Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷದ ಸಂದರ್ಭದಲ್ಲಿ ಅದರಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರು ಮತ್ತು ಮಹನೀಯರಿಗೆ ನಮಿಸಿದ ಪ್ರಧಾನಮಂತ್ರಿ; 2022ರ ಹೊತ್ತಿಗೆ ‘ನವ ಭಾರತ’ ನಿರ್ಮಾಣಕ್ಕೆ ಸಂಕಲ್ಪ ಮಾಡಲು ಜನತೆಗೆ ಮನವಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷದ ಸಂದರ್ಭದಲ್ಲಿ ಅದರಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರು ಮತ್ತು ಮಹನೀಯರಿಗೆ ನಮಿಸಿದ್ದಾರೆ. 2022ರ ಹೊತ್ತಿಗೆ ‘ನವ ಭಾರತ’ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆಯೂ ಪ್ರಧಾನಮಂತ್ರಿಯವರು ಜನತೆಗೆ ಮನವಿ ಮಾಡಿದ್ದಾರೆ.

“ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಗೆ 75ನೇ ವಾರ್ಷಿಕೋತ್ಸವದ ಐತಿಹಾಸಿಕ ಸಂದರ್ಭದಲ್ಲಿ, ಆ ಚಳವಳಿಯಲ್ಲಿ ಭಾಗಿಯಾದ ಎಲ್ಲ ಮಹಿಳೆಯರು ಮತ್ತು ಮಹನೀಯರಿಗೆ ನಾವು ವಂದಿಸುತ್ತೇವೆ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಅವರ ನಾಯಕತ್ವದಲ್ಲಿ, ಇಡೀ ದೇಶ ಸ್ವಾತಂತ್ರ್ಯ ಗಳಿಸಲು ಒಗ್ಗೂಡಿತ್ತು.

1942ರಲ್ಲಿ ವಸಾಹತುಶಾಹಿಯಿಂದ ದೇಶವನ್ನು ಮುಕ್ತಗೊಳಿಸುವುದು ಅಗತ್ಯವಾಗಿತ್ತು. ಇಂದು 75 ವರ್ಷಗಳ ಬಳಿಕ ವಿಷಯಗಳು ಭಿನ್ನವಾಗಿವೆ.

ನಾವು ಇಂದು 2022ರ ಹೊತ್ತಿಗೆ ಬಡತನ, ಕೊಳಕು, ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿವಾದ, ಕೋಮುವಾದ ಮುಕ್ತವಾದ ನವ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ.

ನಮ್ಮ ಸ್ವಾತಂತ್ರ್ಯ ಯೋಧರು ಹೆಮ್ಮೆ ಪಡುವಂಥ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಹೆಗಲಿಗೆ ಹೆಗಲು ಕೊಡೋಣ. #SankalpSeSiddhi”, ಎಂದು ಪ್ರಧಾನಿ ಹೇಳಿದ್ದಾರೆ..

****

AKT/AK