Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಲ್ಲಿ ಜಲ ಸಂರಕ್ಷಣೆಯ ರಾಷ್ಟ್ರೀಯ ಅಭಿಯಾನಕ್ಕಾಗಿ ಭಾರತ ಮತ್ತು ಇಸ್ರೇಲ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಜಲ ಸಂರಕ್ಷಣೆ ಕುರಿತ ರಾಷ್ಟ್ರೀಯ ಅಭಿಯಾನಕ್ಕಾಗಿ ಭಾರತ ಮತ್ತು ಇಸ್ರೇಲ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಇದು ದೇಶದಲ್ಲಿ  ಮುಂದಿನ ಪೀಳಿಗೆಗಾಗಿ ಜಲ ಸಂರಕ್ಷಿಸಲು ಸಹಕಾರಿಯಾಗಲಿದೆ. 

ಭಾರತದಲ್ಲಿ ರಾಷ್ಟ್ರೀಯ ಜಲ ಸಂರಕ್ಷಣೆ ಅಭಿಯಾನವನ್ನು ವೃತ್ತಿಪರವಾಗಿ ರೂಪಿಸಿ, ಜಾರಿ ಮಾಡಲು ಮತ್ತು ಅದರ ಮೇಲೆ ನಿಗಾ ಇಡಲು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಹೆಚ್ಚಿಸಲು ಎರಡೂ ರಾಷ್ಟ್ರಗಳು ಶ್ರಮಿಸಲಿವೆ.

ಸಚಿವಾಲಯಗಳು ಈ ಕೆಳಗಿನ ಉದ್ದೇಶಗಳ ಸಾಧನೆಗಾಗಿ ಜಲ ಸಂರಕ್ಷಣೆ ಅಭಿಯಾನದಲ್ಲಿ ಜಂಟಿಯಾಗಿ ಶ್ರಮಿಸಲು ಸಮ್ಮತಿಸಿವೆ:

a.ಭಾರತದಲ್ಲಿ ಜಲ ಸಂರಕ್ಷಣೆಯನ್ನು ರಾಷ್ಟ್ರೀಯ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಲು

b. ದಿನನಿತ್ಯದ ಬದುಕಿನಲ್ಲಿ ನೀರು ಉಳಿಸಲು ಪ್ರತಿಯೊಬ್ಬ ನಾಗರಿಕರನ್ನೂ ಉತ್ತೇಜಿಸಲು

  1. ನೀರಿನ ಬಗ್ಗೆ ಜಾಗೃತಿ ಮೂಡಿಸಲು

    d. ನೀರಿನ ಪುನರ್ ಬಳಕೆ, ಮರು ಪೂರಣ ಮತ್ತು ಶುದ್ಧೀಕರಿಸಿ ಮರು ಬಳಸಲು ಉತ್ತೇಜನ
    e. ಜಲ ಸಂರಕ್ಷಣೆ ವಿಷಯಗಳಿಗೆ ಸಂಬಂಧಿಸಿದಂತೆಡಿಜಿಟಲ್ ಸಾಧನಗಳಾದ ಅಂತರ್ಜಾಲ ತಾಣಗಳು, ಮೊಬೈಲ್ ಅಪ್ಲಿಕೇಷನ್ ಗಳ ಅಭಿವೃದ್ಧಿ.

*****

SS/VBA/AK