Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಯೋತ್ಪಾದನೆ ನಿಗ್ರಹ ಮತ್ತು ಸಂಘಟಿತ ಬಹುರಾಷ್ಟ್ರೀಯ ಅಪರಾಧ ತಡೆ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಯೋತ್ಪಾದನೆ ನಿಗ್ರಹ ಮತ್ತು ಸಂಘಟಿತ ಬಹುರಾಷ್ಟ್ರೀಯ ಅಪರಾಧ ತಡೆ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಪ್ರಸ್ತಾಪಿತ ತಿಳಿವಳಿಕೆ ಒಪ್ಪಂದವು, ಮಾಹಿತಿ, ತಜ್ಞತೆ, ಅನುಭವ ಮತ್ತು ಸಾಮರ್ಥ್ಯ ವರ್ಧನೆಯ ವಿನಿಮಯದ ಮೂಲಕ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನಿರ್ಮಿಸಲು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.

ಈ ತಿಳಿವಳಿಕೆ ಒಪ್ಪಂದವು ಗುರುತಿಸಲಾದ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಮಾಲೋಚನೆ ಅಗತ್ಯ ಇರುವ ವಿಚಾರಗಳನ್ನು ನಿರ್ವಹಿಸಲು ಸಮರ್ಥವಾದ ಚೌಕಟ್ಟನ್ನು ಒದಗಿಸುತ್ತದೆ.

ಪರಸ್ಪರ ಸಹಕಾರವು ಎರಡೂ ರಾಷ್ಟ್ರಗಳ ನಡುವೆ ಸಾಂಸ್ಥಿಕ ಮಾತುಕತೆಗೆ ಅವಕಾಶ ಕಲ್ಪಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಜಾರಿಗೆ ಬಂದರೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಬಹುರಾಷ್ಟ್ರೀಯ ಸಂಘಟಿತ ಅಪರಾಧ ತಡೆಗೆ ನೆರವಾಗುತ್ತದೆ.

*****

AKT/VBA/SH