Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಲ್ಲಿ ಬಂಡವಾಳ ಮೂಲಸೌಕರ್ಯ ಕಾರ್ಯತಂತ್ರ ಸ್ಥಾಪನೆಗೆ ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಒಡಂಬಡಿಕೆಗೆ ಸಹಿ ಹಾಕಲು ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಭಾರತದಲ್ಲಿ ಬಂಡವಾಳ ಮೂಲಸೌಕರ್ಯ ವೃದ್ಧಿ ಕಾರ್ಯತಂತ್ರ ಸ್ಥಾಪನೆಗೆ ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಒಡಂಬಡಿಕೆಗೆ ಸಹಿ ಹಾಕಲು ಅನುಮೋದನೆ ನೀಡಿತು.

ಈ ಒಪ್ಪಂದ ದೇಶದಲ್ಲಿ ಮೂಲಸೌಕರ್ಯ ವಲಯದಲ್ಲಿ ಸೌದಿ ಅರೆಬಿಯಾದಿಂದ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಲ್ಲದೆ ಇದು ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಉತ್ತೇಜನ ನೀಡಲಿದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಸಣ್ಣ ಕೈಗಾರಿಕೆಗಳು/ ವಲಯ ಪ್ರಗತಿ ಸಾಧಿಸಲಿದೆ. ಇದರಿಂದಾಗಿ ಜಿಡಿಪಿ ಬೆಳವಣಿಗೆಯಾಗುವ ಜೊತೆಗೆ ಒಟ್ಟಾರೆ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ.