ಪಿಎಂಇಂಡಿಯಾ
ಬ್ರಿಟನ್ 2020 ರ ಜನವರಿ 31 ರಂದು ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ್ದರಿಂದಾಗಿ ಸೆಬಿ ಮತ್ತು ಹಣಕಾಸು ನಡವಳಿಕೆ ಪ್ರಾಧಿಕಾರ (ಎಫ್‌ಸಿಎ) ನಡುವೆ ಸಹಿ ಹಾಕಿದ ಪರಿಷ್ಕರಿಸಿದ ಪರ್ಯಾಯ ಹೂಡಿಕೆ ನಿಧಿ ವ್ಯವಸ್ಥಾಪಕರ ನಿರ್ದೇಶನ (ಎಐಎಫ್‌ಎಂಡಿ) ಒಪ್ಪಂದಕ್ಕೆ ಸಹಿ ಹಾಕುವ ಸೆಕ್ಯುರಿಟೀಸ್ & ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ದ ಪ್ರಸ್ತಾವನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಂಗೀಕರಿಸಿದೆ.
ಪ್ರಮುಖ ಪರಿಣಾಮ
ಬ್ರಿಟನ್ ಜನವರಿ 31, 2020 ರಂದು ಯೂರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿತು. ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸುವ ದಿನಾಂಕದ ಮೊದಲು ತಿದ್ದುಪಡಿ ಮಾಡಿದ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಯಾವುದೇ ಪರಿವರ್ತನಾ ಕ್ರಮಗಳು ಲಭ್ಯವಿರುವುದಿಲ್ಲ ಎಂದು ಬ್ರಿಟನ್ ನ ಎಫ್‌ಸಿಎ ಸೆಬಿಗೆ ತಿಳಿಸಿತ್ತು ಮತ್ತು ನವೀಕರಿಸಿದ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವಂತೆ ಸೆಬಿಗೆ ವಿನಂತಿಸಿತ್ತು. ಈ ಪ್ರಸ್ತಾಪವು ಭಾರತದಲ್ಲಿ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಹಿನ್ನೆಲೆ
ಯುರೋಪಿಯನ್ ಯೂನಿಯನ್ ಪರ್ಯಾಯ ಹೂಡಿಕೆ ನಿಧಿ ವ್ಯವಸ್ಥಾಪಕರ ನಿರ್ದೇಶನ (ಎಐಎಫ್‌ಎಂಡಿ) ಅಡಿಯಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಸೇರಿಲ್ಲದ ಆಡಳಿತಗಳ ನಡುವೆ ಮೇಲ್ವಿಚಾರಣಾ ಸಹಕಾರ ವ್ಯವಸ್ಥೆಗಳನ್ನು ಸ್ಥಾಪಿಸುವ ಅವಶ್ಯಕತೆಗೆ ಅನುಗುಣವಾಗಿ, ಬ್ರಿಟನ್ ನ ಹಣಕಾಸು ನಡವಳಿಕೆ ಪ್ರಾಧಿಕಾರ (ಎಫ್‌ಸಿಎ) ಸೇರಿದಂತೆ ಯುರೋಪಿಯನ್ ಒಕ್ಕೂಟ/ ಯುರೋಪಿಯನ್ ಎಕನಾಮಿಕ್ ಪ್ರದೇಶದ 27 ಸದಸ್ಯ ರಾಷ್ಟ್ರಗಳ ಸೆಕ್ಯುರಿಟಿ ರೆಗ್ಯುಲೇಟರ್ಗಳೊಂದಿಗೆ ಸೆಬಿಯು ಜುಲೈ 28, 2014 ರಂದು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತು. ಬ್ರಿಟನ್ ಯುರೋಪಿಯನ್ ಒಕ್ಕೂಟದಿಮದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಫ್‌ಸಿಎ ೀ ವಿಷಯವನ್ನುಸೆಬಿಯ ಗಮನಕ್ಕೆ ತಂದಿತು, ಸೆಬಿ ಮತ್ತು ಎಫ್‌ಸಿಎ ನಡುವೆ ಎಐಎಫ್‌ಎಂಡಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಒಪ್ಪಂದವು ಪ್ರಸ್ತುತ ಯೂರೋಪಿಯನ್ ಒಕ್ಕೂಟದ ಕಾನೂನಿನ ಮೇಲೆ ನಿಂತಿದೆ, ಇನ್ನು ಮುಂದೆ ನೇರವಾಗಿ ಯುಕೆ ಗೆ ಇದು ಅನ್ವಯಿಸುವುದಿಲ್ಲ, ಆದ್ದರಿಂದ, ಅದನ್ನು ಸೂಕ್ತವಾಗಿ ಮಾರ್ಪಡಿಸುವ ಮೂಲಕ ಮತ್ತು ಸಂಬಂಧಿತ ಬ್ರಿಟನ್ ಕಾನೂನಿನೊಂದಿಗೆ ಬದಲಿಸುವ ಮೂಲಕ.ಎಐಎಫ್‌ಎಂಡಿ ಒಪ್ಪಂದವನ್ನು ತಿದ್ದುಪಡಿ ಮಾಡಿದ ನಂತರ ಪರಿಷ್ಕರಿಸಿದ ಒಪ್ಪಂದಕ್ಕೆ ಸಹಿ ಹಾಕುವಂತೆ ಸೂಚಿಸಿತ್ತು.
**********