Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ)ನ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪಠ್ಯ


ಮೊದಲಿಗೆ ನಾನು ಇಂತಹ ಅದ್ಭುತ ಮತ್ತು ಆಧುನಿಕ ಕಟ್ಟಡಕ್ಕಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಈ ಸಂಸ್ಥೆ 150 ವರ್ಷಗಳಷ್ಟು ಹಳೆಯದು, ಈ ಸಂಸ್ಥೆಯೇ ಒಂದು ಪುರಾತತ್ವಶಾಸ್ತ್ರದ ವಿಷಯ. ಕಳೆದ 150 ವರ್ಷಗಳಲ್ಲಿ ಇದು ತನ್ನದೇ ಆದ ವಿಭಿನ್ನ ರೀತಿಯಲ್ಲಿ ಬೆಳೆದಿದೆ ಮತ್ತು ವಿಸ್ತರಣೆಗೊಂಡಿದೆ. ಇದು ಅತ್ಯಂತ ಮಹತ್ವದ ಸಾಧನೆಗೈದಿದೆ. ನಿಮ್ಮಂತಹ ಸಂಸ್ಥೆಗೆ 150 ವರ್ಷಗಳ ಅವಧಿ ನಿಜಕ್ಕೂ ಅತ್ಯಂತ ದೀರ್ಘಾವಧಿಯದ್ದಾಗಿದೆ. 

 

 

 

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ – ಎಎಸ್ಐ ಬಳಿ ತನ್ನ 150 ವರ್ಷಗಳ ಹಿಂದಿನ ಇತಿಹಾಸದ ದಾಖಲೆಗಳು ಇವೆಯೋ ಇಲ್ಲವೋ ನನಗೆ ತಿಳಿದಿಲ್ಲ. ಒಂದು ವೇಳೆ ಆ ದಾಖಲೆಗಳು ಇಲ್ಲವಾಗಿದ್ದರೆ ಅವುಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಹಲವು ವರ್ಷಗಳಿಂದ ಹಲವಾರು ಮಂದಿ ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದರ ಆಧಾರದ ಮೇಲೆ ಇಡೀ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಇದಲ್ಲದೆ ವಿಸ್ತರಣೆ, ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಅದರಲ್ಲಾಗುತ್ತಿರುವ ಬದಲಾವಣೆಗಳ ಅಳವಡಿಕೆ, ಪ್ರಸ್ತುತ ಸಮಾಜದ ಮೇಲೆ ಇದು ಬೀರಲಿರುವ ಪರಿಣಾಮ ಮತ್ತು ವಿಶ್ವದಾದ್ಯಂತ ಈ ವಲಯದಲ್ಲಿ ಹೇಗೆ ಜನರನ್ನು ಆಕರ್ಷಿಸಬೇಕೆಂಬ ಮತ್ತಿತರ ಹಲವು ಅಂಶಗಳ ಬಗ್ಗೆ ಗಮನಹರಿಸುವ ಜರೂರಿದೆ. ಇಂದಿಗೂ ನಮ್ಮ ಪುರಾತತ್ವ ಕಲೆ ನಮ್ಮ ದೇಶದ ಒಳನೋಟವನ್ನು ಕಟ್ಟಿಕೊಟ್ಟು, ಜಗತ್ತಿನ ಹಿಂದಿನ ವಾಸ್ತವತೆಗಳನ್ನು ಮರು ನಿರ್ಮಿಸಲು ಸಹಕಾರಿಯಾಗಿದೆ. ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವಂತೆಯೇ ಮಾನವರ ಜೀವಕ್ಕೆ ಸಂಬಂಧಿಸಿದಂತೆ ಹಿಂದೆ ಇದ್ದ ದ್ವಂದ್ವ ಹೋರಾಟಗಳು ಇದೀಗ ಕೊನೆಯಾಗಿವೆ. ಸರಸ್ವತಿ ನದಿ ಅಸ್ಥಿತ್ವದಲ್ಲಿ ಇರಲೇ ಇಲ್ಲ ಎಂಬ ನಂಬಿಕೆ ಕೂಡ ಒಂದು ಬಗೆಯ ಅಭಿಪ್ರಾಯವಾಗಿದೆ. ಆದರೆ ಬಾಹ್ಯಾಕಾಶ ತಂತ್ರಜ್ಞಾನ ಅಂತಹ ಒಂದು ಅಭಿಪ್ರಾಯ ತಪ್ಪು ಎಂದು ಖಚಿತಪಡಿಸಿದೆ. ಆ ನದಿ ಕೇವಲ ಪೌರಾಣಿಕ ಕಟ್ಟುಕತೆಯಲ್ಲವೆಂದು ನಿರೂಪಿತವಾಗಿದೆ. ಅಲ್ಲದೆ ಆರ್ಯರ ಮೂಲದ ಬಗ್ಗೆಯೂ ಮತ್ತೊಂದು ಚರ್ಚೆ ನಡೆಯುತ್ತಿದೆ. ಕೆಲವು ಮಂದಿ ತಮ್ಮ ನೆಚ್ಚಿನ ವಿಷಯಗಳನ್ನು ಹೊಂದಿರುತ್ತಾರೆ. ಈ ಕ್ಷೇತ್ರ ಅತ್ಯಂತ ವಿಸ್ತಾರವಾದ ವಲಯವಾಗಿದೆ. ತಂತ್ರಜ್ಞಾನ ಪುರಾತತ್ವ ಕ್ಷೇತ್ರದ ನೆರವಿಗೆ ಬಂದಿದ್ದು ಮತ್ತು ಇದರಿಂದ ಹೊಸ ಬಗೆಯ ಚರ್ಚೆ ಮತ್ತು ಸಂವಾದಗಳು ಹುಟ್ಟಿಕೊಳ್ಳುತ್ತಿವೆ. 

 

 

 

ಈ ಶಿಲ್ಪಕಲಾ ಶಾಸನಗಳು ಮತ್ತು ಹಳೆಯ ಕಲಾಪ್ರಕಾರಗಳು ಮತ್ತು ಕಲ್ಲುಗಳು ಯಾರಿಗೂ ಗೊತ್ತಿಲ್ಲದಂತಹ ವಿಷಯವೇನಲ್ಲ ಎಂಬುದು ನನ್ನ ಭಾವನೆ. ಪ್ರತಿಯೊಂದು ಕಲ್ಲೂ ಸಹ ತನ್ನದೇ ಆದ ಇತಿಹಾಸವನ್ನು ಸಾರುತ್ತಿದೆ. ಪುರಾತತ್ವದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳು ತನ್ನದೇ ಆದ ಇತಿಹಾಸವನ್ನು ಹೇಳುತ್ತದೆ. ಪ್ರತಿಯೊಂದು ಪ್ರಾಚೀನ ವಸ್ತುಗಳು ಮನುಷ್ಯರ ಕಠಿಣ ಶ್ರಮ ಮತ್ತು ಅವರ ಕನಸುಗಳನ್ನು ಬಿಂಬಿಸುತ್ತದೆ. ಆದ್ದರಿಂದ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಕೆಲಸವನ್ನು ಮರುಭೂಮಿಯಂತಹ ನೆಲದಲ್ಲಿ ಆರಂಭಿಸುವುದರಿಂದ ಹಲವು ವರ್ಷಗಳ ಕಾಲ ಅದು ವಿಶ್ವದ ಗಮನ ಸೆಳೆಯುವುದಿಲ್ಲ. ಹೇಗೆ ವಿಜ್ಞಾನಿ ಸಂಪೂರ್ಣವಾಗಿ ತನ್ನ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡು ಪ್ರಯೋಗಾಲಯದ ಮೇಲೆ ಅವರ ಭವಿಷ್ಯ ನಿಂತಿರುತ್ತದೋ ಹಾಗೆಯೇ ಪುರಾತತ್ವ ಶಾಸ್ತ್ರಜ್ಞರೂ ಕೂಡ ವಿಶ್ವದೊಂದಿಗೆ ನಂಟಿಲ್ಲದೆ, ಬೆಟ್ಟ ಗುಡ್ಡಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿರುತ್ತಾರೆ. ಆ ಪ್ರಕ್ರಿಯೆಯಲ್ಲಿ ಹತ್ತು ಹನ್ನೆರಡು ವರ್ಷ ಕಳೆದಿರುವುದೂ ಸಹ ಅವರ ಅರಿವಿಗೆ ಬಂದಿರುವುದಿಲ್ಲ. ಮುಂದೆ ಒಂದು ದಿನ ಅವರು ಒಂದು ಮಹಾಪ್ರಬಂಧದೊಂದಿಗೆ ಬಂದಾಗ ಆ ಹೊಸ ವಿಷಯ ವಿಶ್ವದ ಗಮನಸೆಳೆಯುತ್ತದೆ. ಚಂಡೀಗಢಕ್ಕೆ ಹೊಂದಿಕೊಂಡಂತೆ ಒಂದು ಬೆಟ್ಟ-ಗುಡ್ಡವಿದೆ. ಆ ಬೆಟ್ಟದಲ್ಲಿ ಫ್ರಾನ್ಸ್ ನ ಕೆಲವು ಮಂದಿ ಹಾಗೂ ಜೀವವಿಜ್ಞಾನ ತಜ್ಞರು ವಿದೇಶ ಮತ್ತು ದೇಶದ ಪುರಾತತ್ವ ಶಾಸ್ತ್ರಜ್ಞರು ತಮ್ಮ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದಾರೆ. ಅವರು ವಿಶ್ವದ ಅತ್ಯಂತ ಪ್ರಾಚೀನ ಜೀವಿ-ಆರ್ಗಾನಿಸಮ್, ಒಂದು ಲಕ್ಷಕ್ಕೂ ಅಧಿಕ ವರ್ಷಗಳ ಹಿಂದೆ ಈ ಬೆಟ್ಟದಲ್ಲಿ ಕಂಡುಬಂದಿದೆ ಎಂಬ ಅಂಶವನ್ನು ಪತ್ತೆಹಚ್ಚಿದ್ದರು. ಫ್ರಾನ್ಸ್ ಅಧ್ಯಕ್ಷರು ತಮ್ಮ ದೇಶದ ಜನರು ಕೊಡುಗೆ ನೀಡಿರುವ ಆ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದ್ದರು. ನಾನು ಅವರನ್ನು ಅಲ್ಲಿಗೆ ಕರೆದೊಯ್ದಿದ್ದೆ. ಇನ್ನು ಚಿಕ್ಕದಾಗಿ ಹೇಳುವುದಾದರೆ ಈ ಬೆಳವಣಿಗೆಗಳು ನಮ್ಮೆಲ್ಲಾ ನಂಬಿಕೆಗಳನ್ನು ಮೀರಿಸುವಂತಹದು. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿ ಅತ್ಯಂತ ಭಿನ್ನವಾಗಿದ್ದು, ಅವರು ಹಲವು ಬಗೆಯಲ್ಲಿ ಯೋಚಿಸುವಂತೆ ಮಾಡುತ್ತಾರೆ.

 

 

 

ಕೆಲವೊಮ್ಮೆ ಇತಿಹಾಸಕ್ಕೆ ಸವಾಲೆಸೆಯುವ ಶಕ್ತಿ ಅಂತಹ ಕಲ್ಲಿನಿಂದ ಬರುತ್ತದೆ. ಮೊದಲಿಗೆ ಇದನ್ನು ಒಪ್ಪಲಾಗದು, ಆದರೆ ಈ ಸಂಗತಿಗಳಿಗೆ ನಾವು ಎಷ್ಟು ಒಗ್ಗಿ ಕೊಂಡಿರುತ್ತೇವೆ ಮತ್ತು ಅದು ಎಷ್ಟು ಜನಪ್ರಿಯವಾಗಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡು, ಅಗತ್ಯ ಪ್ರಾಮುಖ್ಯತೆ ನೀಡುವಲ್ಲಿ ವಿಫಲವಾಗುತ್ತೇವೆ. 

 

 

 

ಯಾವುದರ ಬಗ್ಗೆಯೂ ತಿಳಿಯದ ಕೆಲವರು ಸದಾ ಎಲ್ಲವನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುತ್ತಾರೆ. ನನಗೆ ಚೆನ್ನಾಗಿ ನೆನಪಿದೆ. ಒಮ್ಮೆ ಅಮೆರಿಕ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಒಂದು ನಿಯೋಗದ ಜೊತೆ ಹೋಗಿದ್ದೆ. ಅವರು ನನಗೆ ತಾನು ಎಲ್ಲೆಲ್ಲಿಗೆ ಭೇಟಿ ನೀಡಬೇಕೆಂದಿರುವೆ, ಏನೆಲ್ಲಾ ನೋಡಬೇಕೆಂದಿರುವೆ ಮತ್ತೆ ತಿಳಿಯುವಂತಹ ವಿಷಯಗಳ ಬಗ್ಗೆ ಪಟ್ಟಿಯನ್ನು ಕೇಳಿದ್ದರು. ನಾನು ಸಣ್ಣ ಗ್ರಾಮಗಳ್ಳಲ್ಲಿನ ಆಸ್ಪತ್ರೆ ಮತ್ತು ಶಾಲೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಬಯಸಿರುವುದಾಗಿ ಹೇಳಿದ್ದೆ. ಅಲ್ಲದೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುವ ಐತಿಹಾಸಿಕ ಸ್ಥಳಕ್ಕೆ ನನ್ನನ್ನು ಕರೆದೊಯ್ಯಿರಿ ಎಂದೂ ಕೇಳಿದ್ದೆ. ನನ್ನನ್ನು ಅವರು ಪೆನ್ಸಿಲ್ ವೇನಿಯಾ ರಾಜ್ಯಕ್ಕೆ ಕರೆದೊಯ್ದರೆಂದು ಕಾಣುತ್ತದೆ. ಅವರು ನನಗೆ ಬೃಹತ್ ಐತಿಹಾಸಿಕ ಸ್ಮಾರಕವನ್ನು ತೋರಿಸಿದರು. ಅವರು ಅದು ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅವರಿಗೆ ಸ್ಮಾರಕ ಐತಿಹಾಸಿಕ ಮತ್ತು ಹೆಮ್ಮೆಯ ಸಂಗತಿ. ನಮ್ಮಲ್ಲೂ ಸುಮಾರು 2 ಸಾವಿರ ಮತ್ತು 5 ಸಾವಿರ ವರ್ಷಗಳ ವೈಭವ ಇತಿಹಾಸವಿದೆ. ಆದರೆ ಆ ಸ್ಮಾರಕಗಳು ಹಾಳಾಗಿರುವುದರಿಂದ ಅವುಗಳಿಗೆ ಸಾಕಷ್ಟು ಹಾನಿಯೂ ಆಗಿದೆ. 

 

 

 

ಸ್ವಾತಂತ್ರ್ಯಾನಂತರ ನಾವು ಆ ದಾಸ್ಯದ ಮನೋಭಾವದಿಂದ ಹೊರಬರಬೇಕಿತ್ತು. ಆದರೆ ದುರದೃಷ್ಟವೆಂದರೆ ಅದು ಆಗಿಲ್ಲ, ಈಗಲೂ ನಮ್ಮ ರಾಷ್ಟ್ರವನ್ನು ಕಾಡುತ್ತಿದೆ. ಅವರು ನಮ್ಮ ಐತಿಹಾಸಿಕ ಹೆಮ್ಮೆಯ ಸಂಗತಿಗಳನ್ನೆಲ್ಲ ದಾಸ್ಯ – ಗುಲಾಮರಂತೆ ಕಂಡಿದ್ದರು. ನಮಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆಯ ಅನುಭವ ಆಗದಿದ್ದರೆ ನಮ್ಮಲ್ಲಿ ಅವನ್ನು ಸಂರಕ್ಷಿಸಬೇಕು ಎನ್ನುವ ಮನೋಭಾವ ಬೆಳೆಯುವುದಿಲ್ಲ. ನಮಗೆ ಹೆಮ್ಮೆ ಅನಿಸುವ ಕೆಲವು ಸಂಗತಿಗಳನ್ನು ನಾವು ನವೀಕರಣಗೊಳಿಸಬೇಕಾಗಿದೆ. ಇಲ್ಲವಾದರೆ ಅದು ಕೇವಲ ಒಂದು ಕಲ್ಲಿನ ತುಂಡು ಎಂಬ ಭಾವನೆಯಾಗುತ್ತದೆ. ಜೀವಂತ ಇತಿಹಾಸವಿರುವ ಒಂದು ಗ್ರಾಮದಲ್ಲಿ ನಾವು ಜನಿಸಿದೆ ಎಂಬುದು ಅದೃಷ್ಟಕರ ಸಂಗತಿ. ಹಲವು ವರ್ಷಗಳಿಂದೀಚೆಗೆ ಮನುಷ್ಯರಿಗೆ ಸಿಗುತ್ತಿರುವ ಸೌಕರ್ಯಗಳು ಹೆಚ್ಚಾಗುತ್ತಿವೆ. ಹೂಯನ್ ತ್ಸಾಂಗ್ ಕೂಡ ಬೌದ್ಧ ಭಿಕ್ಷುಗಳ ವಿಶ್ವವಿದ್ಯಾಲಯದ ಬಗ್ಗೆ ಬರೆದಿದ್ದಾರೆ. ಆ ಎಲ್ಲ ಸಂಗತಿಗಳು ಅಲ್ಲಿ ಹಾಗೆಯೇ ಇವೆ. ನಮ್ಮ ಶಾಲೆಯಲ್ಲಿ ಓರ್ವ ಶಿಕ್ಷಕರಿದ್ದರು. ಅವರು ನಾವು ಎಲ್ಲೇ ಹೋದರು, ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ, ಅಲ್ಲಿನ ಕಲ್ಲಿನ ಕೆತ್ತನೆಗಳ ತುಂಡುಗಳನ್ನು ತಂದು ಶಾಲೆಯ ಒಂದು ಮೂಲೆಯಲ್ಲಿ ಹಾಕಿ ಎಂದು ಹೇಳುತ್ತಿದ್ದರು. ನಾವು ಅಂತಹ ಕೆತ್ತನೆಗಳಿರುವ ಕಲ್ಲುಗಳ ತುಂಡನ್ನು ತರುವುದನ್ನು ಅಭ್ಯಾಸ ಮಾಡಿಕೊಂಡು ಶಾಲೆಯ ಒಂದು ಮೂಲೆಯಲ್ಲಿ ಹಾಕುತ್ತಿದ್ದೇವು. ಅವುಗಳ ಸ್ಥಿತಿ ಏನಾಯಿತು ಎಂಬುದು ನನಗೆ ಈಗ ತಿಳಿದಿಲ್ಲ, ಆದರೆ ಮಕ್ಕಳಿಗೆ ಅದು ಅಭ್ಯಾಸವಾಗಿತ್ತು. ಆದರೂ ರಸ್ತೆ ಬದಿಯಲ್ಲಿ ನಾವು ಯಾವಾಗ ಕಲ್ಲಿನ ತುಂಡನ್ನು ನೋಡಿದರೂ, ಅದಕ್ಕೆ ಖಂಡಿತವಾಗಿಯೂ ಮೌಲ್ಯವಿದೆ ಎಂದು ಭಾವಿಸುತ್ತೇನೆ. ಇಂತಹ ಜ್ಞಾನದ ಬಗ್ಗೆ ನಮ್ಮ ಶಿಕ್ಷಕರು ನಮಗೆ ಅರಿವು ಮೂಡಿಸಿದ್ದರು. ಆಗಿನಿಂದಲೂ ಇಂತಹ ಸಂಗತಿಗಳ ಬಗ್ಗೆ ಸದಾ ನಮ್ಮ ಮನಸ್ಸಿನಲ್ಲಿರುತ್ತದೆ. 

 

 

 

ನನಗೆ ಚೆನ್ನಾಗಿ ನೆನಪಿದೆ, ಡಾ. ಹರಿಭಾಯ್ ಗೋಧಾನಿ ಅವರು ಅಹಮದಾಬಾದ್ ನಲ್ಲಿ ನೆಲೆಸಿದ್ದರು. ಅವರು, ವೈದ್ಯಕೀಯ ವೃತ್ತಿ ಕೈಗೊಂಡಿದ್ದರು. ಅವರು ಅಪರೂಪದ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಹೆಸರು ಮಾಡಿದ್ದರು. ನಾನು ಒಮ್ಮೆ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಆಗ ನನಗೆ ತಮ್ಮ 20 ಫಿಯೆಟ್ ಕಾರುಗಳು ಹಾನಿಯಾಗಿರುವುದನ್ನು ತಿಳಿಸಿದರು. ಆಗಿನ ಕಾಲದಲ್ಲಿ ಫಿಯಟ್ ಒಂದೇ ಜನಪ್ರಿಯ ಕಾರಾಗಿತ್ತು. ಆಧುನಿಕ ಕಾರುಗಳು ಆ ಕಾಲದಲ್ಲಿ ಇರಲಿಲ್ಲ. ಅವರು ತಮ್ಮ ಫಿಯೆಟ್ ಕಾರಿನಲ್ಲಿ ಶನಿವಾರ ಮತ್ತು ಭಾನುವಾರಗಳಂದು ಅರಣ್ಯ, ಬೆಟ್ಟ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಅವರ ಕಾರು ಕನಿಷ್ಠ ಒಂದು ವರ್ಷವೂ ಬಾಳಿಕೆ ಬರುತ್ತಿರಲಿಲ್ಲ, ಕಾರಣ ಅಂತಹ ಕೆಟ್ಟ ರಸ್ಗೆಯಲ್ಲಿ ಅವರು ಸಂಚರಿಸುತ್ತಿದ್ದರು. ನನಗೆ ತಿಳಿದಿರುವಂತೆ ಆ ವ್ಯಕ್ತಿಯನ್ನು ಹೊರತುಪಡಿಸಿದರೆ, ಅಂತಹ ಕಾರುಗಳ ಸಂಗ್ರಹ ಹೊಂದಿರುವ ವ್ಯಕ್ತಿ ಬೇರೊಬ್ಬರಿಲ್ಲ. ಆ ಕಾಲದಲ್ಲಿಯೇ ಅವರು ಹೆಚ್ಚಿನ ಕಲಾ ಸಂಗ್ರಹ ಹೊಂದಿದ್ದರು. ಅವರು ವೈದ್ಯಕೀಯ ಕ್ಷೇತ್ರದಿಂದ ಬಂದವರು. ಅವರು ಕೆಲವು ಸ್ಲೇಡ್ ಗಳನ್ನು ತೋರಿಸಿ, ನಾನು ಯುವಕನಾಗಿದ್ದಾಗ ಅತ್ಯುತ್ಸಾಹದಿಂದ ಇದ್ದೆ ಎಂದರು. ಗರ್ಭಿಣಿ ಮಹಿಳೆಯನ್ನು ಬಿಂಬಿಸುವ ಕಲ್ಲಿನ ಕೆತ್ತನೆಗಳ ಸ್ಲೈಡ್ ಗಳನ್ನು ಅವರು ನನಗೆ ತೋರಿಸಿದ್ದರು. ಅವು ಸುಮಾರು 800 ವರ್ಷಗಳಷ್ಟು ಹಳೆಯವಂತೆ. ಆ ಕೃತಿಗಳಲ್ಲಿ ಮಹಿಳೆಯ ಹೊಟ್ಟೆಯ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದಂತೆ ಕಂಡುಬರುತ್ತಿತ್ತು. ಅದನ್ನು ಒಂದು ಭಾಗದಲ್ಲಿ ಕತ್ತರಿಸಿ ತೆರೆಯಲಾಗಿತ್ತು. ಕಲ್ಲಿನಲ್ಲಿ ಚರ್ಮದ ಪದರಗಳನ್ನೂ ಸಹ ಸೂಕ್ಷ್ಮವಾಗಿ ಕೆತ್ತಲಾಗಿತ್ತು. ತಾಯಿಯ ಗರ್ಭದಲ್ಲಿ ಮಗು ಹೇಗೆ ಮಲಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿತ್ತು. 

 

 

 

ಇದನ್ನು ವೈದ್ಯಕೀಯ ವಿಜ್ಞಾನ ಕೆಲವೇ ಶತಮಾನಗಳ ಹಿಂದೆ ಕಂಡುಹಿಡಿದಿತ್ತು ಎಂದು ನನಗೆ ತಿಳಿಸಿದರು. 800 ವರ್ಷಗಳ ಹಿಂದೆ ನಮ್ಮ ಕರಕುಶಲಕರ್ಮಿಗಳು ಕೆತ್ತಿದ ಶಿಲ್ಪಗಳು ವೈದ್ಯಕೀಯ ವಿಜ್ಞಾನಕ್ಕೆ ಇಂದಿಗೂ ಅಧಿಕೃತ ಮಾದರಿಗಳಾಗಿವೆ. ಉದಾಹರಣೆಗೆ ಚರ್ಮದ ಹಲವು ಪದರಗಳು ಮತ್ತು ತಾಯಿಯ ಗರ್ಭದಲ್ಲಿ ಮಗು ಮಲಗುವ ವೈಖರಿ. ನೀವೇ ಊಹಿಸಿಕೊಳ್ಳಿ ಅವರ ಜ್ಞಾನ ಎಷ್ಟು ರೀತಿಯಲ್ಲಿ ವಿಸ್ತರಣೆಗೊಂಡಿಂತೆಂಬುದನ್ನು, ಇದನ್ನು ಸ್ಲೈಡ್ ಗಳಲ್ಲಿ ನೋಡಿದ್ದೆ. 

 

 

 

ನಮ್ಮಲ್ಲಿ ಅದ್ಭುತ ಪರಂಪರೆ ಇದೆ. ಅದರರ್ಥ ಅಪ್ರತಿಮ ಜ್ಞಾನವೂ ಇದೆ ಎಂಬುದು. ಇಲ್ಲವಾದರೆ ಕಲ್ಲಿನಿಂದ ಹೇಗೆ ಚರ್ಮದ ಪದರಗಳನ್ನು ಕೆತ್ತನೆ ಮಾಡಲು ಸಾಧ್ಯ. ಅದರರ್ಥ ನಮ್ಮ ವಿಜ್ಞಾನ ಶತಮಾನಗಳಷ್ಟು ಹಳೆಯದಾಗಿದೆ. ಅಂತಹ ಶಕ್ತಿಯುತವಾದುದನ್ನು ಸೃಷ್ಟಿಸಬೇಕಾದರೆ ನಾವು ಹೆಮ್ಮೆ ಪಡಬೇಕಾಗಿದೆ. 

 

 

 

ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಒಂದು ಒಳ್ಳೆಯ ಸಂಗತಿ ಇದೆ. ಈ ವಲಯದಲ್ಲಿ ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವಕ್ಕೆ ಬೇಡಿಕೆ ಇದೆ. ನೀವು ವಿಶ್ವದಲ್ಲಿ ಯಾವುದೇ ಸ್ಮಾರಕಕ್ಕೆ ಭೇಟಿ ನೀಡಿದರೂ, ನೀವು ನಿವೃತ್ತ ಜನರು ಸಮವಸ್ತ್ರಗಳಲ್ಲಿ ಬಂದು ಅಂತಹ ಸ್ಥಾನಗಳನ್ನು ತೋರಿಸುವ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡುವುದನ್ನು ನೋಡಿದ್ದೇವೆ. ಸಮಾಜ ಇಂತಹ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ. ಇಂತಹುದನ್ನು ಉತ್ತೇಜಿಸಲು ಹಿರಿಯ ನಾಗರಿಕರ ಕ್ಲಬ್ ಅನ್ನು ರಚಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಸರ್ಕಾರಿ ನೌಕರರು ಈ ವಲಯದಲ್ಲಿ ಮುಂದೆ ಬಂದರೆ ಇದನ್ನು ಮಾಡಲು ಸಾಧ್ಯ. ಇದೇ ಮಾದರಿಯನ್ನು ಅನುಸರಿಸಬೇಕಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ನಾವು ಒಂದೇ ಒಂದು ಗಿಡವನ್ನೂ ಹಾಳು ಮಾಡುವುದಿಲ್ಲ ಎಂದು ತೀರ್ಮಾನಿಸಿದರೆ ಮಾತ್ರ ರಕ್ಷಕರು ಉದ್ಯಾನವನ್ನು ಸಂರಕ್ಷಿಸಲು ಸಾಧ್ಯ. ಹಾಗೆ ಮಾಡಿದರೆ ಹಲವು ವರ್ಷಗಳ ಕಾಲ ಯಾರೊಬ್ಬರೂ ಉದ್ಯಾನವನವನ್ನು ಹಾಳು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವಜನಿಕ ಸಹಭಾಗಿತ್ವಕ್ಕೆ ಅಪ್ರತಿಮ ಬಲವಿದೆ ಎಂದು ಹೇಳುವುದು. ನಾವು ಸಾರ್ವಜನಿಕ ಜೀವನದಲ್ಲಿ ಇಂತಹ ಸಂಗತಿಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಇಂತಹ ಸೇವೆಗಳನ್ನು ಒದಗಿಸುವ ಜನರನ್ನು ಆಹ್ವಾನಿಸಿ,  ಈ ದೊಡ್ಡ ಕೆಲಸವನ್ನು ಮಾಡಿ ತೋರಿಸಬೇಕಿದೆ. 

 

 

 

ನಾವು ಕಾರ್ಪೊರೇಟ್ ವಲಯದ ಸಹಾಯವನ್ನೂ ಸಹ ಕೋರಬಹುದಾಗಿದೆ. ಆ ವಲಯದಲ್ಲಿ ಆಸಕ್ತಿ ಹೊಂದಿರುವವರನ್ನು ಗುರುತಿಸಿ ಪ್ರತಿ ತಿಂಗಳು ಕನಿಷ್ಠ 10ರಿಂದ 15 ಗಂಟೆ ಸ್ಮಾರಕಗಳನ್ನು ಸಂರಕ್ಞಿಸುವ ಕಾರ್ಯಕ್ಕೆ ನೆರವು ನೀಡಿದರೆ ಅದು ಅತ್ಯುತ್ತಮ ಸ್ವಾಗತಾರ್ಹ ಕೆಲಸವಾಗುತ್ತದೆ. ಕ್ರಮೇಣ ಇಂತಹ ಸಂಗತಿಗಳು ಪ್ರಾಮುಖ್ಯತೆ ಪಡೆಯಲಿವೆ. 

 

 

 

ಮತ್ತೊಂದು ವಿಷಯದ ಬಗ್ಗೆ ನಾವು ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂಬುದು ನನ್ನ ಭಾವನೆಯಾಗಿದೆ. ಈ ಹೊಣೆಗಾರಿಕೆ ಕೇವಲ ಭಾರತೀಯ ಪುರಾತತ್ವ ಇಲಾಖೆಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರವಾಸೋದ್ಯಮ ಇಲಾಖೆ, ಸಂಸ್ಕೃತಿ ಇಲಾಖೆ ಮತ್ತು ಕೇಂದ್ರ ಸರ್ಕಾರದ ಇತರೆ ಇಲಾಖೆಗಳು ಹಾಗೂ ಸಂಬಂಧಿಸಿದ ರಾಜ್ಯ ಸರ್ಕಾರಗಳು ಎಲ್ಲ ಒಗ್ಗೂಡಬೇಕು.

 

 

 

ಉದಾಹರಣೆಗೆ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ದೃಷ್ಟಯಿಂದ ಹೆಚ್ಚಿನ ಮೌಲ್ಯವಿರುವ ನಾವು ನೂರು ನಗರಗಳನ್ನು ಉತ್ತಮ ಪ್ರವಾಸಿ ತಾಣಗಳೆಂದು ಗುರುತಿಸಿದರೆ, ಆ ನಗರಗಳ ಮಕ್ಕಳಿಗೆ ಮೊದಲು ಪುರಾತತ್ವ ಶಾಸ್ತ್ರ ಮತ್ತು ನಗರದ ಇತಿಹಾಸದ ಬಗ್ಗೆ ತಿಳಿಸಿಕೊಡಬೇಕು. ಪ್ರತಿಯೊಂದು ತಲೆಮಾರು ಘಟನಾವಳಿಗಳನ್ನು ತಿಳಿಸಬೇಕು. ಆಗ್ರಾದ ವಿದ್ಯಾರ್ಥಿಗಳಿಗೆ ತಾಜ್ ಮಹಲ್ ಇತಿಹಾಸ ತಿಳಿಸಿದರೆ ಅವರು ಅದನ್ನು ಮರೆಯಲು ಅಥವಾ ತಪ್ಪು ತಿಳುವಳಿಕೆ ಮೂಡಲು ಸಾಧ್ಯತೆಗಳೇ ಇಲ್ಲ. ಪ್ರತಿಯೊಂದು ತಲೆಮಾರಿನ ಬಗ್ಗೆಯೂ ಮಾಹಿತಿಯೊಂದಿಗೆ ಅವರನ್ನು ಸಜ್ಜುಗೊಳಿಸಬೇಕು. 

 

 

 

ಎರಡನೆಯದಾಗಿ ನಾವು ಅಂತಹ ನಗರಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಬಹುದು. ಯಶಸ್ವಿ ಅಭ್ಯರ್ಥಿಗಳು ನಗರದ ಒಳಹೊರಗನ್ನು ತಿಳಿದುಕೊಳ್ಳುತ್ತಾರೆ ಮತ್ತು ಅವರು ಉತ್ತಮ ಪ್ರವಾಸಿ ಮಾರ್ಗದರ್ಶಿಗಳಾಗಿ ರೂಪುಗೊಳ್ಳುತ್ತಾರೆ. 

 

 

 

ಒಮ್ಮೆ ನಾನು ಪ್ರಧಾನಮಂತ್ರಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದೆ, ಆಗ ವಾಹಿನಿಗಳಲ್ಲಿ ಮಕ್ಕಳ ಪ್ರತಿಭೆಯನ್ನು ತೋರಿಸುವಂತಹ ಸಂಗೀತ ಮತ್ತು ನೃತ್ಯ ಪ್ರತಿಭಾ ಪ್ರದರ್ಶನಗಳನ್ನು ತೋರಲು ವೇದಿಕೆ ಒದಗಿಸುತ್ತಿದ್ದೀರಿ ಎಂದು ಹೇಳಿದ್ದೆ. ಟೆಲಿವಿಜನ್ ಗಳಲ್ಲಿ ಮಕ್ಕಳ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಲಾಗುತ್ತದೆ. ಅದೇ ರೀತಿ ನೀವೇಕೆ ಉತ್ತಮ ಪ್ರವಾಸಿ ಮಾರ್ಗದರ್ಶಿ ಸ್ಪರ್ಧೆ ನಡೆಸುವುದಿಲ್ಲ? ಟೆಲಿವಿಜನ್ ಗಳು ನಗರಗಳನ್ನು ತೋರಿಸಿ, ಯಾವ ನಗರಗಳಲ್ಲಿ ಪ್ರವಾಸಿ ಗೈಡ್ ಕೆಲಸ ಮಾಡಲು ಇಚ್ಛಿಸುತ್ತಾರೆ ಎಂದು ಕೇಳಬಹುದು. ಪ್ರತಿಭೆ ಇರುವಂತಹ ಗೈಡ್ ಗಳು ಅಚ್ಚರಿಯ ಪೋಷಾಕಿನೊಂದಿಗೆ ಬರಬಹುದು, ಅವರು ಹೊಸ ಭಾಷೆ ಕಲಿಯಬಹುದು ಮತ್ತು ಸುತ್ತಮುತ್ತಲಿನ ಪ್ರದೇಶವನ್ನೂ ಸಹ ತೋರಿಸಬಹುದಾಗಿದೆ. ಆ ರೀತಿಯ ಸ್ಪರ್ಧೆಗಳು ಹೆಚ್ಚಾಗಬೇಕು. ಇದು ಕ್ರಮೇಣ ಭಾರತದ ಪ್ರವಾಸೋದ್ಯಮ ವಲಯವನ್ನು ಮತ್ತು ವೃತ್ತಿಪರ ಗೈಡ್ ಗಳನ್ನು ಬೆಳೆಸಲಿದೆ. ಮಾರ್ಗದರ್ಶಿ ಅಥವಾ ಗೈಡ್ ಗಳಿಲ್ಲದೆ, ಇವುಗಳನ್ನು ನಡೆಸುವುದು ಅತ್ಯಂತ ಕಷ್ಟಕರ. 

 

 

 

ಆದರೆ ಒಂದು ಮನೋಭಾವಕ್ಕೆ ನಾವು ಒಗ್ಗಿಕೊಂಡಿರುತ್ತೇವೆ. ನಮ್ಮ ಇಂದಿನ ಇತಿಹಾಸವನ್ನು ನಾವು ನೋಡಬೇಕಿದೆ. ಉದಾಹರಣೆಗೆ ಒಂದು ಸಂಪೂರ್ಣ ಮುಚ್ಚಿದ ಕೋಣೆ ಇದ್ದು, ಅದರಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿ, ಅದರೊಳಗಿಂದ ಒಬ್ಬ ವ್ಯಕ್ತಿಯ ಕೈ ಹೊರಗೆ ಹಾಕಿದ್ದೇವೆ ಎಂದರೆ ಕೋಣೆಯ ಹೊರಗಿನ ಜನರಿಗೆ ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ನೇತಾಡುತ್ತಿರುವ ಆ ವ್ಯಕ್ತಿಯ ಕೈಹಿಡಿದು ಹಸ್ತಲಾಘವ ಮಾಡಿ ಎಂದರೆ ಅದು ಮೃತ ವ್ಯಕ್ತಿಯ ಹಸ್ತಲಾಘವ ಮಾಡಿದಂತೆ ಅನುಭವ ವಾಗಬಹುದು. ಹೊರಗಿನ ಜನರಿಗೆ ಆ ಕೈ ಸಚಿನ್ ತೆಂಡೂಲ್ಕರ್ ದು ಎಂದು ಹೇಳಿದರೆ ಆ ಕೈಅನ್ನು ಯಾರೂ ಬಿಡಲು ಒಪ್ಪುವುದಿಲ್ಲ. ಇದರರ್ಥ ಮಾಹಿತಿಯೇ ಅತ್ಯಂತ ಶಕ್ತಿಶಾಲಿ ಎಂದು. ಹಾಗಾಗಿ ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೆಚ್ಚಿನ ಜ್ಞಾನ ಹೊಂದಿರುವ ಅಗತ್ಯವಿದೆ. 

 

 

 

ಒಮ್ಮೆ ನಾನು ಕಛ್ ಪ್ರದೇಶದ ಮರುಭೂಮಿಯನ್ನು ಅಭಿವೃದ್ಧಿ ಮಾಡಬೇಕೆಂದು ಬಯಸಿದ್ದೆ. ಮರುಭೂಮಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಗಂಭೀರ ಸವಾಲು. ನಾನು ಮಕ್ಕಳಿಗೆ ಗೈಡ್ ಗಳನ್ನಾಗಿ ತರಬೇತಿ ನೀಡುವ ಮೂಲಕ ಆ ಕೆಲಸ ಆರಂಭಿಸಿದ್ದೆ. ಮಕ್ಕಳಿಗೆ ನಾವು ಹೇಗೆ ಉಪ್ಪನ್ನು ತಯಾರಿಸಬಹುದು ಎಂದು ತಿಳಿಸಿಕೊಡಲಾಗಿತ್ತು. ನಂತರ ಆ ಮಕ್ಕಳು ಎಲ್ಲ ಜನರಿಗೂ ಉಪ್ಪು ಉತ್ಪಾದನೆ ಬಗ್ಗೆ ತಿಳಿಸಿಕೊಡುವಂತಹರಾದರು. ನಿಮಗೆ ಆಶ್ಚರ್ಯವಾಗಬಹುದು, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಪ್ರವಾಸಿಗರಿಗೆ ತಮ್ಮ ಪ್ರದೇಶದ ಸುತ್ತಮುತ್ತಲಿನ ವಿವರಗಳನ್ನು ಮತ್ತು ಉಪ್ಪು ಉತ್ಪಾದನೆ ಪ್ರಕ್ರಿಯೆಯನ್ನು ಎಷ್ಟು ಚೆನ್ನಾಗಿ ವಿವರಿಸುತ್ತಾರೆಂದು. ಆಂಗ್ಲ ಪ್ರವಾಸಿಗರು ಮೊದಲ ಭೇಟಿ ನೀಡಿದ್ದರು. ಮಕ್ಕಳು ಅತ್ಯುತ್ತಮವಾಗಿ ಪ್ರವಾಸಿಗರಿಗೆ ಆ ಬಗ್ಗೆ ಚೆನ್ನಾಗಿ ವಿವರಿಸಿದರು. ಜನರಿಗೂ ಕ್ರಮೇಣ ಆ ಬಗ್ಗೆ ಆಸಕ್ತಿ ಹೆಚ್ಚಾಯಿತು. ಮಕ್ಕಳಿಗೂ ಕೂಡ ಉದ್ಯೋಗ ದೊರಕಿತು. ಇಂದು ನಮಗೆ ಆಶ್ಚರ್ಯವಾಗುವಷ್ಟು ತಂತ್ರಜ್ಞಾನ ಬೆಳೆದಿದೆ. ನಾನು ಕೆಲ ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ತಪ್ಪಿದ್ದರೆ ಕ್ಷಮಿಸಿ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಜಗತ್ತು ಹೇಗೆ ಕೆಲಸ ಮಾಡುತ್ತಿದೆ ಎಂದು ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿ ದೆಹಲಿಯ ಒಂದು ಸಣ್ಣ ಬೀದಿಯಲ್ಲಿ ನಿಲ್ಲಿಸಿರುವ ಸ್ಕೂಟರ್ ನ ನಂಬರ್ ಪ್ಲೇಟ್ ಫೋಟೊ ಪಡೆಯಬಹುದಾಗಿದೆ. ಆದರೆ ಸ್ಮಾರಕಗಳ ಮುಂದೆ ‘ಛಾಯಾಗ್ರಹಣ ನಿಷೇಧಿಸಿದೆ’ ಎಂಬ ಫಲಕವಿರುತ್ತದೆ. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ ಮತ್ತು ಕಾಲವೂ ಬದಲಾಗಿದೆ. 

 

 

 

ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಜನರು ಅಲ್ಲಿಗೆ ಭೇಟಿ ನೀಡಲು ಬಯಸುತ್ತಿದ್ದಾರೆ. ಕೆಲವೊಮ್ಮೆ ನೀರು ಉಕ್ಕಿ ಹರಿಯುತ್ತದೆ. ಜನರು ಅದನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ಎಲ್ಲೆಡೆ ನಾವು ‘ಛಾಯಾಗ್ರಹಣ ತೆಗೆಯುವುದನ್ನು ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ಹಾಕಿದ್ದೇವೆ. ಆಗ ನಾನು ಮುಖ್ಯಮಂತ್ರಿಯಾಗಿದ್ದೆ. ನಾನು ಅದಕ್ಕೆ ತದ್ವಿರುದ್ಧ ನಿರ್ಣಯ ಕೈಗೊಂಡಿದ್ದೆ. ಜನರಿಗೆ ಉತ್ತಮ ಫೋಟೋ ತೆಗೆದು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದರೆ ಅದಕ್ಕೆ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಎನ್ನುವ ರೀತಿಯಲ್ಲಿ ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನರು ಮುಗಿಬಿದ್ದು ಫೋಟೋಗಳನ್ನು ತೆಗೆದು ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ಆದ್ದರಿಂದ ಅಣೆಕಟ್ಟೆಗೆ ಭೇಟಿ ನೀಡುವವರಿಗೆ ಶುಲ್ಕ ವಿಧಿಸಲಾಯಿತು. ಟಿಕೆಟ್ ನೀಡುವುದು ಎಷ್ಟು ಜನ ಬಂದಿದ್ದಾರೆ ಎಂಬುದನ್ನು ದಾಖಲಿಸಲು, ನಂತರ ನಾವು ಪ್ರವಾಸಿಗರನ್ನು ಡಿಜಿಟಲ್ ಮೂಲಕ ದಾಖಲಿಸಲಾರಂಭಿಸಿದೆವು ಮತ್ತು ಪ್ರವಾಸಿಗರ ಸಂಖ್ಯೆ ಐದು ಲಕ್ಷ ದಾಟಿದಾಗ, ಐದನೇ ಲಕ್ಷ ಸಂಖ್ಯೆಯ ಪ್ರವಾಸಿಗೆ ಕೊಡುಗೆ ಬಹುಮಾನ ನೀಡಿ ಗೌರವಿಸಲಾಯಿತು. ಆಶ್ಚರ್ಯಕರ ಸಂಗತಿ ಎಂದರೆ 5 ಲಕ್ಷದ ಆ ಪ್ರವಾಸಿಗ ದಂಪತಿ ಕಾಶ್ಮೀರದ ಬಾರಾಮುಲ್ಲಾದವರು. ನಂತರ ಅದರ ಸಾಮರ್ಥ್ಯ ಅರ್ಥವಾಯಿತು. ಆ ದಂಪತಿಯನ್ನು ಅಭಿನಂದಿಸಲಾಯಿತು. ಬಳಿಕ 8 ರಿಂದ 10ನೇ ತರಗತಿವರೆಗಿನ ಕೆಲವು ವಿದ್ಯಾರ್ಥಿಗಳಿಗೆ ಗೈಡ್ ಗಳಾಗಿ ತರಬೇತಿ ನೀಡಲಾಯಿತು. ಆ ಗೈಡ್ ಗಳು ಅಣೆಕಟ್ಟೆ ನಿರ್ಮಾಣ ಆರಂಭ, ಯೋಜನೆಗೆ ಅನುಮೋದನೆ, ಅದಕ್ಕೆ ಬಳಸಿರುವ ಸಿಮೆಂಟ್ ಮತ್ತು ಕಬ್ಬಿಣದ ಪ್ರಮಾಣದ ಹಾಗೂ ಎಷ್ಟು ನೀರು ಸಂಗ್ರಹವಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನುಒದಗಿಸುತ್ತಿದ್ದರು. ಅವರಲ್ಲಿ ಕೆಲವರು ಬುಡಕಟ್ಟು ವಿದ್ಯಾರ್ಥಿಗಳಿದ್ದರು. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು. ಅಂತಹುದೇ ಚಟುವಟಿಕೆಗಳನ್ನು ಇದೀಗ ನಾವು ದೇಶದ ಕನಿಷ್ಠ 100 ನಗರಗಳಲ್ಲಿ ಏಕೆ ಕೈಗೊಳ್ಳಬಾರದು ಎಂಬುದು ನನ್ನ ಭಾವನೆಯಾಗಿದೆ. ಹೊಸ ತಲೆಮಾರನ್ನು ನಾವು ಸಜ್ಜುಗೊಳಿಸಬೇಕು, ಅವರನ್ನು ಗೈಡ್ ಗಳನ್ನಾಗಿ ಬೆಳೆಸಲು ಮುಂದಾಗಬೇಕು. ಇತಿಹಾಸ ಅವರಿಗೆ ತಿಳಿದಿದ್ದರೆ, ಭಾರತದ ಸಾವಿರಾರು ವರ್ಷಗಳ ಹಿಂದಿನ ಗತವೈಭವ ಮತ್ತು ಪರಂಪರೆಯನ್ನು ಕ್ರಮೇಣ ನಾವು ಆಶ್ಚರ್ಯಕರ ರೀತಿಯಲ್ಲಿ ಬೆಳೆಸಬಹುದಾಗಿದೆ. ವಿಶ್ವಕ್ಕೆ ನಾವು ಯಾವುದೇ ಕೊಡುಗೆ ನೀಡಬೇಕಾಗಿಲ್ಲ, ನಾವು ನಮ್ಮ ಪೂರ್ವಜರು ಬಿಟ್ಟು ಹೋಗಿರುವ ವೈಭವವನ್ನು ಪ್ರದರ್ಶಿಸಬೇಕಷ್ಟೆ. ಭಾರತ ಪ್ರವಾಸೋದ್ಯಮದ ಪ್ರಗತಿಯನ್ನು ಯಾವುದು ತಡೆಯಲು ಸಾಧ್ಯವಿಲ್ಲ. ಅಲ್ಲದೆ ನಮ್ಮ ವಿದ್ಯಾರ್ಥಿಗಳು ನಮ್ಮ ಪೂರ್ವಜರು ನೀಡಿರುವ ಕೊಡುಗೆ ಮತ್ತು ಶ್ರಮವನ್ನು ಮರೆಯುವಂತಹವರಲ್ಲ. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ವೈಭವದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮೇಲಿದೆ ಮತ್ತು ಅದನ್ನು ನಾವು ಅತ್ಯಂತ ಹೆಮ್ಮೆ ಮತ್ತು ಪೂಜ್ಯನೀಯ ಭಾವದಿಂದ ವಿಶ್ವದ ಮುಂದೆ ಪ್ರದರ್ಶಿಸಬೇಕಿದೆ. ಆ ಸ್ವಯಂ ವಿಶ್ವಾಸದೊಂದಿಗೆ ನಾವು ಮುನ್ನಡೆಯಬೇಕಿದೆ. ಈ ಸಣ್ಣ ಆದರ್ಶದೊಂದಿಗೆ ನಾವು ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದೆಂದು ಹೇಳುತ್ತ ನಿಮಗೆಲ್ಲಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. 

 

 

——–