Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಕುವೈತ್ ನ ಬಂಡವಾಳ ಮಾರುಕಟ್ಟೆ ಪ್ರಾಧಿಕಾರ (ಸಿಎಂಎ)ದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಹಾಗೂ ಕುವೈಟ್ ನ ಬಂಡವಾಳ ಮಾರುಕಟ್ಟೆ ಪ್ರಾಧಿಕಾರ (ಸಿಎಂಎ) ನಡುವೆ ಪರಸ್ಪರ ಸಹಕಾರ ಮತ್ತು ತಾಂತ್ರಿಕ ನೆರವಿಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ಎರಡೂ ನಿಯಂತ್ರಕರ ನಡುವೆ ಆರ್ಥಿಕ ನಂಟು ಮತ್ತು ಸಹಕಾರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ, ಮತ್ತು ಎರಡೂ ರಾಷ್ಟ್ರಗಳಲ್ಲಿನ ಷೇರು ಮಾರುಕಟ್ಟೆಗಳ ಸಮರ್ಥ ಅಭಿವೃದ್ಧಿಯ ಸಹಕಾರಕ್ಕೆ ಸೂಕ್ತ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿದೆ.

ಇದು ಅಂಕಿತ ಹಾಕುವ ಎರಡೂ ದೇಶಗಳ ನಡುವಿನ ಮಾಹಿತಿ ವಿನಿಮಯ ಚೌಕಟ್ಟನ್ನೂ ಇದು ಬಲಪಡಿಸಲು ಕೊಡುಗೆ ನೀಡಲಿದೆ. ಇದು ಸೆಬಿ ಮತ್ತು ಕುವೈಟ್ ನ ಸಿಎಂ.ಎ ನಡುವೆ ನಿಯಂತ್ರಣ ಚಟುವಟಿಕೆಗಳಿಗೆ ಮತ್ತು ಸಾಗರೋತ್ತರ ಪರಸ್ಪರ ಸಹಕಾರಕ್ಕೆ ಮೌಲ್ಯ ದೊರಕಿಸಲಿದೆ ಎಂದು ನಿರೀಕ್ಷಿಸಲಾಗಿದೆ.

******