟಿದೆ, ಆದರೆಮ ಇತರರು ಪುಸ್ತಕವನ್ನು ಓದಲು ಸಮಯಾವಕಾಶ ಒದಗಿಸಿ ಬೇಕಿದೆ. ಮತ್ತೊಮ್ಮೆ ಈ ಅದ್ಭುತ ಪುಸ್ತಕ ಮತ್ತು ಅತ್ಯತ್ಭುತ ಪ್ರಯತ್ನಕ್ಕೆ ಅನಂತ ಅನಂತ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

ಧನ್ಯವಾದಗಳು!

******