Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ್  ಔದ್ಯೋಗಿಕ  ವಿಕಾಸ ಯೋಜನೆ (ಭಾವ್ಯ) ಮೂಲಕ ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಅಭಿವೃದ್ಧಿಯ ಹೊಸ ಯುಗಕ್ಕೆ ಕೇಂದ್ರ ಸಂಪುಟ ಅನುಮೋದನೆ


ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 33,660 ಕೋಟಿ ರೂ. ಹಂಚಿಕೆಯೊಂದಿಗೆ ದೇಶಾದ್ಯಂತ 100 ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲು ಭಾರತ ಔದ್ಯೋಗಿಕ ವಿಕಾಸ ಯೋಜನೆ (ಭಾವ್ಯ)ಗೆ ಅನುಮೋದನೆ ನೀಡಿದೆ.

ಈ ಯೋಜನೆಯು ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಉತ್ಪಾದನಾ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ಮತ್ತು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ಮುನ್ನಡೆಸುವ ಗುರಿ ಹೊಂದಿದೆ.

ವಿಕಸಿತ ಭಾರತಕ್ಕೆ ಕೈಗಾರಿಕಾ ಬುನಾದಿ ಹಾಕುವುದು:

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (ಎನ್ ಐಸಿಡಿಪಿ) ಚೌಕಟ್ಟಿನಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಯಶಸ್ಸಿನ ಮೇಲೆ, ರಾಜ್ಯಗಳು ಮತ್ತು ಖಾಸಗಿ ವಲಯದ ಪಾಲುದಾರರೊಂದಿಗೆ ಭಾವ್ಯ (BHAVYA ) ಅನ್ನು ಜಾರಿಗೊಳಿಸಲಾಗುತ್ತದೆ.

ಅನುಮೋದನೆಗಳಿಂದ ಕಾರ್ಯಾಚರಣೆಗಳವರೆಗೆ: ವ್ಯವಹಾರ ಸುಲಭಗೊಳಿಸಯವ ಹೊಸ ಯುಗ

ರಾಜ್ಯಗಳ ನೇತೃತ್ವದ ಸುವ್ಯವಸ್ಥಿತ ಅನುಮೋದನೆಗಳು, ಪರಿಣಾಮಕಾರಿ ಏಕ-ಗವಾಕ್ಷಿ ವ್ಯವಸ್ಥೆಗಳು ಮತ್ತು ಹೂಡಿಕೆದಾರ ಸ್ನೇಹಿ ಸುಧಾರಣೆಗಳೊಂದಿಗೆ ಭಾವ್ಯದ ಕೇಂದ್ರ ಭಾಗದಲ್ಲಿ ಅನಿಯಂತ್ರಣ ಮತ್ತು ವ್ಯವಹಾರ ಮಾಡುವ ಸುಲಭ ವಾತಾವರಣ ನಿರ್ಮಿಸಲು ಬಲವಾದ ಒತ್ತಡವಿದೆ.

ಈ ಯೋಜನೆಯು ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಒದಗಿಸುತ್ತದೆ, ಇದು ಕೈಗಾರಿಕೆಗಳು ಉದ್ದೇಶದಿಂದ ಉತ್ಪಾದನೆಗೆ ವೇಗ ಮತ್ತು ಖಚಿತತೆಯೊಂದಿಗೆ ಸಾಗಲು ಅನುವು ಮಾಡಿಕೊಡುತ್ತದೆ. ಪೂರ್ವ-ಅನುಮೋದಿತ ಭೂಮಿ, ಸಿದ್ಧ ಮೂಲಸೌಕರ್ಯ ಮತ್ತು ಸಂಯೋಜಿತ ಸೇವೆಗಳೊಂದಿಗೆ ಭಾವ್ಯ ಹೂಡಿಕೆದಾರರಿಗೆ ಅಡೆತಡೆಗಳನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.  

ಈ ಯೋಜನೆಯಡಿಯಲ್ಲಿ 100 ರಿಂದ 1000 ಎಕರೆಗಳವರೆಗಿನ ಕೈಗಾರಿಕಾ ಉದ್ಯಾನವನಗಳನ್ನು ಅಭಿವೃದ್ಧಿಗಾಗಿ ತೆಗೆದುಕೊಳ್ಳಲಾಗುತ್ತದೆ. ಎಕರೆಗೆ ಒಂದು ಕೋಟಿ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುವುದು:

  • ಮೂಲ ಮೂಲಸೌಕರ್ಯ (ಒಳ ರಸ್ತೆಗಳು, ನೆಲದಾಳದ ಸೌಕರ್ಯಗಳು, ಒಳಚರಂಡಿ, ಸಾಮಾನ್ಯ ಸಂಸ್ಕರಣಾ ಸೌಲಭ್ಯಗಳು, ಐಸಿಟಿ ಮತ್ತು ಆಡಳಿತ ವ್ಯವಸ್ಥೆಗಳು)
  • ಮೌಲ್ಯವರ್ಧಿತ ಮೂಲಸೌಕರ್ಯ (ಸಿದ್ಧ-ನಿರ್ಮಿತ ಕಾರ್ಖಾನೆ ಶೆಡ್‌ಗಳು, ಬಿಲ್ಟ್-ಟು-ಸೂಟ್ ಘಟಕಗಳು, ಪರೀಕ್ಷಾ ಪ್ರಯೋಗಾಲಯಗಳು, ಗೋದಾಮು)
  • ಸಾಮಾಜಿಕ ಮೂಲಸೌಕರ್ಯ (ಕಾರ್ಮಿಕರ ವಸತಿ ಮತ್ತು ಬೆಂಬಲ ಸೌಲಭ್ಯಗಳು)

ಹೊರಗಿನ ಮೂಲಸೌಕರ್ಯಕ್ಕೆ ಯೋಜನಾ ವೆಚ್ಚದ ಶೇ.25ರವರೆಗೆ ನೆರವನ್ನು ಒದಗಿಸಲಾಗುವುದು, ಇದು ಹಾಲಿ ಇರುವ ಜಾಲಗಳೊಂದಿಗೆ ತಡೆರಹಿತ ಸಂಪರ್ಕ ಮತ್ತು ಸಂಯೋಜನೆಯನ್ನು ಖಾತ್ರಿಪಡಿಸುತ್ತದೆ.

ಯೋಜನೆಯ ಆಯ್ಕೆಯನ್ನು ಚಾಲೆಂಜ್ ಮೋಡ್ ಮೂಲಕ ಕೈಗೊಳ್ಳಲಾಗುವುದು, ಉತ್ತಮ ಗುಣಮಟ್ಟದ, ಸುಧಾರಣೆ-ಆಧಾರಿತ ಮತ್ತು ಹೂಡಿಕೆ-ಸಿದ್ಧ ಪ್ರಸ್ತಾವನೆಗಳನ್ನು ಮಾತ್ರ ಮುಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಖಚಿತಪಡಿಸುತ್ತದೆ.

ಭವಿಷ್ಯಕ್ಕೆ ಸಿದ್ಧವಾದ, ಸುಸ್ಥಿರ ಮತ್ತು ದಕ್ಷ ಕೈಗಾರಿಕಾ ಪಾರ್ಕ್ ಗಳು:

ಕೈಗಾರಿಕಾ ಪಾರ್ಕ್ ಗಳನ್ನು ಭವಿಷ್ಯದ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳಾಗಿ ವಿನ್ಯಾಸಗೊಳಿಸಲಾಗುವುದು:

  • ತಡೆರಹಿತ ಬಹುಮಾದರಿ ಸಂಪರ್ಕ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ತುಲುಪುವುದನ್ನು ಸಕ್ರಿಯಗೊಳಿಸಲು ಪಿಎಂ ಗತಿಶಕ್ತಿ ತತ್ವಗಳೊಂದಿಗೆ ಸಂಯೋಜಿಸಲಾಗಿದೆ.
  • ಸಂಯೋಜಿತ ನೆಲದಾಳದ ಉಪಯುಕ್ತತಾ ಕಾರಿಡಾರ್‌ಗಳೊಂದಿಗೆ ಹಸಿರು ಇಂಧನ ಮತ್ತು ಸುಸ್ಥಿರ ಸಂಪನ್ಮೂಲ ಬಳಕೆ ಪರಿಣಾಮಕಾರಿ ನಿರ್ವಹಣೆ ಮತ್ತು ಅಡೆತಡೆಯಿಲ್ಲದ ಕೈಗಾರಿಕಾ ಕಾರ್ಯಾಚರಣೆಗಳಿಗಾಗಿ ಮತ್ತೆ ಅಗೆಯುವ ವಾತಾವರಣವಿಲ್ಲದಂತೆ ಮಾಡುತ್ತದೆ.

ಈ ಪಾರ್ಕ್ ಗಳು ಕೈಗಾರಿಕಾ ಮೂಲಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತವೆ, ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತವೆ ಅಸಮರ್ಥತೆಯನ್ನು ಕಡಿಮೆ ಮಾಡುತ್ತವೆ ಮತ್ತು ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ.

ಪ್ರದೇಶಗಳಾದ್ಯಂತ ಉದ್ಯೋಗಗಳು, ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ:

ಭಾವ್ಯವು ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಚಾಲನೆ ನೀಡುವ ನಿರೀಕ್ಷೆಯಿದೆ, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಸೇವೆಗಳಲ್ಲಿ ಗಣನೀಯ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಗಮನಾರ್ಹ ಹೂಡಿಕೆಗಳನ್ನು ವೇಗವರ್ಧಿಸುತ್ತದೆ/

ಈ ಯೋಜನೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸುತ್ತದೆ, ದೇಶಾದ್ಯಂತ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ರಾಷ್ಟ್ರವ್ಯಾಪಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ಕ್ಲಸ್ಟರ್ ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಮತ್ತು ಕೈಗಾರಿಕೆಗಳು, ಪೂರೈಕೆದಾರರು ಮತ್ತು ಸೇವಾ ಪೂರೈಕೆದಾರರ ಸಹ-ಸ್ಥಳವನ್ನು ಸಕ್ರಿಯಗೊಳಿಸುವ ಮೂಲಕ ಭಾವ್ಯವು ದೇಶೀಯ ಪೂರೈಕೆ ಸರಣಿಯನ್ನು ಬಲಪಡಿಸುತ್ತದೆ, ಪ್ರಾದೇಶಿಕ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ ಮತ್ತು ಲಕ್ಷಾಂತರ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಈ ಯೋಜನೆಯು ಪ್ರಯೋಜನಗಳನ್ನು ಒದಗಿಸುತ್ತದೆ:

  • ಪ್ರಾಥಮಿಕ ಫಲಾನುಭವಿಗಳು: ಉತ್ಪಾದನಾ ಘಟಕಗಳು ಎಂಎಸ್ ಎಂಇಗಳು, ನವೋದ್ಯಮಗಳು ಮತ್ತು ಬಳಕೆಗೆ ಸಿದ್ಧವಾದ ಕೈಗಾರಿಕಾ ಮೂಲಸೌಕರ್ಯವನ್ನು ಬಯಸುವ ಜಾಗತಿಕ ಹೂಡಿಕೆದಾರರು
  • ದ್ವಿತೀಯ ಫಲಾನುಭವಿಗಳು: ಕಾರ್ಮಿಕರು, ಲಾಜಿಸ್ಟಿಕ್ಸ್ ಪೂರೈಕೆದಾರರು, ಸೇವಾ ವಲಯದ ಉದ್ಯಮಗಳು ಮತ್ತು ಸ್ಥಳೀಯ ಸಮುದಾಯಗಳು

ಭಾವ್ಯದ ಅನುಮೋದನೆಯು ಆತ್ಮನಿರ್ಭರ ಭಾರತದ ಕಡೆಗೆ ಭಾರತದ ಪಯಣದಲ್ಲಿ ಒಂದು ಪರಿವರ್ತನೆಯ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಹಾಗೂ ದೇಶದ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ರಫ್ತುಗಳನ್ನು ಹೆಚ್ಚಿಸುತ್ತದೆ ಮತ್ತು ಸ್ಥಿತಿಸ್ಥಾಪಕ, ಅಂತರ್ಗತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಗೆ ಬುನಾದಿ ಹಾಕುತ್ತದೆ.

ಎನ್ ಐ ಸಿ ಡಿ ಸಿ ಕುರಿತು:

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್ ಐ ಸಿ ಡಿ ಸಿ), ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ವಿಶ್ವ ದರ್ಜೆಯ ಗ್ರೀನ್ ಫೀಲ್ಡ್‌ ಕೈಗಾರಿಕಾ ಸ್ಮಾರ್ಟ್ ನಗರಗಳ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ. ಎನ್ ಐಸಿಡಿಸಿ ಸದ್ಯ 13 ರಾಜ್ಯಗಳಲ್ಲಿ 20 ಯೋಜನೆಗಳನ್ನು  ಜಾರಿಗೊಳಿಸುತ್ತಿದೆ.

ಎನ್ ಐಸಿಡಿಸಿ ನೇತೃತ್ವದ ಉಪಕ್ರಮಗಳು ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪಾರ್ಕ್ ಗಳ ಪರಿಕಲ್ಪನೆಯ ಮೇಲೆ ನಿರ್ಮಿಸಲ್ಪಟ್ಟಿವೆ – ಭೂಮಿ, ಸವಲತ್ತುಗಳು, ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪೂರ್ವ-ಅಭಿವೃದ್ಧಿಪಡಿಸಿದ ಬಳಕೆಗೆ ಸಿದ್ಧ ಪೂರಕ ವ್ಯವಸ್ಥೆಗಳು, ಭೂಸ್ವಾಧೀನ ಅಥವಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಳಂಬವಿಲ್ಲದೆ ಕೈಗಾರಿಕೆಗಳು ಕಾರ್ಯಾಚರಣೆಯನ್ನು ತ್ವರಿತವಾಗಿ ಆರಂಭಿಸಲು ಅನುವು ಮಾಡಿಕೊಡುತ್ತದೆ.

 

*****