ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತದ ಅಭಿವೃದ್ಧಿ ಪಯಣವು ‘ನೀಲಿ ಕ್ರಾಂತಿ’ (ಸಾಗರ ಕ್ರಾಂತಿ)ಯನ್ನು ಮತ್ತೊಂದು ಯಶೋಗಾಥೆಯಾಗಿಸಿದೆ ಎಂದು ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಪ್ರತಿಪಾದಿಸಿದ್ದಾರೆ. ಭಾರತವು ತನ್ನಸಾಗರ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು ಈಗ ಕಡಲ ತೀರದಾಚೆಗೂ ಗಮನಹರಿಸುತ್ತಿದೆ. ಅಲ್ಲದೆ, ಸುಸ್ಥಿರ ಮೀನುಗಾರಿಕೆಯು ಕರಾವಳಿ ಸಮುದಾಯಗಳು, ಯುವಜನರು ಮತ್ತು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಜಿಸುತ್ತಿದ್ದು, ಈ ಮೂಲಕ ಕರಾವಳಿ ಭಾರತದ ಆರ್ಥಿಕ ಜೀವನವನ್ನು ಬಲಪಡಿಸುತ್ತಿದೆ ಎಂಬುದನ್ನು ಈ ಲೇಖನ ಪ್ರಸ್ತುತಪಡಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿ ಪಯಣವು ‘ನೀಲಿ ಕ್ರಾಂತಿ’ಯನ್ನು ಮತ್ತೊಂದು ಯಶೋಗಾಥೆಯನ್ನಾಗಿ ಪರಿವರ್ತಿಸುತ್ತಿದೆ ಎಂಬ ಉಪರಾಷ್ಟ್ರಪತಿ ಶ್ರೀ @CPR_VP ಅವರ ಈ ಲೇಖನವನ್ನು ತಪ್ಪದೇ ಓದಲೇಬೇಕು. ಕಡಲ ಸಂಪತ್ತಿನ ಅಗಾಧತೆಗೆ ತೆರೆದುಕೊಳ್ಳಲು ಭಾರತವು ಈಗ ತನ್ನ ಕಡಲ ಗಡಿಗಳಾಚೆಗೂ ದೃಷ್ಟಿ ಹಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಸುಸ್ಥಿರ ಮೀನುಗಾರಿಕೆಯು ಕರಾವಳಿ ಸಮುದಾಯಗಳು, ಯುವಜನರು ಮತ್ತು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಜಿಸುತ್ತಿದೆ. ಇದು ಕರಾವಳಿ ಭಾರತದ ಆರ್ಥಿಕ ಜೀವನವನ್ನೂ ಬಲಪಡಿಸುತ್ತಿದೆ.
*****
A must-read article by @VPIndia Thiru @CPR_VP, in which he writes that under PM @narendramodi's leadership, Bharat's growth story is making the Blue Revolution another success story.
— PMO India (@PMOIndia) September 17, 2026
He says India is now looking beyond its shores to unlock its marine wealth. Sustainable… pic.twitter.com/XyGGlkZWJ8