Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಅಂಚೆ ಮತ್ತುದೂರಸಂಪರ್ಕ ಲೆಕ್ಕಪತ್ರ ಹಾಗೂ ಹಣಕಾಸು ಸೇವೆಗಳ ಗುಂಪು “ಎ” ಕೇಡರ್ ಪರಾಮರ್ಶೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಅಂಚೆ ಮತ್ತು ದೂರಸಂಪರ್ಕ ಲೆಕ್ಕಪತ್ರ ಹಾಗೂ ಹಣಕಾಸು ಸೇವೆಗಳ (ಐಪಿ ಮತ್ತು ಟಿ.ಎ.ಎಫ್.ಎಸ್.)ನ ಪ್ರಥಮ ಕೇಡರ್ ಪರಾಮರ್ಶೆಗೆ ಈ ಕೆಳಗಿನ ಪ್ರಮುಖಾಂಶಗಳೊಂದಿಗೆ ತನ್ನ ಅನುಮೋದನೆ ನೀಡಿದೆ:

(ಎ) ಕೇಡರ್ ನ ಒಟ್ಟು ಬಲವನ್ನು 420ರಿಂದ 376ಕ್ಕೆ ಇಳಿಸುವುದು.

(ಬಿ) ಸಂವಹನ ಲೆಕ್ಕಪತ್ರದಲ್ಲಿ ಅತ್ಯುನ್ನತ ದರ್ಜೆಯ ಒಂದು ಕಂಟ್ರೋಲರ್ ಜನರಲ್ ಹುದ್ದೆಯ ಸೃಷ್ಟಿ (ಸಿಜಿಸಿಎ).

(ಸಿ) ಒಂದು ಹೆಚ್ಚುವರಿ ಎಚ್.ಎ.ಜಿ.+ಹಂತದ ಹುದ್ದೆಯ ಸೃಷ್ಟಿ, ಗ್ರೇಡ್ ಬಲವನ್ನು 2ಕ್ಕೆ ಏರಿಸುವುದು.

(ಡಿ)ಗ್ರೇಡ್ ಬಲವನ್ನು 6ರಿಂದ 8ಕ್ಕೆ ಹೆಚ್ಚಿಸಲು ಎರಡು ಹೆಚ್ಚುವರಿ ಎಚ್.ಎ.ಜಿ. ಹಂತದ ಹುದ್ದೆಗಳ ಸೃಷ್ಟಿ.

(ಇ) ಗ್ರೇಡ್ ಬಲವನ್ನು 37ರಿಂದ 55ಕ್ಕೆ ತೆಗೆದುಕೊಂಡು ಹೋಗಲು 18 ಹೆಚ್ಚುವರಿ ಎಸ್.ಎ.ಜಿ. ಹಂತದ ಹುದ್ದೆಗಳ ಸೃಷ್ಟಿ.

(ಎಫ್.) ಜೆಎಜಿ ಹಂತದ ಹುದ್ದೆಗಳನ್ನು 111ರಿಂದ 90ಕ್ಕೆ ಇಳಿಸುವುದು.

(ಜಿ) ಎಸ್.ಟಿ.ಎಸ್. ಹಂತದ ಹುದ್ದೆಗಳನ್ನು 198ರಿಂದ 86ಕ್ಕೆ ಇಳಿಸುವುದು.

(ಎಚ್)ಗ್ರೇಡ್ ಬಲವನ್ನು 67 ರಿಂದ 88ಕ್ಕೆ ಹೆಚ್ಚಿಸಲು 21 ಜೆಟಿಎಸ್ ಹಂತದ ಹುದ್ದೆಗಳ ಸೃಷ್ಟಿ.

(ಐ) ಮೀಸಲು ಕಾರ್ಯಾಚರಣೆಗಾಗಿ 46 ಹುದ್ದೆಗಳ ಸೃಷ್ಟಿ.

ಹಿನ್ನೆಲೆ:

ಭಾರತೀಯ ಅಂಚೆ ಮತ್ತುದೂರಸಂಪರ್ಕ ಲೆಕ್ಕಪತ್ರ ಹಾಗೂ ಹಣಕಾಸು ಸೇವೆಗಳ ಗುಂಪು “ಎ” ಅನ್ನು 1972ರಲ್ಲಿ ಸ್ಥಾಪಿಸಲಾಯಿತು ಮತ್ತು ಅದು ದೂರಸಂಪರ್ಕ ಇಲಾಖೆ (ಡಿ.ಓ.ಟಿ.) ಮತ್ತು ಅಂಚೆ ಇಲಾಖೆ (ಡಿ.ಓ.ಪಿ.) ಸೇವೆ ಮಾಡುತ್ತಿದೆ.

ದೂರಸಂಪರ್ಕ ಇಲಾಖೆಯಲ್ಲಿ, ಐಪಿ ಮತ್ತು ಟಿ.ಎ.ಎಫ್.ಎಸ್. ಪರವಾನಗಿ ಶುಲ್ಕ/ತರಂಗಾಂತರ ಬಳಕೆ ವೆಚ್ಚ, ತರಂಗಾಂತರ ಹರಾಜು, ಯು.ಎಸ್.ಓ. ಯೋಜನೆ ನಿಗಾ ಮತ್ತು ಸಬ್ಸಿಡಿ ನಿರ್ವಹಣೆ, ಬೊಕ್ಕಸ ನಿಯಂತ್ರಣ, ಆಯವ್ಯಯ, ಲೆಕ್ಕಪತ್ರ, ಪಿಂಚಣಿ ವಿತರಣೆ, ಆಂತರಿಕ ಲೆಕ್ಕಪರಿಶೋಧನೆ ಮತ್ತು ಹಣಕಾಸು ಸಲಹೆ ಕಾರ್ಯಗಳನ್ನು ನಿರ್ವಹಿಸುತ್ತದೆ. ಅಂಚೆ ಇಲಾಕೆಯಲ್ಲಿ ಐಪಿ ಮತ್ತು ಟಿ.ಎ.ಎಫ್.ಎಸ್.ಗೆ ಹಣಕಾಸು ಸಲಹೆ, ಆಯವ್ಯಯ, ದರ ಮತ್ತು ವೆಚ್ಚ, ಲೆಕ್ಕಪತ್ರ ಮತ್ತು ಆಂತರಿಕ ಲೆಕ್ಕಪರಿಶೋಧನೆಯ ಕಾರ್ಯ ವಹಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಂಚೆ ಇಲಾಖೆ ಮತ್ತು ದೂರಸಂಪರ್ಕ ಇಲಾಖೆಗಳಲ್ಲಿನ ಪಾತ್ರದಲ್ಲಿ ಒಂದು ಮಾದರಿಯ ಬದಲಾವಣೆ ಆಗಿದೆ. ಟೆಲಿಕಾಂ ವಲಯದಲ್ಲಿ, ದೂರಸಂಪರ್ಕ ಇಲಾಖೆಯ ಪಾತ್ರವು ಪ್ರಸಕ್ತ ವಿನ್ಯಾಸದಲ್ಲಿ ಪ್ರಾಥಮಿಕವಾಗಿ ಸೇವೆ ಒದಗಿಸುವ, ನಿಯಂತ್ರಕ ಮತ್ತು ನೀತಿ ನಿರೂಪಕವಾಗಿದ್ದು, ಇಲಾಖೆಯು ಪ್ರಾಥಮಿಕವಾಗಿ ನೀತಿ ನಿರೂಪಣೆ, ಪರವಾನಗಿ ಮತ್ತು ಜಾಗತಿಕ ಸೇವೆಯ ಕಟ್ಟುಪಾಡಿಗೆ ಹೊಣೆಗಾರನಾಗಿದೆ. ದೂರಸಂಪರ್ಕ ಇಲಾಖೆಯ ನಗದು ಸ್ವೀಕಾರವು ಪ್ರಾಥಮಿಕವಾಗಿ ಪರವಾನಗಿ ಶುಲ್ಕ, ತರಂಗಾಂತರ ಬಳಕೆ ವೆಚ್ಚ ಮತ್ತು ಭಾರತ ಸರ್ಕಾರಕ್ಕೆ ತೆರಿಗೆಯೇತರವಾದ ಅತಿ ದೊಡ್ಡ ಮೂಲವಾದ ತರಂಗಾಂತರ ಹರಾಜು ಮೌಲ್ಯ ಸ್ಥಾಪನೆಯಾಗಿದೆ.

ಅದೇ ರೀತಿ, ಇಲಾಖೆ ಒದಗಿಸುವ ಹಲವು ಅಂಚೆ ಇಲಾಖೆ ಸೇವೆಗಳಲ್ಲಿ ಕೂಡ ಪ್ರಮಾಣ ಮತ್ತು ಗುಣಮಟ್ಟದ ಬದಲಾವಣೆ ಆಗಿದೆ ಮತ್ತು ಇಲಾಖೆಯು ಚಿಲ್ಲರೆ ವ್ಯವಹಾರ, ಬ್ಯಾಂಕ್ ವ್ಯವಹಾರ, ವಿಮೆ, ಡಿಜಟಲೀಕರಣ ಕಾರ್ಯ ಇತ್ಯಾದಿ ಕೈಗೊಂಡಿದೆ. ಜೊತೆಗೆ ಎರಡೂ ಇಲಾಖೆಗಳಲ್ಲಿನ ಲೆಕ್ಕಪರಿಶೋಧನೆ ವ್ಯವಸ್ಥೆ ಬಲಗೊಳ್ಳಬೇಕಾದ ಅಗತ್ಯವಿದೆ.

ಈ ಎಲ್ಲ ಕಾರಣಗಳಿಂದಾಗಿ ಐಪಿ ಮತ್ತು ಟಿಎಎಫ್ಎಸ್ ಸ್ವರೂಪದ ಪರಾಮರ್ಶೆಯ ಅಗತ್ಯ ಕಂಡು ಬಂದಿತ್ತು.

AKT/VBA/SH