ಪಿಎಂಇಂಡಿಯಾ
ನಿಂದನೆಗಳು ಎಂದಿಗೂ ಯಾವುದನ್ನೂ ಪರಿಹರಿಸುವುದಿಲ್ಲ ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡುವಂತೆ ಕರೆ ನೀಡಿದ್ದಾರೆ.
ಜಂತರ್ ಮಂತರ್ ನಲ್ಲಿನ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ತಮ್ಮ ವಿರುದ್ಧ ಮತ್ತು ತಮ್ಮ ದಿವಂಗತ ತಾಯಿಯ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದಕ್ಕೆ ದೇಶ ಮತ್ತು ಜಗತ್ತು ಸಾಕ್ಷಿಯಾಗಿದೆ ಎಂದಿದ್ದಾರೆ. ಅಂತಹ ನಡವಳಿಕೆಯ ಬಗ್ಗೆ ಸಮಾಜದ ಕೋಪವನ್ನು ಅರ್ಥಮಾಡಿಕೊಳ್ಳಬಹುದಾದರೂ, ಬಾಲ್ಯವು ತಪ್ಪುಗಳನ್ನು ಮಾಡುವ ಸಮಯವಾಗಿದೆ ಮತ್ತು ಕಲಿಯಲು ಮತ್ತು ಸುಧಾರಿಸಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಇಂತಹ ದಾರಿ ತಪ್ಪಿದ ಮಕ್ಕಳನ್ನು ಶಿಕ್ಷಿಸುವ, ನ್ಯಾಯಾಲಯಗಳಿಗೆ ಎಳೆದೊಯ್ಯುವ ಅಥವಾ ಸಾಮಾಜಿಕ ಕಿರುಕುಳಕ್ಕೆ ಒಳಪಡಿಸುವ ಬದಲು, ನಾವು ಅವರನ್ನು ಅಪ್ಪಿಕೊಳ್ಳಬೇಕು ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಅವರನ್ನು ಕ್ಷಮಿಸಲು ತಾವು ಬಯಸುವುದಾಗಿ ಹೇಳಿರುವ ಅವರು, ಸಮಾಜವು ಈ ಭಾವನೆಯನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಾಷ್ಟ್ರಕ್ಕಾಗಿ ಒಟ್ಟಾಗಿ ಮುನ್ನಡೆಯಲು, ತಪ್ಪುಗಳಿಂದ ಕಲಿಯಲು ಮತ್ತು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಯುವಕರಿಗೆ ಪ್ರಧಾನಿ ಕರೆ ನೀಡಿದ್ದಾರೆ. ದೇಶವು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ ಅವರು, ಪ್ರತಿಯೊಬ್ಬ ಯುವಕರೂ ಜೀವನದಲ್ಲಿ ಮುಂದುವರಿಯಬೇಕು ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಶ್ರೀ ಮೋದಿ ಒತ್ತಾಯಿಸಿದ್ದಾರೆ.
ಯುವಕರನ್ನು ಸರಿಯಾದ ಮಾರ್ಗದತ್ತ ಕೊಂಡೊಯ್ಯುವ ಬಗ್ಗೆ ವೀಡಿಯೊವನ್ನು ಹಂಚಿಕೊಂಡ ಶ್ರೀ ಮೋದಿ;
“ನಿಂದನೆಗಳು ಎಂದಿಗೂ ಏನನ್ನೂ ಪರಿಹರಿಸುವುದಿಲ್ಲ.
ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡೋಣ.
ನಾವು ಒಟ್ಟಾಗಿ ಕೆಲಸ ಮಾಡೋಣ.
ಭಾರತಕ್ಕಾಗಿ ಕೆಲಸ ಮಾಡೋಣ.”
*****
Abuses never solve anything.
— Narendra Modi (@narendramodi) July 31, 2026
Let’s guide the misguided.
Let’s work together.
Let’s work for Bharat. pic.twitter.com/yAePG60KYL