Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಲ್ಲಿ ತೈಲ ತಾಳೆ ಪ್ರದೇಶ ಮತ್ತು ಉತ್ಪಾದನೆ ಹೆಚ್ಚಳದ ಕ್ರಮಗಳಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿತೈಲ ತಾಳೆ ಪ್ರದೇಶ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಕ್ರಮಗಳಿಗೆ ತನ್ನ ಅನುಮೋದನೆ ನೀಡಿದೆ. ಇದರಲ್ಲಿ ಈ ಕೆಳಗಿನವೂ ಸೇರಿವೆ:

  1.  ತೈಲ ತಾಳೆ ಬೇಸಾಯಕ್ಕೆ ಎನ್.ಎಂ.ಓಓಪಿ (ಎಣ್ಣೆ ಬೀಜ ಮತ್ತು ತೈಲ ತಾಳೆ ರಾಷ್ಟ್ರೀಯ ಅಭಿಯಾನ) ಅಡಿಯಲ್ಲಿ  ಭೂ ಪರಿಮಿತಿಯ ವಿನಾಯಿತಿ.

 

ತೈಲ ತಾಳೆಯತ್ತ ಸಾಂಸ್ಥಿಕ ಕಾಯಗಳನ್ನು ಆಕರ್ಷಿಸಲು ಮತ್ತು ಗರಿಷ್ಠ ಶೇಕಡ 100ರಷ್ಟು ಎಫ್.ಡಿ.ಐ. ಲಾಭಕ್ಕಾಗಿ ಎನ್.ಎಂ.ಓಓಪಿ ಅಡಿಯಲ್ಲಿ 25 ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶಕ್ಕೂ ನೆರವು ಒದಗಿಸಲು ನಿರ್ಬಂಧಗಳಿಗೆ ವಿನಾಯಿತಿ ನೀಡಲು ಸಂಪುಟದ ಅನುಮೋದನೆ.

 

  1.    ಎನ್.ಎಂ.ಓ.ಓ.ಪಿ. ಮಿನಿ ಮಿಷನ್–II ಅಡಿಯಲ್ಲಿ ನೆರವಿನ ನಿಯಮಾವಳಿಗಳ ಪರಿಷ್ಕರಣೆ

  

ಸಸಿ ನೆಡುವ ಸಾಧನಗಳು, ನಿರ್ವಹಣೆ ವೆಚ್ಚ, ಅಂತರ ಬೆಳೆ ವೆಚ್ಚ ಮತ್ತು ತಾಳೆ ತೋಟ ಆಕರ್ಷಕವಾಗಿ ಮಾಡಲು ಕೊಳವೆಬಾವಿಗೆ ನೆರವು ನೀಡಲು ನಿಯಮಾವಳಿಗಳ ಪರಿಷ್ಕಾರಕ್ಕೂ ಸಂಪುಟದ ಅನುಮೋದನೆ.

 

ಈ ಕ್ರಮಗಳು ಕೆಳಗಿನ ಫಲಿತಾಂಶ ನೀಡುತ್ತವೆ:

 

  ಸಾಂಸ್ಥಿಕ ಕಾಯಗಳಿಗೆ ದೊಡ್ಡ ಪ್ರಮಾಣದಲ್ಲಿತೈಲ ತಾಳೆ ತೋಟಗಾರಿಕೆಗೆ ಉತ್ತೇಜನ ನೀಡಲು ಮತ್ತು ವ್ಯರ್ಥ ಭೂಮಿಯನ್ನು ಬಳಕೆ ಮಾಡಿಕೊಳ್ಳಲು. ಎನ್.ಎಂ.ಓ.ಓ.ಪಿ. ಅಡಿಯಲ್ಲಿ ನಿರ್ಬಂಧಗಳಿಗೆ ವಿನಾಯಿತಿ ನೀಡುವ ಮೂಲಕ ಖಾಸಗಿ ಉದ್ದಿಮೆದಾರರಿಗೆ /ಸಹಕಾರಿ  ಕಾಯಗಳು/ಜಂಟಿ ಸಹಭಾಗಿತ್ವಗಳು ತೈಲ ತಾಳೆ ತೋಟಗಾರಿಕೆಗೆ ಆಸಕ್ತಿ ತೋರುತ್ತವೆ ಮತ್ತು ಎನ್.ಎಂ.ಓ.ಓ.ಪಿ. ಬೆಂಬಲ ಪಡೆದುಕೊಳ್ಳುತ್ತವೆ.

       

         ದೊಡ್ಡ ಮಟ್ಟದಲ್ಲಿ ತೈಲ ತಾಳೆ ತೋಟಗಾರಿಕೆಗಾಗಿ ರೈತರಿಗೆ ಉತ್ತೇಜನ ನೀಡಲು. ದರ ನಿಯಮಾವಳಿಗಳನ್ನು ಪರಿಷ್ಕರಿಸುವುದರಿಂದ ರೈತರನ್ನು ತೈಲ ತಾಳೆ ತೋಟಗಾರಿಕೆಗೆ ಪ್ರೇರೇಪಿಸಬಹುದಾಗಿದೆ.

ರಾಜ್ಯ / ಸಂಸ್ಥೆಗಳವಾರ್ಷಿಕ ಕ್ರಿಯಾ ಯೋಜನೆ (ಎ.ಎ.ಪಿ.)ಯನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಪರಿಷ್ಕೃತ ದರ ನಿಯಮಾವಳಿಯಂತೆ ಅನುಮೋದನೆ ನೀಡುತ್ತದೆ. ಖಾಸಗಿ ಉದ್ದಿಮೆಗಳು / ಸಹಕಾರಿ ಕಾಯಗಳು / ಜಂಟಿ ಸಹಭಾಗಿತ್ವಗಳನ್ನು ಆಯಾ ರಾಜ್ಯ ಸರ್ಕಾರಗಳು ತೈಲ ತಾಳೆ ತೋಟಗಾರಿಕೆಗೆ ಆಹ್ವಾನಿಸುತ್ತವೆ. 

ಪ್ರಸ್ತುತ, ಈ ಕಾರ್ಯಕ್ರಮವನ್ನು 12 ರಾಜ್ಯಗಳಲ್ಲಿ ಅಂದರೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಿಜೋರಾಮ್, ಒಡಿಶಾ, ಕೇರಳ, ತೆಲಂಗಾಣ, ಛತ್ತೀಸಗಢ, ಗುಜರಾತ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಅಸ್ಸಾಂ ಅನುಷ್ಠಾನಗೊಳಿಸಿವೆ. 12 ರಾಜ್ಯಗಳಸುಮಾರು 133 ಜಿಲ್ಲೆಗಳು ತೈಲ ತಾಳೆ ತೋಟಗಾರಿಕೆ ಅಡಿಯಲ್ಲಿವೆ, ಆದಾಗ್ಯೂ ತೈಲ ತಾಳೆಯ ಸಾಮರ್ಥವಿರುವ ಎಲ್ಲ ರಾಜ್ಯಗಳೂ ಎನ್.ಎಂ.ಓ.ಓ.ಪಿ. ಅಡಿಯಲ್ಲಿ ಸೇರಿವೆ.

ಪ್ರದೇಶದ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ಮತ್ತು ಸಬ್ಸಿಡಿ ನಿಯಮಗಲನ್ನು ಹೆಚ್ಚಿಸುವುದರಿಂದ ಸ್ವಲ್ಪ ಆರ್ಥಿಕ ಹೊರೆ ಬೀಳುತ್ತದೆ, ಆದರೆ, ಅದನ್ನು ಎನ್.ಎಂ.ಓ.ಓ.ಪಿ. ನಿಧಿಯಿಂದ ಹೊಂದಿಸಲಾಗುತ್ತದೆ. ಹೀಗಾಗಿ ಯಾವುದೇ ಹೆಚ್ಚುವರಿ ನಿಧಿಯ ಅಗತ್ಯ ಬೀಳುವುದಿಲ್ಲ.

12ನೇ ಪಂಚವಾರ್ಷಿಕ ಯೋಜನೆಗಾಗಿ ವರ್ಷವಾರು ಭೌತಿಕ ಮತ್ತು ಹಣಕಾಸು ಪ್ರಗತಿಯನ್ನು ಈ ಕೆಳಗೆ ನೀಡಲಾಗಿದೆ:

 

ಗುರಿ 

ಸಾಧನೆ

 

ಹಂಚಿಕೆಯ ಬಿಡುಗಡೆ

 

2012-13

 

ಐಎಸ್.ಓ.ಪಿ.ಓ.ಎಂ ಮತ್ತು ಓಪಿಎಇ 

49932

 

26300

 

22705.74

 

6412.62

 

2013-14

 

ಐಎಸ್.ಓ.ಪಿ.ಓ.ಎಂ ಮತ್ತು ಓಪಿಎಇ  

41347

23183

 

19776.19

 

11849.09

 

2014-15

 

ಓನ್.ಎಂ.ಓ.ಓ.ಪಿ.

 

28146

 

17143

 

7290.58

 

4112.47

 

2015-16

 

ಓನ್.ಎಂ.ಓ.ಓ.ಪಿ.

 

27337

 

14425

 

6683.80

 

3823.49

 

2016-17*

 

ಓನ್.ಎಂ.ಓ.ಓ.ಪಿ.

 

30061

 

9968

 

8038.68

 

4241.57

 

ವರ್ಷ
 
ಯೋಜನೆಯ ಹೆಸರು
 
ತೈಲ ತಾಳೆ ಪ್ರದೇಶ ವಿಸ್ತರಣೆ (ಹೆಕ್ಟೇರ್)
 
ಮೊತ್ತ (ಲಕ್ಷಗಳಲ್ಲಿ)
 

 

*ಡಿಸೆಂಬರ್ 2016ರವರೆಗೆ

ಪ್ರಸ್ತುತ ತೈಲ ತಾಳೆ ಅಭಿವೃದ್ಧಿ ಕಾರ್ಯಕ್ರಮವನ್ನು ರೈತರ ವೈಯಕ್ತಿಕ ಜಮೀನಿನಲ್ಲಿ ಉತ್ತೇಜಿಸಲಾಗುತ್ತಿದೆ. ಖಾಸಗಿ ಉದ್ದಿಮೆಗಳು/ಸಹಕಾರಿ ಕಾಯಗಳು/ಜಂಟಿ ಸಹಭಾಗಿತ್ವಗಳಿಗೆ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಮಾಡಲು ನೇರವಾಗಿ ನೆರವು ಒದಗಿಸುವ ಅವಕಾಶ ಇರುವುದಿಲ್ಲ. ತೈಲ ತಾಳೆ ಸಾಗುವಳಿಗಾಗಿ ತೈಲ ತಾಳೆ ಬೆಳೆಯುವ ರಾಜ್ಯಗಳಲ್ಲಿ ಬಂಜರು ಭೂಮಿ/ಕೆಳದರ್ಜೆಯ ಭೂಮಿ/ಕೃಷಿ ಭೂಮಿಯನ್ನು ಗುತ್ತಿಗೆ/ಬಾಡಿಗೆಯ ಮೇಲೆ ನೀಡಬಹುದಾಗಿದೆ ಅಥವಾ ಖಾಸಗಿ ಉದ್ದಮೆದಾರರು/ಸಹಕಾರಿ ಕಾಯಗಳು/ಜಂಟಿ ಸಹಭಾಗಿತ್ವಗಳು ಖರೀದಿಸಬಹುದಾಗಿದೆ. ಆದಾಗ್ಯೂ ಎನ್.ಎಂ.ಓ.ಓ.ಪಿ. ಅಡಿಯಲ್ಲಿ ನೀಲಾಗುವ ನೆರವು 25 ಹೆಕ್ಟೇರ್ ಗೆ ಮಾತ್ರ ಲಭಿಸುತ್ತದೆ. ಹೀಗಾಗಿ, ಸಾಂಸ್ಥಿಕ ಕಾಯಗಳನ್ನು ತೈಲ  ತಾಳೆಯತ್ತ ಆಕರ್ಷಿಸಲು ಮತ್ತು 100ರಷ್ಟು ಎಫ್.ಡಿ.ಐ. ಗರಿಷ್ಠ ಲಾಭ ಪಡೆಯಲು ಎನ್.ಎಂ.ಓ.ಓ.ಪಿ. ಅಡಿಯಲ್ಲಿ ಭೂಪರಿಮಿತಿ ನಿರ್ಬಂಧ ಸಡಿಲಗೊಳಿಸುವ ಅಗತ್ಯವಿದೆ. ದೇಶದಲ್ಲಿ ತೈಲ ತಾಳೆ ಸಾಗವಳಿಯನ್ನುಉತ್ತೇಜಿಸಲು ವೈಯಕ್ತಿಕ ಕೃಷಿ, ಗುತ್ತಿಗೆ ಕೃಷಿ ಮತ್ತು ಕ್ಯಾಪ್ಟೀವ್ ಪ್ಲಾಂಟೇಷನ್ (ಭೂಪರಿಮಿತಿಯ ನಿರ್ಬಂಧ ಸಡಿಲ ಮಾಡುವ ಮೂಲಕ) ಮಾತ್ರ ಮಾಡಬಹುದಾಗಿದೆ.

ವಿವಿಧ ರೀತಿಯ ನೆರವಿನ ನಿಯಮಗಳನ್ನು ಎನ್.ಎಂ.ಓ.ಓ.ಪಿ. ಕಾರ್ಯಕ್ರಮ ರೂಪಿಸುವ ಸಮಯದಲ್ಲಿರುವ ದರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ತೋಟಗಾರಿಕೆ ಸಲಕರಣೆಗಳು, ಗುಂಡಿ ತೋಡುವುದು, ಸಸಿ ನೆಡುವುದು, ಗೊಬ್ಬರ ಹಾಕುವುದು, ನೀರಾವರಿ ಮತ್ತು ಯಾವುದೇ ಆದಾಯ ಇಲ್ಲದೆ ನಾಲ್ಕು ವರ್ಷಗಳವರೆಗೆ ತೋಟದ ನಿರ್ವಹಣೆಯಿಂದ ರೈತರು ಅದರಲ್ಲೂ ಸಣ್ಣ ಮತ್ತು ಅಂಚಿನಲ್ಲಿರುವ ರೈತರು ತೈಲ ತಾಳೆ ಬೆಳೆಯುವುದರಿಂದ ನಿರಾಸಕ್ತರಾಗಿದ್ದಾರೆ. ಈಶಾನ್ಯ ರಾಜ್ಯಗಳ ಹೊರತಾಗಿ, ಬೆಟ್ಟಪ್ರದೇಶಗಳಲ್ಲಿ ತೈಲ ತಾಳೆಯ ಉತ್ತಮ ಸಾಮರ್ಥ್ಯ ಇರುವ ಕಡೆ ಹೆಚ್ಚುವರಿ ಹೂಡಿಕೆಯ ಅಗತ್ಯವಿದೆ.

 

ಹಿನ್ನೆಲೆ:

ಖಾದ್ಯ ತೈಲವು ಗೃಹ ಬಳಕೆಯ ಆಹಾರ ಬುಟ್ಟಿಯಲ್ಲಿ ಮಹತ್ವದ ಅಂಶವಾಗಿದೆ. ದೇಶದಲ್ಲಿನ ಒಟ್ಟು ಖಾದ್ಯ ತೈಲ ಉತ್ಪಾದನೆ ಸುಮಾರು 9 ದಶಲಕ್ಷ ಮೆಟ್ರಿಕ್ ಟನ್. ಆದರೆ ದೇಶೀಯ ಅಗತ್ಯ ಇರುವುದು 25 ದಶಲಕ್ಷ ಟನ್. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಸರಿದೂಗಿಸಲು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು 2015-16 (Prov.)ನಲ್ಲಿ ಸುಮಾರು 68 ಸಾವಿರ ಕೋಟಿ ರೂಪಾಯಿಗಳಾಗಿತ್ತು. ತಾಳೆ ಎಣ್ಣೆಯು ತರಕಾರಿ ಎಣ್ಣೆಯ ಆಮದಿನಲ್ಲಿ ಶೇಕಡ 70ರಷ್ಟು ಕೊಡುಗೆಯಾಗಿತ್ತು ಮತ್ತು ಇದು ಪ್ರತಿ ಹೆಕ್ಟೇರ್ ಗೆ ಹೆಚ್ಚಿನ ಉತ್ಪಾದನೆ ಮಾಡುವ ಕಾರಣ ಅಗ್ಗದ ದರದಲ್ಲಿ ಸಿಗುವ ತೈಲವಾಗಿದೆ.

ತೈಲ ತಾಳೆ ಪ್ರತಿ ಹೆಕ್ಟೇರ್ ನಲ್ಲಿ ತರಕಾರಿ ತೈಲದ ವಿಚಾರದಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ ವಿಶ್ವದ ಅತ್ಯಂತ ಸಮರ್ಥ ಬೆಳೆಯಾಗಿದೆ ಮತ್ತು ಇದು ವಿಶ್ವದ ಅತಿ ದೊಡ್ಡ ತರಕಾರಿ ತೈಲದ ಮೂಲವಾಗಿದೆ. ಮಲೇಷಿಯಾ, ಇಂಡೋನೇ,ಯ, ನೈಜೀರಿಯಾ, ಥಾಯ್ ಲ್ಯಾಂಡ್ ಮತ್ತು ಕೊಲಂಬಿಯಾಗಳು ಪ್ರಮುಖ ತಾಳೆ ಎಣ್ಣೆ ಉತ್ಪಾದನೆ ಮಾಡುವ ರಾಷ್ಟ್ರಗಳಾಗಿವೆ. ರೇಪ್ ಸೀಡ್ ನಿಂದ ಪ್ರತಿ ಹೆಕ್ಟೇರ್ ಗೆ ಅತಿ ಹೆಚ್ಚು 1.3 ಟನ್ ಇಳುವರಿ ಬಂದರೆ ಅದಕ್ಕೆ ವಿರುದ್ಧವಾಗಿ  ಸರಾಸರಿ ಪ್ರತಿ ಹೆಕ್ಟೇಬಕ್ ಗೆ ತೈಲ ತಾಳೆ  4-5 ಟನ್ ದಾಖಲೆಯ ಇಳುವರಿ ನೀಡುತ್ತದೆ.

ಭಾರತ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ 1986-87ರಿಂದ ಮತ್ತು 2014-15ರಿಂದ ಎನ್.ಎಂ.ಓ.ಓ.ಪಿ. ಮೂಲಕ  ತೈಲ ತಾಳೆಯನ್ನು ಉತ್ತೇಜಿಸುತ್ತಿದೆ. ಎನ್.ಎಂ.ಓ.ಓ.ಪಿ. ಹೆಚ್ಚುವರಿಗಾಯಿ 1.25 ಲಕ್ಷ ಹೆಕ್ಟೇರ್ ಪ್ರದೇಶವನ್ನು 2016-17ರಲ್ಲಿ ತೈಲ ತಾಳೆ ಸಾಗುವಳಿಯಡಿ ತರಲು ಗುರಿ ಹೊಂದಿತ್ತು. ಈ ಅಭಿವೃದ್ಧಿಯ ಪ್ರಯತ್ನಗಳು ಫಲ ನೀಡಿದ್ದು, 1991-92ರಲ್ಲಿ 8585 ಹೆಕ್ಟೇರ್ ಇದ್ದ ತೈಲ ತಾಳೆ ಪ್ರದೇಶ 2015-16ರ ಹೊತ್ತಿಗೆ 3 ಲಕ್ಷ ಹೆಕ್ಟೇರ್ ಆಗಿದೆ. ಅದೇ ರೀತಿ ತಾಜಾ ಹಣ್ಣಿನ ಗೊಂಚಲ ಉತ್ಪಾದನೆ (ಎಫ್.ಎಫ್.ಬಿಗಳು) ಮತ್ತು ಕಚ್ಚಾ ತಾಳೆ ಎಣ್ಣೆ (ಸಿಪಿ.ಓ) ಅನುಕ್ರಮವಾಗಿ 21,233 ಟನ್ ಮತ್ತು 1,134 ಟನ್ (1992-1993)ಯಿಂದ 2014-15ರಲ್ಲಿ 11,50,000 ಟನ್ ಮತ್ತು 1,98,000 ಟನ್ ಗೆ ಏರಿಕೆ ಆಗಿದೆ.

 *****

AKT/VBA/SH