ಪಿಎಂಇಂಡಿಯಾ
ಸರ್ಬಿಯಾ ರಾಷ್ಟ್ರಾಧ್ಯಕ್ಷ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ವುಸಿಕ್ ವ್ಯಕ್ತಪಡಿಸಿದಂತೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ನಾಯಕತ್ವಕ್ಕೆ ನೀಡಲಾದ ಮನ್ನಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಾಗತಿಸಿದ್ದಾರೆ. ತಮ್ಮ ಸಂದೇಶದಲ್ಲಿ, ಭಾರತ ಕೃತಕ ಬುದ್ಧಿಮತ್ತೆ (ಎಐ) ಇಂಪ್ಯಾಕ್ಟ್ ಶೃಂಗಸಭೆಯು ಕೇವಲ ಸಮ್ಮೇಳನಕ್ಕಿಂತ ಹೆಚ್ಚಿನದಾಗಿದೆ – ಇದು ಕೃತಕ ಬುದ್ಧಿಮತ್ತೆಯ ಕುರಿತಾದ ಜಾಗತಿಕ ಸಂವಾದದ ಕೇಂದ್ರ ಸ್ಥಾನದಲ್ಲಿ ಭಾರತವನ್ನು ದೃಢವಾಗಿ ಇರಿಸುವ ನಿರ್ಣಾಯಕ ಕ್ಷಣವಾಗಿದೆ ಎಂದು ಸೆರ್ಬಿಯಾದ ಅಧ್ಯಕ್ಷರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.
ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿಯವರ ಕಾರ್ಯಾಲಯವು ಸಂದೇಶದಲ್ಲಿ ಹೀಗೆ ಹೇಳಿದೆ:
“ಭಾರತ ಕೃತಕ ಬುದ್ಧಿಮತ್ತೆ (ಎಐ) ಇಂಪ್ಯಾಕ್ಟ್ ಶೃಂಗಸಭೆಯು ಸಮ್ಮೇಳನಕ್ಕಿಂತ ಹೆಚ್ಚಿನದಾಗಿದೆ ಎಂದು ಸೆರ್ಬಿಯಾದ ರಾಷ್ಟ್ರಾಧ್ಯಕ್ಷ @predsednikrs ಬರೆದಿದ್ದಾರೆ. ಶೃಂಗಸಭೆಯು ಕೃತಕ ಬುದ್ಧಿಮತ್ತೆಯ ಕುರಿತಾದ ಜಾಗತಿಕ ಚರ್ಚೆಯ ಕೇಂದ್ರ ಸ್ಥಾನದಲ್ಲಿ ಭಾರತವನ್ನು ಹೇಗೆ ದೃಢವಾಗಿ ಇರಿಸುತ್ತದೆ ಎಂಬುದನ್ನು ಅವರು ಉತ್ತಮವಾಗಿ ವಿವರಿಸಿದ್ದಾರೆ.”
*****
President @predsednikrs of Serbia writes that the India AI Impact Summit is more than a conference. He elaborates how the Summit places India firmly at the centre of the global discourse on artificial intelligence. https://t.co/ap2lRU23Jg
— PMO India (@PMOIndia) February 17, 2026