Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಕೃಷಿಯ ಪರಿವರ್ತನೆಯ ಕುರಿತು ಒಂದು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ಕೃಷಿಯ ಪರಿವರ್ತನೆಯ ಕುರಿತು ಶ್ರೀ ಅಶೋಕ್ ಗುಲಾಟಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಗುಜರಾತ್‌ನ ಕೃಷಿ ಪರಿವರ್ತನೆಯಿಂದ ಭಾರತೀಯ ಕೃಷಿಯ ವಿಸ್ತೃತ ಪರಿವರ್ತನೆಗೆ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಪಯಣವು ಹೇಗೆ ರೈತರು, ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಉತ್ತಮ ನೀರಾವರಿ, ವಿಶ್ವಾಸಾರ್ಹ ವಿದ್ಯುತ್, ಗ್ರಾಮೀಣ ರಸ್ತೆಗಳು, ತಂತ್ರಜ್ಞಾನ ಮತ್ತು ಮಾರುಕಟ್ಟೆ ಲಭ್ಯತೆ ಸಹಾಯ ಮಾಡಿದವು ಎಂಬುದನ್ನು ಈ ಲೇಖನವು ಎತ್ತಿ ತೋರಿಸುತ್ತದೆ.

ಶ್ರೀ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿ  ಹೀಗೆ ಮಾಡಿದ್ದಾರೆ;

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಅವರ 25 ವರ್ಷಗಳ ಪಯಣ, ಗುಜರಾತ್‌ನ ಕೃಷಿ ಪರಿವರ್ತನೆಯಿಂದ ಭಾರತೀಯ ಕೃಷಿಯ ವಿಸ್ತೃತ ಪರಿವರ್ತನೆಗೆ, ಉತ್ತಮ ನೀರಾವರಿ, ವಿಶ್ವಾಸಾರ್ಹ ವಿದ್ಯುತ್, ಗ್ರಾಮೀಣ ರಸ್ತೆಗಳು, ತಂತ್ರಜ್ಞಾನ ಮತ್ತು ಮಾರುಕಟ್ಟೆ ಲಭ್ಯತೆಯು ರೈತರ ಬೆಳೆಗಳ ಇಳುವರಿ ಮತ್ತು ಆದಾಯ ವೃದ್ಧಿಗೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ತೋರಿಸುತ್ತದೆ.

ರಾಷ್ಟ್ರ ಮಟ್ಟದಲ್ಲಿ ಈ ವಿಧಾನವು ರೈತರ ಬೆಂಬಲ, ಬೆಳೆ ವೈವಿಧ್ಯೀಕರಣ ಮತ್ತು ಉತ್ತಮ ಗ್ರಾಮೀಣ ಮೂಲಸೌಕರ್ಯವನ್ನು ಹೊಂದಲು ವಿಸ್ತರಣೆಗೆ ನೆರವಾಗಿದೆ.

ಭಾರತೀಯ ಕೃಷಿಯ ಪರಿವರ್ತನೆಯ ಕುರಿತು ಓದಲೇಬೇಕಾದ ಒಂದು ಲೇಖನ.

https://www.business-standard.com/opinion/columns/from-gujarat-s-agrarian-miracle-to-india-s-farm-transformation-126100601522_1.html

 

*****