Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಅಂತಾರಾಷ್ಟ್ರೀಯ ಸಾಗರ ತಳ ಪ್ರಾಧಿಕಾರದ ನಡುವೆ ಪಾಲಿ ಮೆಟಾಲಿಕ್ ಸಲ್ಪೈಡ್ ಗಳ ಶೋಧನೆಗಾಗಿ ಕರಾರಿಗೆ ಅಂಕಿತ ಹಾಕಲು ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಂಚಿಕೆ ಮಾಡಲಾದ 10 ಸಾವಿರ ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಪಾಲಿ ಮೆಟಾಲಿಕ್ ಸಲ್ಫೈಡ್ ಗಳ ಶೋಧನೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಂತಾರಾಷ್ಟ್ರೀಯ ಸಾಗರತಳ ಪ್ರಾಧಿಕಾರ (ಐ.ಎಸ್.ಎ.) ಜೊತೆಗೆ 15 ವರ್ಷಗಳ ಕರಾರಿಗೆ ಭೂವಿಜ್ಞಾನ ಸಚಿವಾಲಯ ಅಂಕಿತ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ. ಈ ಕಾರ್ಯವನ್ನು ಹಿಂದೂ ಮಹಾಸಾಗರದಲ್ಲಿರುವ ಮಧ್ಯ ಮತ್ತು ದಕ್ಷಿಣ ಭಾಗ – ವೆಸ್ಟ್ ಇಂಡೀಸ್ ಶ್ರೇಣಿಯಲ್ಲಿ ನಡೆಸಲಾಗುತ್ತದೆ.

15 ವರ್ಷಗಳ ಕರಾರಿಗೆ ಅಂಕಿತ ಹಾಕಿರುವುದು ಹಿಂದೂ ಮಹಾಸಾಗರದಲ್ಲಿನ ಮಧ್ಯ ಭಾರತ ಶ್ರೇಣಿಯಲ್ಲಿ ಹಂಚಿಕೆ ಮಾಡಲಾದ ಪ್ರದೇಶದಲ್ಲಿ ಮತ್ತು ಹಿಂದೂ ವೆಸ್ಟ್ ಇಂಡೀಸ್ ನ ದಕ್ಷಿಣ ಶ್ರೇಣಿಯಲ್ಲಿ ಪಾಲಿ ಮೆಟಾಲಿಕ್ ಸಲ್ಫೈಡ್ ಗಳ ಶೋಧನೆಯ ಭಾರತದ ವಿಶಿಷ್ಠ ಹಕ್ಕಿನ ರೂಪುರೇಷೆ ಒದಗಿಸಲಿದೆ. ಜೊತೆಗೆ ಚೀಣಾ, ಕೊರಿಯಾ ಮತ್ತು ಜರ್ಮನಿ ಸಕ್ರಿಯವಾಗಿರುವ ಹಿಂದೂ ಮಹಾಸಾಗರದಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸಲಿದೆ. ಈ ಕಾರ್ಯಕ್ರಮವನ್ನು ಭೂ ವಿಜ್ಞಾನ ಸಚಿವಾಲಯವು ಹಲವು ರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳು/ಸಂಸ್ಥೆಗಳ ಪಾಲ್ಗೊಳ್ಳುವಿಕೆಯೊಂದಿಗೆ ಅನುಷ್ಠಾನಗೊಳಿಸಲಿದೆ.

ಹಿನ್ನೆಲೆ:

ವಿವಿಧ ಸ್ವರೂಪಗಳಲ್ಲಿ ಖನಿಜೀಕರಣಗೊಂಡ ಚಿಮಣಿಗಳ ಮೂಲಕ ಬಿಡುಗಡೆಯಾದ ಸಾಗರದ ಹೊರಪದರದ ಆಳದ ಒಳಭಾಗದಿಂದ ಬಂದ ಬಿಸಿ ಶಿಲಾರಸದಲ್ಲಿ ಆಳದ ವರೆಗೆ ಬಿಸಿ ದ್ರವಗಳಲ್ಲಿ ಅಡಕವಾದ ಕಬ್ಬಿಣ, ತಾಮ್ರ, ಸತು, ಬೆಳ್ಳಿ, ಚಿನ್ನ, ಪ್ಲಾಟಿನಂಗಳನ್ನು ಆಳವಾದ ಸಮುದ್ರತಳದ ಪಾಲಿ ಮೆಟಾಲಿಕ್ ಸಲ್ಫೈಡ್ ಗಳು (ಪಿ.ಎಂ.ಎಸ್.) ಒಳಗೊಂಡಿವೆ. ಸಾಗರದ ಶ್ರೇಣಿಗಳಲ್ಲಿನ ಪಿ.ಎಂ.ಎಸ್.ಗಳು ತಮ್ಮ ದೀರ್ಘಕಾಲೀನ ವಾಣಿಜ್ಯ ಮತ್ತು ಕಾರ್ಯತಂತ್ರಾತ್ಮಕ ಮೌಲ್ಯಗಳಿಂದ ವಿಶ್ವಾದ್ಯಂತದ ಆಕರ್ಷಣೆ ಉಳಿಸಿಕೊಂಡಿವೆ.

ಅಂತಾರಾಷ್ಟ್ರೀಯ ಸಾಗರತಳ ಪ್ರಾಧಿಕಾರ (ಐ.ಎಸ್.ಎ.)ವು ವಿಶ್ವಸಂಸ್ಥೆಯ ಸಾಗರ ಕಾನೂನು ಸಮಾವೇಶ (ಯು.ಎನ್.ಸಿ.ಎಲ್.ಓ.ಎಸ್.)ದ ಅಡಿಯಲ್ಲಿ, ಈ ಮುನ್ನ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ (ಎಂ.ಓ.ಇ.ಎಸ್.) ಹಿಂದೂ ಮಹಾಸಾಗರದ ಪ್ರದೇಶದ ಮಧ್ಯ ಭಾರತ ಶ್ರೇಣಿ (ಸಿ.ಐ.ಆರ್) 85 ನೈಋತ್ಯ ಭಾರತ ಶ್ರೇಣಿ (ಎಸ್.ಡಬ್ಲ್ಯು.ಐ.ಆರ್) ವಲಯದಲ್ಲಿ ಪಾಲಿ ಮೆಟಾಲಿಕ್ ಸಲ್ಪೈಡ್ ಶೋಧನೆಗಾಗಿ 15 ವರ್ಷಗಳ ಕ್ರಿಯಾಯೋಜನೆಯೊಂದಿಗೆ 10 ಸಾವಿರ ಚದರ ಕಿಲೋ ಮೀಟರ್ ಪ್ರದೇಶ ಮಂಜೂರಾತಿಗೆ ಸಲ್ಲಿಸಿದ್ದ ಅರ್ಜಿಯನ್ನು ಅನುಮೋದಿಸಿತ್ತು. ಐ.ಎಸ್.ಎ. ಅಂತಾರಾಷ್ಟ್ರೀಯ ಜಲದಲ್ಲಿ ಸಾಗರತಳದಲ್ಲಿರುವ ನಿರ್ಜೀವ ಸಂಪನ್ಮೂಳ ಆಡಳಿತ ನಿರ್ವಹಿಸುತ್ತದೆ.