Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಇಟಲಿ ಸಂಬಂಧಗಳ ಕುರಿತು ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿಯಾಗಿ ಸಂಪಾದಕೀಯ ಲೇಖನ ಬರೆದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಪ್ರಧಾನಮಂತ್ರಿ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಜಂಟಿಯಾಗಿ ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದು, ಅದರಲ್ಲಿ ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹೇಗೆ ನಿರ್ಣಾಯಕ ಹಂತವನ್ನು ತಲುಪಿವೆ ಎಂಬುದನ್ನು ವಿವರಿಸಲಾಗಿದೆ.

ಪ್ರಧಾನಮಂತ್ರಿ ಅವರು ಎರಡೂ ದೇಶಗಳ ನಡುವೆ ಹಂಚಿಕೆಯಾಗಿರುವ ಬಾಂಧವ್ಯವು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ ಎಂದು ಉಲ್ಲೇಖಿಸಿದರು. ಈ ಉತ್ಕೃಷ್ಟವಾದ ಸಂಬಂಧವು ನಾವೀನ್ಯತೆ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಭವಿಷ್ಯದ ಸಾಮಾನ್ಯ ದೂರದೃಷ್ಟಿಯಿಂದ ದೃಢವಾಗಿ ನಡೆಸಲ್ಪಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಭಾರತ-ಇಟಲಿ ಸಂಬಂಧಗಳು ಹೇಗೆ ನಿರ್ಣಾಯಕ ಹಂತವನ್ನು ತಲುಪಿವೆ ಎಂಬುದರ ಕುರಿತು ಪ್ರಧಾನಮಂತ್ರಿ ಮೆಲೋನಿ ಅವರೊಂದಿಗೆ ಅಭಿಪ್ರಾಯ ಲೇಖನವನ್ನು ಬರೆದಿದ್ದೇನೆ. ನಮ್ಮದು ನಾವೀನ್ಯತೆ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಭವಿಷ್ಯದ ಸಾಮಾನ್ಯ ದೂರದೃಷ್ಟಿಯಿಂದ ನಡೆಸಲ್ಪಡುವ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.’’

 

*****