ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಅಮೆರಿಕ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕುರಿತ ಒಪ್ಪಂದದ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.
ಅನುಕೂಲಗಳು:
• ಒಪ್ಪಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಹಿತಾಸಕ್ತಿಯ ಮಹತ್ವದ ಸೇರ್ಪಡೆಯ ಪೂರಕ ಸಾಮರ್ಥ್ಯಗಳ ಬಲವರ್ಧನೆಗೆ ಸಹಕಾರಿಯಾಗಲಿದೆ.
• ಈ ಒಪ್ಪಂದದಿಂದಾಗಿ ಸಂಶೋಧನೆ ಮತ್ತು ಆವಿಷ್ಕಾರಿ ಪಾಲುದಾರಿಕೆಯಲ್ಲಿ ‘ಉನ್ನತ ಗುಣಮಟ್ಟ’ ಮತ್ತು ಉನ್ನತ ಪರಿಣಾಮ ಉತ್ತೇಜಿಸುವ ಅವಕಾಶ ದೊರಕುವುದಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಮುದಾಯಗಳ ನಡುವೆ ವಿಸ್ತೃತ ರೀತಿಯಲ್ಲಿ ಸಂಬಂಧಗಳು ವಿಸ್ತರಣೆ ಮತ್ತು ಇನ್ನಷ್ಟು ತೆರೆದುಕೊಳ್ಳಲಿವೆ.
ಪ್ರಮುಖಾಂಶಗಳು:
ಈ ಸಹಕಾರದಿಂದಾಗಿ ಈ ಕೆಳಗಿನ ಅಂಶಗಳು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ.
• ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ಮತ್ತು ನೈಪುಣ್ಯತೆಯನ್ನು ವಿನಿಮಯ ಮಾಡಿಕೊಳ್ಳುವುದು.
• ವಿಚಾರ ಸಂಕಿರಣಗಳು ಮತ್ತು ಸಭೆಗಳನ್ನು ಆಯೋಜಿಸುವುದು.
• ವಿಜ್ಞಾನಿಗಳು ಮತ್ತು ತಾಂತ್ರಿಕ ಪರಿಣಿತರಿಗೆ ತರಬೇತಿ ನೀಡುವುದು.
• ಸಹಕಾರ ಸಂಶೋಧನಾ ಯೋಜನೆಗಳನ್ನು ನಡೆಸುವುದು.
• ಸಾರ್ವಜನಿಕ ಖಾಸಗಿ ಪಾಲುದಾರಿಕೆ ಆಧಾರದಲ್ಲಿ ವಿಜ್ಞಾನ ಮತ್ತು ಆವಿಷ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವುದು.
• ಅತ್ಯಾಧುನಿಕ ಸಂಶೋಧನಾ ಸೌಕರ್ಯಗಳನ್ನು ಬಳಕೆ ಮಾಡಿಕೊಳ್ಳುವುದು.