Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಕರ್ತವ್ಯವನ್ನು ಕೊಂಡಾಡುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ  ಪ್ರಧಾನಮಂತ್ರಿ


ದೇಶದ ಗೌರವ ಮತ್ತು ಘನತೆಯನ್ನು ಕಾಪಾಡುವಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯನ್ನುಂಟು ಮಾಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಾತೃಭೂಮಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಾಗಿರುವ ಯೋಧರ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ-

“स्वधर्ममपि चावेक्ष्य न विकम्पितुमर्हसि |
धर्म्याद्धि युद्धाच्छ्रेयोऽन्यत्क्षत्रियस्य न विद्यते ||”

ಈ ಶ್ಲೋಕದ ಅರ್ಥವೆಂದರೆ, ಒಬ್ಬ ವ್ಯಕ್ತಿಗೆ ತನ್ನ ಕರ್ತವ್ಯದ ಅರಿವು ಬಂದಾಗ ಮನಸ್ಸಿನಲ್ಲಿ ಯಾವುದೇ ರೀತಿಯ ಹಿಂಜರಿಕೆ ಅಥವಾ ಭಯ ಇರಬಾರದು. ನ್ಯಾಯದ ವೇದಿಕೆಯಲ್ಲಿ ಧರ್ಮ ಮತ್ತು ಗೌರವವನ್ನು ಕಾಪಾಡಲು ನಡೆಸುವ ಹೋರಾಟವು ಯೋಧನ ಸ್ವಹಿತಕ್ಕೆ ಅತ್ಯುತ್ತಮ ಹಾಗೂ ಅತ್ಯಂತ ಗೌರವಪೂರ್ಣ ಮಾರ್ಗವಾಗಿದೆ.

 

*****