ಪಿಎಂಇಂಡಿಯಾ
ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 10 ಮತ್ತು 11 ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಅಧಿಕೃತ ಭೇಟಿ ನೀಡಿದ್ದರು. 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲೆಂದು ಗುರುತಿಸಲಾಗಿದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಕಾಯಂ ಸ್ನೇಹ ಮತ್ತು ಪಾಲುದಾರಿಕೆಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ.
ಭೇಟಿಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತವನ್ನು ಪಡೆದರು, ಪ್ರಧಾನಮಂತ್ರಿ ಲಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು, ನ್ಯೂಜಿಲೆಂಡ್‌ನಲ್ಲಿರುವ ವಾಣಿಜ್ಯ ಮುಖಂಡರು ಮತ್ತು ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ನ್ಯೂಜಿಲೆಂಡ್ ಕ್ರೀಡಾ ನಾವೀನ್ಯತೆಯ ಪ್ರದರ್ಶನವನ್ನು ವೀಕ್ಷಿಸಿದರು.
2025ರ ಮಾರ್ಚ್ ನಲ್ಲಿ ಪ್ರಧಾನಮಂತ್ರಿ ಲಕ್ಸನ್ ಅವರ ಭಾರತ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿಕೊಂಡರು. ಆ ಸಂದರ್ಭದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಆರಂಭಿಸಲಾಯಿತು ಮತ್ತು ಉಭಯ ದೇಶಗಳು ರಕ್ಷಣೆ, ಶಿಕ್ಷಣ, ಸುಂಕ, ತೋಟಗಾರಿಕೆ, ಅರಣ್ಯ ಮತ್ತು ಕ್ರೀಡೆಯ ಪ್ರಮುಖ ಕ್ಷೇತ್ರಗಳಲ್ಲಿ ಜ್ಞಾಪನಾ ಪತ್ರಗಳಿಗೆ ಸಹಿ ಹಾಕಿದವು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದೀರ್ಘಕಾಲದ ಸ್ನೇಹ, ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಜನರ ನಡುವಿನ ಗಾಢ ಸಂಪರ್ಕಗಳು ಮತ್ತು ಪರಸ್ಪರ ಹಂಚಿಕೊಂಡ ಆಸಕ್ತಿಗಳನ್ನು ಗುರುತಿಸಿ ಇಬ್ಬರೂ ಪ್ರಧಾನಮಂತ್ರಿಗಳು ದ್ವಿಪಕ್ಷೀಯ ಸಂಬಂಧವನ್ನು ‘ಕಾರ್ಯತಾಂತ್ರಿಕ ಪಾಲುದಾರಿಕೆ’ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು. ಅದಕ್ಕೆ ಅನುಗುಣವಾಗಿ ಅವರು ಮುಂದಿನ ನಾಲ್ಕು ವರ್ಷಗಳಲ್ಲಿ ಜಂಟಿ ಕ್ರಮಕ್ಕೆ ಮಾರ್ಗದರ್ಶನ ನೀಡುವ ಚೌಕಟ್ಟಾಗಿ ‘ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆ: 2030ಕ್ಕೆ ನೀಲನಕ್ಷೆ’ಯನ್ನು ಅನುಮೋದಿಸಿದರು.
ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು, ಅಸ್ತಿತ್ವದಲ್ಲಿರುವ ಸಹಕಾರ ಕಾರ್ಯವಿಧಾನಗಳನ್ನು ಬಲವರ್ಧನೆಗೊಳಿಸುವುದು ಮತ್ತು ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯವಾಗಿ ಸಹಕಾರ ವೃದ್ಧಿಸುವ ಹೊಸ ಮಾರ್ಗಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಕಾರ್ಯತಾಂತ್ರಿಕ ಪಾಲುದಾರಿಕೆಗಾಗಿ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ದೂರದೃಷ್ಟಿಯನ್ನು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.
ರಾಜಕೀಯ ಮತ್ತು ರಾಜತಾಂತ್ರಿಕ ಒಳಗೊಳ್ಳುವಿಕೆ
ಉನ್ನತ ಮಟ್ಟದ ರಾಜಕೀಯ ಒಳಗೊಳ್ಳುವಿಕೆ ಹೆಚ್ಚುತ್ತಿರುವ ಆವೇಗವನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಪ್ರಾದೇಶಿಕ ಮತ್ತು ಬಹುಪಕ್ಷೀಯ ಕಾರ್ಯಕ್ರಮಗಳ ನೇಪಥ್ಯದಲ್ಲಿ ಆಯಾ ಪ್ರಧಾನಮಂತ್ರಿಗಳು ಮತ್ತು ಸಚಿವರ ನಡುವೆ ನಿಗದಿತ ಪರಸ್ಪರ ಭೇಟಿಗಳು ಮತ್ತು ಸಭೆಗಳನ್ನು ನಡೆಸಲು ಒಪ್ಪಿಕೊಂಡರು.
2030ರ ನೀಲನಕ್ಷೆಯಡಿಯಲ್ಲಿ ಸಂಬಂಧಕ್ಕೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲು ಮತ್ತು ಪ್ರಗತಿಯನ್ನು ಪರಿಶೀಲಿಸಲು, ಪ್ರಧಾನಮಂತ್ರಿಗಳು ನಿಗದಿತವಾಗಿ ವಿದೇಶಾಂಗ ಸಚಿವರ ಸಂವಾದವನ್ನು ಸ್ಥಾಪಿಸಲು ಮತ್ತು ಭಾರತದ ವಿದೇಶಾಂಗ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಸಚಿವಾಲಯದ ನಡುವೆ ವಾರ್ಷಿಕ ಹಿರಿಯ ಅಧಿಕಾರಿಗಳ ಸಭೆಗಳನ್ನು ನಡೆಸಲು ಉಭಯ ನಾಯಕರು ಒಪ್ಪಿದರು.
ಪರಸ್ಪರ ತಿಳಿವಳಿಕೆಯನ್ನು ಗಾಢವಾಗಿಸಲು ಮತ್ತು ಭಾರತ-ನ್ಯೂಜಿಲೆಂಡ್ ಸಂಬಂಧದ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲವರ್ಧನೆಗೊಳಿಸಲು ಸಂಸದೀಯ ವಿನಿಮಯದ ಪ್ರಮುಖ ಕೊಡುಗೆಯನ್ನು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಭಾರತೀಯ ಸಂಸತ್ತಿನಲ್ಲಿ ಇತ್ತೀಚೆಗೆ ರೂಪಿಸಲಾದ ನ್ಯೂಜಿಲೆಂಡ್‌ಗಾಗಿ ಸಂಸದೀಯ ಸ್ನೇಹ ಗುಂಪು ಮತ್ತು ಸಂಸತ್ತಿನ ಸದಸ್ಯರ ಭೇಟಿಗಳು ಸೇರಿದಂತೆ ಎರಡೂ ದೇಶಗಳ ಸಂಸತ್ತುಗಳ ನಡುವೆ ನಿಗದಿತ ಒಳಗೊಳ್ಳುವಿಕೆಯನ್ನು ಅವರು ಪ್ರೋತ್ಸಾಹಿಸಿದರು.
ರಕ್ಷಣಾ ಮತ್ತು ಭದ್ರತಾ ಸಹಕಾರ
ರಕ್ಷಣಾ ಸಹಕಾರದ ಕುರಿತು 2025ರ ಭಾರತ-ನ್ಯೂಜಿಲೆಂಡ್ ತಿಳಿವಳಿಕೆ ಒಪ್ಪಂದದ ಜಾರಿ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಹಕಾರದಲ್ಲಿನ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ರಕ್ಷಣಾ ಸಚಿವಾಲಯ ಮತ್ತು ಸೇವಾ ಮಟ್ಟದಲ್ಲಿ ನಿಯಮಿತ ರಚನಾತ್ಮಕ ಒಳಗೊಳ್ಳುವಿಕೆಯನ್ನು ಕಾಯ್ದುಕೊಳ್ಳಲು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. 2025ರಲ್ಲಿ ಸಂಯೋಜಿತ ಕಾರ್ಯಪಡೆ 150 (CTF-150) ಅಡಿಯಲ್ಲಿ ಸಹಕಾರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿ, ನ್ಯೂಜಿಲೆಂಡ್ ಕಮಾಂಡ್‌ನಲ್ಲಿ ಮತ್ತು ಭಾರತ ಉಪ ಕಮಾಂಡರ್ ಆಗಿ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಸಾಗರದಲ್ಲಿ ಅಕ್ರಮ ಚಟುವಟಿಕೆಯನ್ನು ತಡೆಯುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ.
ಸಾಗರ ರಾಷ್ಟ್ರಗಳಾಗಿ ಭಾರತ ಮತ್ತು ನ್ಯೂಜಿಲೆಂಡ್ ಉಚಿತ, ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ ಪೆಸಿಫಿಕ್‌ನಲ್ಲಿ ಆಸಕ್ತಿಯನ್ನು ಹಂಚಿಕೊಳ್ಳುತ್ತವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅದಕ್ಕೆ ಅನುಗುಣವಾಗಿ ಅವರು ಹೊಸದಾಗಿ ಮುಕ್ತಾಯಗೊಂಡ ಸಾಗರ ಸಹಕಾರ ಒಪ್ಪಂದ (MCA), ಹೈಡ್ರೋಗ್ರಫಿ ಮತ್ತು ನಾಟಿಕಲ್ ಕಾರ್ಟೋಗ್ರಫಿ ವಿಷಯಗಳಲ್ಲಿ ಸಹಕಾರದ ಅನುಷ್ಠಾನ ವ್ಯವಸ್ಥೆ ಮತ್ತು ಸಾಗರ ವಲಯದ ಮೇಲೆ ಕೇಂದ್ರೀಕರಿಸಿದ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಸಾಗರ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಒಪ್ಪಿಕೊಂಡರು. ಎಂಸಿಎ ಭಾಗವಾಗಿ ದ್ವಿಪಕ್ಷೀಯ ನೌಕಾ ಅಭ್ಯಾಸಗಳು ಸೇರಿದಂತೆ ನೌಕಾ ಚಟುವಟಿಕೆಗಳನ್ನು ಸಹ ಅವರು ಸ್ವಾಗತಿಸಿದರು.
ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದ ಅಡಿಯಲ್ಲಿ ನ್ಯೂಜಿಲೆಂಡ್ ತನ್ನ ಆದ್ಯತೆಯ ಸ್ತಂಭವಾಗಿ ಕಡಲ ಭದ್ರತೆಯನ್ನು ನಾಮನಿರ್ದೇಶನ ಮಾಡಿರುವುದನ್ನು ಭಾರತ ಸ್ವಾಗತಿಸಿತು ಮತ್ತು ಈ ಸ್ತಂಭದ ಅಡಿಯಲ್ಲಿ ನಿರ್ದಿಷ್ಟ ಸಹಕಾರ ಚಟುವಟಿಕೆಗಳನ್ನು ಕಂಡುಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡವು. ಸಹಕಾರ, ಸಮನ್ವಯ ಮತ್ತು ಮಾಹಿತಿ ವಿನಿಮಯವನ್ನು ಬಲಪಡಿಸಲು ವಾರ್ಷಿಕ ಕಡಲ ಭದ್ರತಾ ಸಂವಾದವನ್ನು ಸ್ಥಾಪಿಸಲು ಸಹ ಇಬ್ಬರೂ ನಾಯಕರು ಒಪ್ಪಿಕೊಂಡರು.
ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಮತ್ತು ಸಂಬಂಧಿತ ಭದ್ರತಾ ಸವಾಲುಗಳಲ್ಲಿ ಸಹಕಾರ ಬಲಪಡಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸುವ ದೃಷ್ಟಿಯಿಂದ, ಸಂಬಂಧಿತ ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಂವಾದ ಮತ್ತು ಸಹಯೋಗದ ಮೂಲಕ ನಿಕಟ ಒಳಗೊಳ್ಳುವಿಕೆಯ ಅವಕಾಶಗಳನ್ನು ಹುಡುಕಲು ಸಹ ಅವರು ಒಪ್ಪಿಕೊಂಡರು.
ಅಕ್ರಮ ಮಾದಕವಸ್ತು ಕಳ್ಳಸಾಗಣೆ, ಹಣಕಾಸು ಅಪರಾಧ, ಸೈಬರ್-ಆಧರಿಸಿದ ಅಪರಾಧ, ಭಯೋತ್ಪಾದನೆ-ಸಂಬಂಧಿತ ಅಪರಾಧಗಳು, ಜನರ ಕಳ್ಳಸಾಗಣೆ ಮತ್ತು ವ್ಯಕ್ತಿಗಳ ಕಳ್ಳಸಾಗಣೆ ಸೇರಿ ಅಂತಾರಾಷ್ಟ್ರೀಯ ಮತ್ತು ಸಂಘಟಿತ ಅಪರಾಧಗಳನ್ನು ಎದುರಿಸಲು ಪ್ರಾಯೋಗಿಕ ಕಾನೂನು ಜಾರಿ ಸಹಕಾರವನ್ನು ಬಲಪಡಿಸಲು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಈ ಸಂಬಂಧ ಭಾರತ ಮತ್ತು ನ್ಯೂಜಿಲೆಂಡ್ ಸಂಸ್ಥೆಗಳ ನಡುವೆ ಮಾದಕವಸ್ತು ನಿಗ್ರಹ ಸಹಕಾರ ಮತ್ತು ಕಾನೂನು ಜಾರಿ ಸಹಕಾರದ ಕುರಿತ ವ್ಯವಸ್ಥೆಗಳ ಆರಂಭಿಸುವ ಕೆಲಸ ಮಾಡಲು ಅವರು ಒಪ್ಪಿಕೊಂಡರು.
ವ್ಯಾಪಾರ ಮತ್ತು ಆರ್ಥಿಕ ಸಹಕಾರ
ಇಬ್ಬರೂ ಪ್ರಧಾನ ಮಂತ್ರಿಗಳು ವ್ಯಾಪಾರ ಮತ್ತು ಆರ್ಥಿಕ ಸಂಬಂಧದಲ್ಲಿನ ಆವೇಗವನ್ನು ಸ್ವಾಗತಿಸಿದರು ಮತ್ತು ಬೆಳವಣಿಗೆಗೆ ಗಮನಾರ್ಹ ಅವಕಾಶಗಳಿವೆ ಎಂಬುದನ್ನು ಗುರುತಿಸಿದರು. ಸರಕು ಮತ್ತು ಸೇವೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 2030 ರ ವೇಳೆಗೆ NZ$7 ಬಿಲಿಯನ್ ಅಥವಾ ಸುಮಾರು ₹35,000 ಕೋಟಿಗೆ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವತ್ತ ಕಾರ್ಯನಿರ್ವಹಿಸಲು ಅವರು ಒಪ್ಪಿಗೆ ನೀಡಿದರು. ವ್ಯವಹಾರಗಳು ಸಂಪರ್ಕಗಳನ್ನು ಗಾಢವಾಗಿಸಲು, ಅವಕಾಶಗಳನ್ನು ಅನ್ವೇಷಿಸಲು ಮತ್ತು ಎರಡು ಆರ್ಥಿಕತೆಗಳ ನಡುವಿನ ಪೂರಕತೆಗಳ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದವು.
ಸಮತೋಲಿತ, ಸಮಗ್ರ ಮತ್ತು ಪರಸ್ಪರ ಪ್ರಯೋಜನಕಾರಿ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ)ದ ತೀರ್ಮಾನ ಮತ್ತು ಸಹಿಯನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಅದರ ಆರಂಭಿಕ ಜಾರಿಗೆ ಮತ್ತು ಪರಿಣಾಮಕಾರಿ ಜಾರಿಯನ್ನು ಖಾತ್ರಿಪಡಿಸಿಕೊಳ್ಳಲು ಒಗ್ಗೂಡಿ ಕಾರ್ಯನಿರ್ವಹಿಸಲು ಒಪ್ಪಿಕೊಂಡರು.
ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು, ಸಹಕಾರವನ್ನು ವೃದ್ಧಿಸುವುದು ಮತ್ತು ನ್ಯೂಜಿಲೆಂಡ್ ಭಾರತದಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು ಸೇರಿ ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಎಫ್ ಟಿಎ ದ ಪ್ರಮುಖ ಪಾತ್ರವನ್ನು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. ವ್ಯಾಪಾರ, ಕೃಷಿ, ಕೌಶಲ್ಯ, ನಾವೀನ್ಯತೆ, ಶುದ್ಧ ಇಂಧನ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರ ಸೇರಿದಂತೆ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಭಾರತದ ವಿಕಸಿತ ಭಾರತ ಗುರಿಯನ್ನು ನ್ಯೂಜಿಲೆಂಡ್ ಬೆಂಬಲಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಆರ್ಥಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಪ್ರವಾಸೋದ್ಯಮದ ಸಕಾರಾತ್ಮಕ ಪಾತ್ರವನ್ನು ಗುರುತಿಸಿದ ಅವರು, ಪ್ರವಾಸೋದ್ಯಮದ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನೇರ ತಡೆರಹಿತ ವಿಮಾನಗಳ ಸಂಚಾರವನ್ನು ಆರಂಭಿಸಲು ಅವರು ಮತ್ತೊಮ್ಮೆ ವಿಮಾನಯಾನ ಸಂಸ್ಥೆಗಳನ್ನು ಉತ್ತೇಜಿಸಿದರು.
ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸೇರಿ ಪ್ರಾಥಮಿಕ ಕೈಗಾರಿಕೆಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಈ ಸಹಕಾರವು ಉತ್ಪಾದಕತೆ, ಆಹಾರ ಸುರಕ್ಷತೆ, ಸುಸ್ಥಿರತೆ, ಸುಗ್ಗಿಯ ನಂತರದ ಕಟಾವು ವ್ಯವಸ್ಥೆಗಳು ಮತ್ತು ಮೌಲ್ಯ ಸರಣಿ ಅಭಿವೃದ್ಧಿಯಲ್ಲಿ ನ್ಯೂಜಿಲೆಂಡ್‌ನ ಜಾಗತಿಕವಾಗಿ ಗುರುತಿಸಲ್ಪಟ್ಟ ಪರಿಣತಿಯನ್ನು ಆಧರಿಸಿದೆ ಮತ್ತು ಸುಸ್ಥಿರ ಕೃಷಿ ಬೆಳವಣಿಗೆಗೆ ಭಾರತದ ಆದ್ಯತೆಗಳನ್ನು ಬೆಂಬಲಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೀವಿಹಣ್ಣು, ಸೇಬು ಮತ್ತು ಜೇನುತುಪ್ಪದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕ್ರಿಯಾ ಯೋಜನೆಗಳಲ್ಲಿ ಭಾರತದೊಂದಿಗೆ ನ್ಯೂಜಿಲೆಂಡ್‌ನ ಪ್ರಾಯೋಗಿಕ ಸಹಕಾರಕ್ಕಾಗಿ ಪ್ರಮುಖ ವೇದಿಕೆಯಾಗಿ ಕೃಷಿ ಉತ್ಪಾದಕತಾ ಪಾಲುದಾರಿಕೆಗಳನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಭಾರತದಲ್ಲಿ ಕೀವಿಹಣ್ಣುಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆಗೆ ನ್ಯೂಜಿಲೆಂಡ್‌ನ ಬೆಂಬಲ ಉಲ್ಲೇಖಿಸಿದ ಅವರು ಕೃಷಿ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಸಂಪರ್ಕಗಳನ್ನು ಬೆಂಬಲಿಸುವ ಶಿಕ್ಷಣ ಮತ್ತು ಸಾಂಸ್ಥಿಕ ಸಹಯೋಗಗಳನ್ನು ಸ್ವಾಗತಿಸಿದರು. ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಸಹಕಾರ ಜ್ಞಾಪನಾ ಪತ್ರ ಅಂತಿಮಗೊಂಡಿರುವುದನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು.
ಸಮುದ್ರಯಾನ ಸಾಮರ್ಥ್ಯ ಪ್ರಮಾಣಪತ್ರಗಳ ಗುರುತಿಸುವಿಕೆಯನ್ನು ಬಲಪಡಿಸುವ ಅವಕಾಶಗಳ ಕುರಿತು ಭಾರತದ ಹಡಗು ನಿರ್ದೇಶನಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಕಡಲ ನ್ಯೂಜಿಲೆಂಡ್‌ನ ಸಾಗರ ಸಚಿವಾಲಯದ ನಡುವಿನ ನಿರಂತರ ಸಂವಾದವನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ನಾವಿಕರ ಸಾಮರ್ಥ್ಯ ಪ್ರಮಾಣಪತ್ರಗಳ ವರ್ಧಿತ ಗುರುತಿಸುವಿಕೆಯು ನಾವಿಕರ ಓಡಾಟವನ್ನು ಬೆಂಬಲಿಸುತ್ತದೆ, ನಾವಿಕರ ಅಧಿಕಾರಿಗಳ ನಡುವಿನ ಸಹಕಾರವನ್ನು ಬಲಪಡಿಸುತ್ತದೆ ಮತ್ತು ಎರಡೂ ದೇಶಗಳ ನಾವಿಕ ಕೈಗಾರಿಕೆಗಳ ಸ್ಥಿತಿಸ್ಥಾಪಕತ್ವ ಮತ್ತು ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು.
ಜನರು, ಸಂಸ್ಕೃತಿ ಮತ್ತು ಕ್ರೀಡೆ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಜನರ ನಡುವಿನ ಸದೃಢ ಸಂಬಂಧಗಳನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ನ್ಯೂಜಿಲೆಂಡ್ ನಲ್ಲಿನ ಭಾರತೀಯ ಸಮುದಾಯ ಅಲ್ಲಿಯ ಜನರೊಂದಿಗೆ ಬೆರೆತಿದೆ ಮತ್ತು ನ್ಯೂಜಿಲೆಂಡ್ ನ ವೈವಿಧ್ಯಮಯ ಸಮಾಜದ ಮೌಲ್ಯವನ್ನು ಗುರುತಿಸಿದೆ. ಅಲ್ಲದೆ ಎರಡೂ ದೇಶಗಳ ನಡುವಿನ ಜೀವಂತ ಸೇತುವೆಯಾಗಿ ಕಾರ್ಯ ನಿರ್ವಹಿಸಿದೆ ಎಂದು ಗುರುತಿಸಲಾಯಿತು. ಸಮುದಾಯ, ನ್ಯೂಜಿಲೆಂಡ್ ನ ಆರ್ಥಿಕತೆ, ಸಮಾಜ, ಸಂಸ್ಕೃತಿ, ಸಾರ್ವಜನಿಕ ಮತ್ತು ಕ್ರೀಡಾ ಜೀವನಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಉಭಯ ನಾಯಕರು ಶ್ಲಾಘಿಸಿದರು.
2026ರಲ್ಲಿ ಏಕತೆಯ ಮೂಲಕ ಕ್ರೀಡೆಯ 100ನೇ ವರ್ಷಾಚರಣೆಯನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಅಲ್ಲದೆ ಅವರು ಕ್ರೀಡೆಯಲ್ಲಿ ಭಾರತ, ನ್ಯೂಜಿಲೆಂಡ್ ಜಂಟಿ ಕ್ರಿಯಾ ಯೋಜನೆಯನ್ನು ಸ್ವಾಗತಿಸಿದರು. ಇದು ಕ್ರೀಡೆಯಲ್ಲಿ ಗರಿಷ್ಠ ಸಾಧನೆ, ತರಬೇತಿ, ಕ್ರೀಡಾ ವಿಜ್ಞಾನ, ಕ್ರೀಡಾ ಪಾಲ್ಗೊಳ್ಳುವಿಕೆ, ಕ್ರೀಡಾ ವ್ಯಾಪಾರ ಮತ್ತು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಮೂಲಕ ವಿಚಾರ ವಿನಿಮಯಕ್ಕೆ ಒತ್ತು ನೀಡುವ ದ್ವಿಪಕ್ಷೀಯ ಚೌಕಟ್ಟನ್ನು ಒದಗಿಸಲಿದೆ.
ಸಾಂಪ್ರದಾಯಿಕ ಔಷಧದಲ್ಲಿ ಸಹಭಾಗಿತ್ವ ಸೇರಿದಂತೆ ಭಾರತ – ನ್ಯೂಜಿಲೆಂಡ್ ನಡುವೆ ಸಾಂಸ್ಕೃತಿಕ ಸಹಕಾರ ಬಲವರ್ಧನೆ ಮುಂದುವರಿಸುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಸಾಂಸ್ಕೃತಿಕ ಸಹಕಾರ ಆರಂಭವನ್ನೂ ಸ್ವಾಗತಿಸಿದರು. ಭಾರತದ ಲೋಥಾಲ್ ನ ರಾಷ್ಟ್ರೀಯ ಸಾಗರ ಪಾರಂಪರಿಕ ಸಂಕೀರ್ಣ ಮತ್ತು ನ್ಯೂಜಿಲೆಂಡ್ ನ ಸಾಗರ ಮ್ಯೂಜಿಯಂ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಉಪಕ್ರಮಗಳು ಜನರ ನಡುವಿನ ಸಂಪರ್ಕ ಬಲವರ್ಧನೆಗೆ ಮೌಲ್ಯಯುತ ಕೊಡುಗೆ ನೀಡಲಿದೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಮಕಾಲೀನ ಸೃಜನಶೀಲತೆ ಮತ್ತು ಉಭಯ ದೇಶಗಳ ನಡುವಿನ ದೀರ್ಘಕಾಲದ ಸಾಗರ ಸಂಬಂಧಗಳನ್ನು ಬಲವರ್ಧನೆಗೊಳಿಸಲಿವೆ ಎಂದು ಉಲ್ಲೇಖಿಸಿದರು.
ಶಿಕ್ಷಣ, ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿಪತ್ತು ನಿರ್ವಹಣೆ
ದ್ವಿಪಕ್ಷೀಯ ಸಂಬಂಧಗಳಲ್ಲಿ ಶಿಕ್ಷಣ, ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಾವೀನ್ಯತೆ ಪ್ರಮುಖ ಅಂಶಗಳಾಗಿವೆ ಎಂದು ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಕೃಷಿ, ಹವಾಮಾನ, ಡಿಜಿಟಲ್ ಪರಿವರ್ತನೆ, ವಿಜ್ಞಾನ ಮತ್ತು ನಾವೀನ್ಯತೆ ಹಾಗು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ ವಲಯಗಳಲ್ಲಿ ಪಾಲುದಾರಿಕೆ ನಿರ್ಮಾಣ ಹಾಗೂ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಒಪ್ಪಂದಗಳನ್ನು ಉಭಯ ನಾಯಕರು ಉತ್ತೇಜಿಸಿದರು.
ಶಿಕ್ಷಣ, ಸಂಬಂಧದ ಪ್ರಮುಖ ಆಧಾರಸ್ತಂಭ ಎಂಬುದನ್ನು ಗುರುತಿಸಿದ ಪ್ರಧಾನಮಂತ್ರಿಗಳು, ಜನರ ನಡುವಿನ ಸಂಪರ್ಕ, ಕೌಶಲ್ಯಾಭಿವೃದ್ಧಿ, ಸಂಶೋಧನಾ ಸಹಭಾಗಿತ್ವ ಮತ್ತು ದೀರ್ಘಕಾಲದ ಆರ್ಥಿಕ ಪಾಲುದಾರಿಕೆಗೆ ಒತ್ತು ನೀಡಲಾಗುತ್ತಿದೆ ಎಂದರು. ಉಭಯ ದೇಶಗಳ ನಡುವಿನ ಶಿಕ್ಷಣ ಸಂಸ್ಥೆಗಳ ನಡುವೆ ಸಂಬಂಧ ವೃದ್ಧಿಯಾಗುತ್ತಿರುವುದುನ್ನು ಸ್ವಾಗತಿಸಿದ ಅವರು, ವಿದ್ಯಾರ್ಥಿಗಳ ಸಂಚಾರ, ಸಾಂಸ್ಥಿಕ ಪಾಲುದಾರಿಕೆ, ನಾವೀನ್ಯತೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮೂಲಕ ಸಹಕಾರ ಸಂಬಂಧವನ್ನು ಬಲವರ್ಧನೆಗೊಳಿಸಲು ಒಪ್ಪಿದರು. 2025ರ ಶಿಕ್ಷಣ ಸಹಕಾರ ಒಪ್ಪಂದದ ಜಾರಿಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ ಅವರು, ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಹೊಸ ಹೊಸ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ ಮತ್ತು ಸಂಸ್ಥೆಗಳ ನಡುವೆ ಸಹಯೋಗಗಳು ಏರ್ಪಟ್ಟಿವೆ ಎಂದರು.
ಹವಾಮಾನ ವೈಪರೀತ್ಯದಲ್ಲಿ ಸವಾಲುಗಳಿವೆ ಎಂಬುದನ್ನು ಗುರುತಿಸಿದ ಪ್ರಧಾನಮಂತ್ರಿಗಳು, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಹಾಗೂ ಹವಾಮಾನ ನಿಗ್ರಹ ಆರ್ಥಿಕತೆಯತ್ತ ಸಾಗಬೇಕಾಗಿದೆ ಎಂದರು. ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೂಲಕ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕಿದೆ ಎಂಬುದನ್ನು ಒಪ್ಪಿಕೊಂಡ ಅವರು, ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಯನ್ನು ಸ್ವಾಗತಿಸಿದರು. ನ್ಯೂಜಿಲೆಂಡ್, ಜಾಗತಿಕ ಜೈವಿಕ ಅನಿಲ ಮೈತ್ರಿಗೆ ಸೇರ್ಪಡೆಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.
ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯೂಜಿಲೆಂಡ್ ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ನಡುವೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ವಿಪತ್ತು ಅಪಾಯ ತಗ್ಗಿಸುವುದು, ಸಿದ್ಧತೆ, ಸ್ಪಂದನೆ, ಚೇತರಿಕೆ ಮತ್ತು ಸ್ಥಿತಿ ಸ್ಥಾಪಕತ್ವ ವಿಷಯಗಳಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ಬಲವರ್ಧನೆಗೊಳ್ಳಲಿದೆ ಎಂದು ಪುನರುಚ್ಛರಿಸಿದರು. ಇದರಿಂದ ಉಭಯ ದೇಶಗಳ ಸಮುದಾಯಗಳು, ಮೂಲಸೌಕರ್ಯಗಳು ಮತ್ತು ಸಂಸ್ಥೆಗಳು ಸ್ಥಿತಿ ಸ್ಥಾಪಕತ್ವ ಹೊಂದಲಿವೆ ಎಂದು ಹೇಳಿದರು.
ಹೆಚ್ಚಿನ ಸುಸ್ಥಿರ, ಉತ್ಪಾದಕ ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಕೃಷಿ ಮತ್ತು ಆಹಾರ ವ್ಯವಸ್ಥೆಯನ್ನು ಬೆಂಬಲಿಸಲು ಅತ್ಯಾಧುನಿಕ ಸಂಶೋಧನೆ, ನಾವೀನ್ಯತೆ ಮತ್ತು ವಾಸ್ತವ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎದುರು ನೋಡುತ್ತಿದ್ದೇವೆ ಎಂದು ಪ್ರಧಾನಮಂತ್ರಿಗಳು ಹೇಳಿದರು.
ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ
ಇಂಡೋ – ಪೆಸಿಫಿಕ್ ಗೆ ಸಂಬಂಧಿಸಿದಂತೆ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡ ಪ್ರಧಾನಮಂತ್ರಿಗಳು, ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಉಚಿತ, ಮುಕ್ತ ಹಾಗೂ ಶಾಂತಿಯುತ ಮತ್ತು ಸಮೃದ್ಧ ವಾತಾವರಣ ನಿರ್ಮಾಣ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿದರು. ಅಲ್ಲಿ ಪ್ರಾದೇಶಿಕ ಭೌಗೋಳಿಕತೆಯನ್ನು ಗೌರವಿಸಬೇಕು ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕು ಎಂದರು.
ಇಬ್ಬರು ನಾಯಕರು ನೌಕಾ ಸ್ವಾತಂತ್ರ್ಯವನ್ನು ಪುನರುಚ್ಛರಿಸಿದರು ಮತ್ತು ನ್ಯಾಯಯುತವಾಗಿ ಅಂದರೆ ಅಂತಾರಾಷ್ಟ್ರೀಯ ಕಾನೂನು, ವಿಶೇಷವಾಗಿ 1982ರ ಸಾಗರಕ್ಕೆ ಸಂಬಂಧಿಸಿದ ವಿಶ್ವ ಸಂಸ್ಥೆಯ ಒಪ್ಪಂದ ಪಾಲನೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಪುನರುಚ್ಛರಿಸಿದರು. ಉಭಯ ದೇಶಗಳು ಅಂತಾರಾಷ್ಟ್ರೀಯ ಕಾನೂನು, ವಿಶೇಷವಾಗಿ ಯುಎನ್ ಸಿಎಲ್ಒಎಸ್ ಗೆ ಅನುಗುಣವಾಗಿ ಶಾಂತಿಯುತ ರೀತಿಯಲ್ಲಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದವು. ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಭದ್ರತೆ ಮತ್ತು ಸಮೃದ್ಧಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದರು.
ಆಸಿಯಾನ್ ನೇತೃತ್ವ, ಪೂರ್ವ ಏಷ್ಯಾ ಶೃಂಗಸಭೆ ಸೇರಿದಂತೆ ಇತರೆ ಪ್ರಾದೇಶಿಕ ಮಟ್ಟದಲ್ಲಿ ಸಹಕಾರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ನಾಯಕರು, ಆಸಿಯಾನ್ ಪ್ರಾದೇಶಿಕ ವೇದಿಕೆ ಮತ್ತು ಆಸಿಯಾನ್ ರಕ್ಷಣಾ ಸಚಿವರ ಸಭೆಗಳನ್ನು ಉಲ್ಲೇಖಿಸಿದರು. ಇಂಡೋ – ಪೆಸಿಫಿಕ್ ಪ್ರಾಂತ್ಯದಲ್ಲಿ ಆಸಿಯಾನ್ ಆಯಾಮ ಮತ್ತು ಆಸಿಯಾನ್ ತಟಸ್ಥತೆ, ಪ್ರಾಮುಖ್ಯತೆಯನ್ನು ನಾಯಕರು ಪುನರುಚ್ಛರಿಸಿದರು.
ಪ್ರಧಾನಮಂತ್ರಿಗಳು, ವಿಶ್ವಸಂಸ್ಥೆಯ ಸುತ್ತ ಅತ್ಯಂತ ಪರಿಣಾಮಕಾರಿ ಬಹು ಪಕ್ಷೀಯ ವ್ಯವಸ್ಥೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸಮಕಾಲೀನ ಭೌಗೋಳಿಕ – ರಾಜಕೀಯ ಸನ್ನಿವೇಶಗಳನ್ನು ಉತ್ತಮ ರೀತಿಯಲ್ಲಿ ಪ್ರತಿಬಿಂಬಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂಯೇತರ ವಿಭಾಗಗಳಲ್ಲಿ ದಿಟ್ಟ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ನ್ಯೂಜಿಲೆಂಡ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಮತ್ತು ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂಬುದನ್ನು ಬೆಂಬಲಿಸಲಾಗುವುದು ಎಂದು ಪುನರುಚ್ಛರಿಸಿತು.
ಉಭಯ ದೇಶಗಳು ಜಾಗತಿಕ ಶಾಂತಿ ಮತ್ತು ಭದ್ರತೆ, ಸಾರ್ವತ್ರಿಕತೆ, ತಾರತಮ್ಯ ರಹಿತ ಮತ್ತು ಪರಿಶೀಲನೆ ಮಾಡುವಂತಹ ಅಣು ನಿಶಸ್ತ್ರೀಕರಣ ಹಾಗೂ ಜಾಗತಿಕ ತಟಸ್ಥ ನೀತಿಯನ್ನು ಎತ್ತಿಹಿಡಿಯುವ ಬದ್ಧತೆಯನ್ನು ಪುನರುಚ್ಛರಿಸಿದವು. ಭಾರತದ ಶುದ್ಧ ಇಂಧನ ಗುರಿಗಳು ಮತ್ತು ಅದರ ಪ್ರಸರಣ ರಹಿತ ರುಜುವಾತುಗಳ ಮುನ್ಸೂಚನೆಯ ಸಂದರ್ಭದಲ್ಲಿ, ಪರಮಾಣು ಪೂರೈಕೆದಾರರ ಗುಂಪಿಗೆ ಭಾರತ ಸೇರುವ ಮೌಲ್ಯವನ್ನು ಪ್ರಧಾನ ಮಂತ್ರಿಗಳು ಮತ್ತೊಮ್ಮೆ ಒಪ್ಪಿಕೊಂಡರು.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಗಳ ಕುರಿತು ಆತಂಕ ವ್ಯಕ್ತಪಡಿಸಿದ ಪ್ರಧಾನಮಂತ್ರಿಗಳು, ಎಲ್ಲ ದೇಶಗಳು ಸಂಯಮವನ್ನು ಕಾಯ್ದುಕೊಳ್ಳಬೇಕು. ಉದ್ವಿಗ್ನತೆಯನ್ನು ತಗ್ಗಿಸಬೇಕು ಮತ್ತು ನಾಗರಿಕರ ರಕ್ಷಣೆಯನ್ನು ಖಾತ್ರಿಪಡಿಸಬೇಕು ಎಂದು ಕರೆ ನೀಡಿದರು. ಹೊರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ವಾಣಿಜ್ಯ ಚಟುವಟಿಕೆ ಮತ್ತು ನೌಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಪುನರ್ ಸ್ಥಾಪಿಸಬೇಕು ಮತ್ತು ಹಡಗುಗಳ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದು ಎಂದು ಕರೆ ನೀಡಿದರು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಪ್ರಾಮುಖ್ಯತೆಯನ್ನು ಪುನರುಚ್ಛರಿಸಿದ ಅವರು, ಅಂತಾರಾಷ್ಟ್ರೀಯ ಕಾನೂನಿಗೆ ಒಳಪಟ್ಟು, ಸಂಘರ್ಷಕ್ಕೆ ಶಾಂತಿಯುತ ಮತ್ತು ಕಾಯಂ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಪುನರುಚ್ಛರಿಸಿದರು.
ಸ್ಥಿರ, ಪಾರದರ್ಶಕ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಣಿಗಳ ಮಹತ್ವವನ್ನು ಪ್ರಧಾನ ಮಂತ್ರಿಗಳು ಚರ್ಚಿಸಿದರು. ಅಂತಾರಾಷ್ಟ್ರೀಯ ಇಂಧನ ಪೂರೈಕೆ ಸರಣಿಗಳಲ್ಲಿ ಮತ್ತು ಜಾಗತಿಕ ಇಂಧನ ಜಾಲಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವಲ್ಲಿ ಭಾರತ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಅವರು ಗುರುತಿಸಿದರು. ಇಂಡೋ ಪೆಸಿಫಿಕ್‌ನಾದ್ಯಂತದ ಅಡೆತಡೆಗಳ ಪರಿಣಾಮಗಳ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸಿದರು, ಜಾಗತಿಕ ಪೂರೈಕೆ ಮಾರ್ಗಗಳ ಸ್ಥಿರತೆಯು ಈ ಪ್ರದೇಶಕ್ಕೆ ಅತ್ಯಗತ್ಯ ಎಂದು ಉಲ್ಲೇಖಿಸಿದರು. ಪೆಸಿಫಿಕ್ ದ್ವೀಪ ದೇಶಗಳಿಗೆ ಇದು ವಿಶೇಷವಾಗಿ ತೀವ್ರವಾಗಿದೆ ಎಂದು ಅವರು ಉಲ್ಲೇಖಿಸಿ, ಅಲ್ಲಿ ಆರ್ಥಿಕತೆಗಳು ಹೆಚ್ಚು ಒಡ್ಡಿಕೊಳ್ಳುತ್ತವೆ ಮತ್ತು ಹೆಚ್ಚಿನ ತೈಲ ಬೆಲೆಗಳು ವಿದ್ಯುತ್ ಉತ್ಪಾದನೆ, ಸಾಗಣೆ, ಸಾರಿಗೆ, ಕೃಷಿ ಮತ್ತು ಮೀನುಗಾರಿಕೆಯ ವೆಚ್ಚಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿವೆ, ಇದು ಸಾಮಾಜಿಕ ಯೋಗಕ್ಷೇಮ ಮತ್ತು ಆರ್ಥಿಕ ಸುಸ್ಥಿರತೆಯ ಮೇಲೆ ಗಮನಾರ್ಹ ಒತ್ತಡವನ್ನುಂಟುಮಾಡುತ್ತಿದೆ.
ಉಕ್ರೇನ್ ಕುರಿತು ನಾಯಕರು ನಡೆಯುತ್ತಿರುವ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಇದು ಅಪಾರ ಮಾನವ ನೋವು ಮತ್ತು ಜಾಗತಿಕ ಪರಿಣಾಮಗಳನ್ನು ಉಂಟುಮಾಡುತ್ತಿದೆ. ವಿಶ್ವಸಂಸ್ಥೆಯ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಕಾನೂನಿನ ತತ್ವಗಳ ಆಧಾರದ ಮೇಲೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸುವ ಪ್ರಯತ್ನಗಳನ್ನು ಅವರು ಬೆಂಬಲಿಸುತ್ತಲೇ ಇರುತ್ತಾರೆ.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ಎಲ್ಲಾ ಸ್ವರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಇಬ್ಬರೂ ನಾಯಕರು ಸಂಪೂರ್ಣವಾಗಿ ಖಂಡಿಸಿದರು. 2025 ರ ಏಪ್ರಿಲ್ 22 ರಂದು ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು 2025ರ ನವೆಂಬರ್ 10 ರಂದು ನವದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಭಯೋತ್ಪಾದಕ ಕೃತ್ಯವನ್ನು ಇಬ್ಬರೂ ನಾಯಕರು ತೀವ್ರವಾಗಿ ಖಂಡಿಸಿದರು ಮತ್ತು ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಿ ಹೇಳಿದರು. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಮತ್ತು ಸ್ಥಿರವಾದ ವಿಧಾನಕ್ಕೆ ಅವರು ಕರೆ ನೀಡಿದರು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲಗಳು ಮತ್ತು ಸುರಕ್ಷಿತ ತಾಣಗಳನ್ನು ಅಡ್ಡಿಪಡಿಸಲು, ಆನ್‌ಲೈನ್ ಸೇರಿದಂತೆ ಭಯೋತ್ಪಾದಕ ಮೂಲಸೌಕರ್ಯಗಳನ್ನು ಕಿತ್ತುಹಾಕಲು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಕ್ಕೆ ತರುವಂತೆ ಕರೆ ನೀಡಿದರು. ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದ ಎದುರಿಸುವಲ್ಲಿ ಸಹಕಾರವನ್ನು ಬಲಪಡಿಸಲು ಇಬ್ಬರು ನಾಯಕರು ಒಪ್ಪಿಕೊಂಡರು. ಮಾಹಿತಿ ಮತ್ತು ಜ್ಞಾನ ಹಂಚಿಕೆಗೆ ಚೌಕಟ್ಟನ್ನು ಒದಗಿಸುವ ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಪಡೆ (ಜೆಡಬ್ಲ್ಯೂಜಿ) ಸ್ಥಾಪಿಸುವ ಕುರಿತು ಎಂಒಎಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು.
ಇಬ್ಬರೂ ನಾಯಕರು ವಿಶ್ವಸಂಸ್ಥೆ ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ನಿರ್ಬಂಧಗಳ ಸಮಿತಿಯಲ್ಲಿ ಪಟ್ಟಿ ಮಾಡಲಾದ ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳು ಮತ್ತು ಅವುಗಳ ಅಂಗಸಂಸ್ಥೆಗಳು, ನಕಲಿಗಳು, ಪ್ರಾಯೋಜಕರು, ಹಣಕಾಸು ಪೂರೈಕೆದಾರರು ಮತ್ತು ಬೆಂಬಲಿಗರ ವಿರುದ್ಧ ಎಲ್ಲಾ ದೇಶಗಳು ತಕ್ಷಣದ, ಸುಸ್ಥಿರ, ಸಂಘಟಿತ ಮತ್ತು ಕಾಂಕ್ರೀಟ್ ಕ್ರಮ ಕೈಗೊಳ್ಳುವ ತುರ್ತು ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು.
ಉಪಸಂಹಾರ
ಪ್ರಧಾನಮಂತ್ರಿಗಳು ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ನಿಕಟವಾಗಿ ತೊಡಗಿಸಿಕೊಳ್ಳುವಂತೆ ಮತ್ತು 2030 ರ ನೀಲನಕ್ಷೆಯಲ್ಲಿ ನಿಗದಿಪಡಿಸಿದ ಉಪಕ್ರಮಗಳ ಸಕಾಲಿಕ ಜಾರಿಯನ್ನು ಖಾತ್ರಿಪಡಿಸಿಕೊಳ್ಳುವಂತೆ ನಿರ್ದೇಶಿಸಿದರು. ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದನ್ನು ಅವರು ಒಪ್ಪಿಕೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಲಕ್ಸನ್ ಮತ್ತು ಸರ್ಕಾರ ಮತ್ತು ನ್ಯೂಜಿಲೆಂಡ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉನ್ನತ ಮಟ್ಟದ ವಿನಿಮಯದ ಆವೇಗವನ್ನು ಕಾಯ್ದುಕೊಳ್ಳಲು ಮತ್ತು ಭಾರತ-ನ್ಯೂಜಿಲೆಂಡ್ ಕಾರ್ಯತಂತ್ರದ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತು ಕಾರ್ಯನಿರ್ವಹಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
*****
Held extensive and fruitful talks with PM Luxon in Auckland this morning. His own visit to India last year energised our bilateral partnership and my visit today, the first by an Indian Prime Minister in 4 decades, has added further momentum to the India-New Zealand friendship.… pic.twitter.com/W8bpOfAeeE
— Narendra Modi (@narendramodi) July 11, 2026
The areas which were prominently covered in the talks with PM Luxon include trade, technology and investment linkages. We have also developed a strong framework for cooperation in agriculture, dairy and food processing. Equally important is the emphasis on healthcare and… pic.twitter.com/4iHqYUyR8R
— Narendra Modi (@narendramodi) July 11, 2026
PM Luxon and I firmly believe that the greatest strength of our relationship lies in our people-to-people ties. In that spirit, we will enhance cooperation in education, sports, culture, heritage and creative industries.
— Narendra Modi (@narendramodi) July 11, 2026
At the India-New Zealand business event in Auckland, which I attended with PM Luxon, I told business leaders:
— Narendra Modi (@narendramodi) July 11, 2026
India is not only a market.
India is a launchpad for global growth.
Together, let us take this economic partnership to new heights!@chrisluxonmp pic.twitter.com/8M53Lx47zh
This has been a great year for the India-New Zealand partnership. Earlier this year, our nations concluded a Free Trade Agreement in record time and now, we have elevated our ties to a Strategic Partnership. Next up, we wish to double bilateral trade by 2030! https://t.co/IyR5qpUt2X
— Narendra Modi (@narendramodi) July 11, 2026