ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಸ್ತುತ ಭಾರತದಲ್ಲಿರುವ ವೀಸಾ ಆಡಳಿತದ ತರ್ಕಬದ್ಧಗೊಳಿಸುವಿಕೆ, ಸರಳೀಕರಣ ಮತ್ತು ಉದಾರೀಕರಣಕ್ಕೆ ಹಾಗೂ ಗೃಹ ವ್ಯವಹಾರಗಳ ಸಚಿವಾಲಯವು ವಿವಿಧ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿದ ತರುವಾಯ ಮತ್ತು ಗೃಹ ಸಚಿವರ ಅನುಮೋದನೆ ಬಳಿಕ ವೀಸಾ ನೀತಿಗೆ ತರಲು ನಿರ್ಧರಿಸಿರುವ ಬದಲಾವಣೆಗಳಿಗೆ ತನ್ನ ಅನುಮೋದನೆ ನೀಡಿದೆ.
ಈ ಅನುಮೋದನೆಯು ಪ್ರವಾಸೋದ್ಯಮ, ವಾಣಿಜ್ಯ ಮತ್ತು ವೈದ್ಯಕೀಯ ಉದ್ದೇಶಕ್ಕಾಗಿ ವಿದೇಶೀಯರ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಇದು ಆರ್ಥಿಕ ಪ್ರಗತಿ, ಪ್ರವಾಸೋದ್ಯಮ, ವೈದ್ಯಕೀಯ ಮೌಲ್ಯ ಪ್ರವಾಸ ಮತ್ತು ವಾಣಿಜ್ಯಕ್ಕಾಗಿ ಪ್ರವಾಸ ಮತ್ತು ಕೌಶಲ ಭಾರತ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ನಿರ್ಮಾಣಕ್ಕೆ ಹಾಗೂ ಕೇಂದ್ರ ಸರ್ಕಾರದ ಇತರ ಮಹತ್ವಾಕಾಂಕ್ಷೆಯ ಉಪಕ್ರಮಗಳ ಸೇವೆಗಳ ರಫ್ತಿನಿಂದ ಆದಾಯ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದು ಗಣನೀಯವಾಗಿ ಮೇಲೆ ಸೂಚಿಸಿದ ಕಾನೂನುಬದ್ಧ ಉದ್ದೇಶಕ್ಕಾಗಿ ವಿದೇಶಿಯರು ಭಾರತಕ್ಕೆ ಆಗಮಿಸುವುದನ್ನು ಸುಲಭ ಮಾಡುತ್ತದೆ.
AKT/VBA/SH