Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಇಥಿಯೋಪಿಯ ನಡುವೆ “ಮಾಹಿತಿ, ಸಂವಹನ ಮತ್ತು ಮಾಧ್ಯಮ ಕ್ಷೇತ್ರದಲ್ಲಿನ ಸಹಕಾರ” ಕುರಿತ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಮತ್ತು ಇಥಿಯೋಫಿಯಾ ನಡುವೆ ‘ಮಾಧ್ಯಮ ಮತ್ತು ಸಂವಹನ ಹಾಗೂ ಮಾಹಿತಿ ಕ್ಷೇತ್ರದಲ್ಲಿನ ಸಹಕಾರ’ಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಸಮಗ್ರ ಅಭಿವೃದ್ಧಿಗಾಗಿ ಎರಡು ದೇಶಗಳ ನಡುವಿನ ಮಾಹಿತಿಯ ಪ್ರಸರಣ ಮತ್ತು ಹೆಚ್ಚುತ್ತಿರುವ ಪ್ರಭಾವಕ್ಕಾಗಿ ಮಾಹಿತಿ, ಸಂವಹನ ಮತ್ತು ಮಾಧ್ಯಮದ ಬೆಳೆಯುತ್ತಿರುವ ಶಕ್ತಿಯನ್ನು ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಇದು ಜನರೊಂದಿಗಿನ ಸಂಪರ್ಕವನ್ನು ವಿನಿಮಯ ಕಾರ್ಯಕ್ರಮಗಳ ಮೂಲಕ ಹೆಚ್ಚಿಸಲಿದೆ. ಇದು ಎರಡೂ ದೇಶಗಳ ನಡುವೆ ಮಾಧ್ಯಮ, ಸಂವಹನ ಮತ್ತು ಮಾಹಿತಿಯ ಕ್ಷೇತ್ರದಲ್ಲಿನ ಹೊಸ ನಾವಿನ್ಯತೆಗಳು ಮತ್ತು ಉತ್ತಮ ಪದ್ಧತಿಗಳ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ.

ಈ ಒಪ್ಪಂದವು ಎರಡೂ ದೇಶಗಳ ನಡುವೆ ಹೆಚ್ಚಿನ ಅವಕಾಶ ಒದಗಿಸಲು ಮತ್ತು ಸಾರ್ವಜನಿಕ ಹೌಣೆಗಾರಿಕೆ ಸೃಷ್ಟಿಸಲು ಸಮೂಹ ಮಾಧ್ಯಮ ಸಾಧನಗಳಾದ ರೇಡಿಯೋ, ಮುದ್ರಣ ಮಾಧ್ಯಮ, ಟಿ.ವಿ., ಸಾಮಾಜಿಕ ತಾಣ ಇತ್ಯಾದಿಗಳ ನಡುವೆ ಸಹಕಾರವನ್ನು ಉತ್ತೇಜಿಸುತ್ತದೆ.

ಈ ಒಪ್ಪಂದವು ಸಾಂಸ್ಥಿಕ ಚೌಕಟ್ಟಿನ ಮೂಲಕ ಎರಡೂ ದೇಶಗಳ ನಡುವೆ ನಿಯೋಗಗಳ, ಸಿಬ್ಬಂದಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ ಮತ್ತು ಎರಡೂ ಕಡೆಯ ಉತ್ತಮ ಪದ್ಧತಿಗಳನ್ನು ತಿಳಿಯುವ ಅವಕಾಶ ಕಲ್ಪಿಸುವ ಮೂಲಕ ನ್ಯಾಯ ಮತ್ತು ಒಳಗೊಳ್ಳುವಿಕೆಯನ್ನು ತರುತ್ತದೆ.

*****