Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಅಂಕಣಕಾರ, ಹಾಸ್ಯಲೇಖಕ ಮತ್ತು ನಾಟಕಕಾರ ಶ್ರೀ ತಾರಕ್ ಮೆಹ್ತಾ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಅಂಕಣಕಾರ, ಹಾಸ್ಯ ಲೇಖಕ ಮತ್ತು ನಾಟಕಕಾರ ಶ್ರೀ ತಾರಕ್ ಮೆಹ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಸುಪ್ರಸಿದ್ಧ ನಾಟಕಕಾರ ಮತ್ತು ಹಾಸ್ಯ ಲೇಖಕ ಶ್ರೀ. ತಾರಕ್ ಮೆಹ್ತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರು ಜೀವನ ಪೂರ್ತಿ ವ್ಯಂಗ್ಯ ಮತ್ತು ಲೇಖನಿ ಎರಡನ್ನೂ ಕೈಬಿಡಲಿಲ್ಲ.

ನನಗೆ ತಾರಕ್ ಮೆಹ್ತಾ ಅವರನ್ನು ಹಲವು ಬಾರಿ ಭೇಟಿ ಮಾಡುವ ಸೌಭಾಗ್ಯ ದೊರೆತಿತ್ತು. ಅವರಿಗೆ ಪದ್ಮಶ್ರೀ ಸನ್ಮಾನ ದೊರೆತಾಗ ಕೂಡ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು.

ಮೆಹ್ತಾ ಅವರ ಬರವಣಿಗೆಯಲ್ಲಿ ಭಾರತದ ವಿವಿಧತೆಯಲ್ಲಿ ಏಕತೆ ಪ್ರತಿಫಲಿಸುತ್ತದೆ. ಅವರ ಟಪ್ಪೂ ಸೇರಿದಂತೆ ಹಲವಾರು ಪಾತ್ರಗಳು ಹೃದಯದಲ್ಲಿ ನೆಲೆಸಿವೆ ” ಎಂದು ಪ್ರಧಾನಿ ತಿಳಿಸಿದ್ದಾರೆ.

*****