Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಕೆನಡಾದ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳ ನಡುವೆ ಸಹಕಾರ ಕುರಿತ ಒಡಂಬಡಿಕೆಗೆ ಸಂಪುಟದ ಸಮ್ಮತಿ


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಮತ್ತು ಚಾರ್ಟರ್ಡ್ ಪ್ರೊಫೆಷನಲ್ಸ್ ಅಕೌಂಟೆಂಟ್ಸ್ ಆಫ್ ಕೆನಡಾ(ಸಿಪಿಎ ಕೆನಡಾ) ನಡುವಿನ ಒಡಂಬಡಿಕೆಗೆ ಸಮ್ಮತಿ ನೀಡಲಾಯಿತು.

ವಿವರಗಳು:

2011ರಲ್ಲಿ ಸಹಿ ಹಾಕಲ್ಪಟ್ಟ ಒಡಂಬಡಿಕೆಗೆ ಪೂರ್ವಾನ್ವಯ ಅನುಮೋದನೆ ಹಾಗೂ ಐಸಿಎಐ ಇಂಡಿಯಾ ಹಾಗೂ ಕೆನಡಾದ ಸಿಪಿಎ ನಡುವಿನ ಎಂಓಯುಗೆ ಸಂಪುಟವು ಸಮ್ಮತಿ ನೀಡಿದ್ದು, ಇದರಿಂದ ಎರಡೂ ಸಂಸ್ಥೆಗಳ ಸದಸ್ಯರು ಕೆಲವು ನಿರ್ದಿಷ್ಟ ಮಾನದಂಡಗಳಿಗೆ ಅನುಗುಣವಾಗಿ ಪರಸ್ಪರ ಸದಸ್ಯತ್ವ ಪಡೆಯಲು ಒಪ್ಪಂದ ನೆರವಾಗಲಿದೆ. ಪ್ರವೇಶ ಹಂತದ ಚಾರ್ಟರ್ಡ್ ಅಕೌಂಟೆಂಟ್‍ಗಳ ವಿವರಣೆ, ಕಲಿಕೆ ಮತ್ತು ಸಾಮರ್ಥ್ಯ, ಕೌಶಲ ಮತ್ತು ವೃತ್ತಿಪರ ಗುಣಗಳ ಮೌಲ್ಯಮಾಪನ ನಡೆಸಲು ಇನ್ನಷ್ಟು ಸಹಕಾರವನ್ನು ಒಡಂಬಡಿಕೆ ಒಳಗೊಂಡಿದೆ.

ಪರಿಣಾಮ:

ಐಸಿಎಐ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಅವರ ಸಂಘಟನೆಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಮೂಲಕ ಪರಸ್ಪರ ಉಪಯುಕ್ತ ಸಂಬಂಧವನ್ನು ಅಭಿವೃದ್ಧಿ ಪಡಿಸಲು ಕೆಲಸ ಮಾಡುವುದು ಇದರ ಗುರಿ. ಈ ಒಡಂಬಡಿಕೆ ಐಸಿಎಐ ಸದಸ್ಯರು ತಮ್ಮ ವೃತ್ತಿಪರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಒಂದು ಅವಕಾಶವನ್ನು ನೀಡಲಿದ್ದು, ಐಸಿಎಐ ಸ್ಥಳೀಯ ರಾಷ್ಟ್ರಗಳ ಬ್ರ್ಯಾಂಡ್‍ನ್ನು ಸಬಲಗೊಳಿಸುವ ಒಂದು ಸಂಸ್ಥೆಯಾಗಲಿದೆ. ಐಸಿಎಐ ಮತ್ತು ಕೆನಡಾದ ಸಿಪಿಎ ನಡುವಿನ ಕಾರ್ಯನಿಮಿತ್ತ ಸಂಬಂಧವನ್ನು ಒಡಂಬಡಿಕೆ ಇನ್ನಷ್ಟು ಬಲಗೊಳಿಸಲಿದೆ.

ಫಲಾನುಭವಿಗಳು:

ಈ ಒಡಂಬಡಿಕೆ ಭಾರತದ ಹೆಚ್ಚು ಹೆಚ್ಚು ಯುವ ಚಾರ್ಟರ್ಡ್ ಅಕೌಂಟೆಂಟ್‍ಗಳು “ಸಿಪಿಎ ಕೆನಡಾ’ದಿಂದ ವೃತ್ತಿಪರ ಪದನಾಮವನ್ನು ಪಡೆದುಕೊಂಡು, ಕೆನಡಾದಲ್ಲಿ ವೃತ್ತಿ ಅವಕಾಶಗಳನ್ನು ಹುಡುಕಲು ಉತ್ತೇಜನ ನೀಡುವ ಮೂಲಕ ಅವರಿಗೆ ನೆರವಾಗಲಿದೆ. ಕೆನಡದ ಕಂಪನಿಗಳಲ್ಲಿ ಹಲವು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‍ಗಳು ಉನ್ನತ ಸ್ಥಾನಗಳಲ್ಲಿದ್ದು, ಸಿಪಿಎ ಕೆನಡಾದ ಅಂಗೀಕಾರದಿಂದ ಕೆನಡಾದ ಕಾರ್ಪೊರೇಟ್ ಕಂಪನಿಗಳಿಗೆ ಭಾರತೀಯರ ಪ್ರತಿಭೆ ಮತ್ತು ಕೌಶಲಗಳ ಬಗ್ಗೆ ಇನ್ನಷ್ಟು ನಂಬಿಕೆ ಮೂಡಲಿದ್ದು, ಅವರನ್ನು ನೇಮಕಗೊಳಿಸಿಕೊಳ್ಳಲು ಮುಂದಾಗಲಿವೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ಈ ಒಡಂಬಡಿಕೆ ಐಸಿಎಐ ಇಲ್ಲವೇ ಕೆನಡಾದ ಯಾವುದೇ ಪ್ರಾಂತೀಯ ಸಿಪಿಎ ಘಟಕಗಳ ಸದಸ್ಯತ್ವ ಪಡೆದುಕೊಂಡ ಉತ್ತಮ ವೃತ್ತಿನಿರತರಿಗೆ ಅನ್ವಯವಾಗಲಿದ್ದು, ಈ ಸಂಸ್ಥೆ ಗಳು ಕೋರುವ ಶೈಕ್ಷಣಿಕ ಅಗತ್ಯಗಳು, ಪರೀಕ್ಷೆ ಮತ್ತು ಪ್ರಾಯೋಗಿಕ ಅನುಭವದ ಅಗತ್ಯಗಳನ್ನು ಒದಗಿಸುವ ಮೂಲಕ ಅವಕಾಶಗಳನ್ನು ಒದಗಿಸಿಕೊಡಲಿದೆ. ಮೂರನೇ ಪಕ್ಷದವರೊಂದಿಗೆ ಮಾಡಿಕೊಂಡ ಒಪ್ಪಂದದ ಮೂಲಕ ಐಸಿಎಐ ಇಲ್ಲವೇ ಕೆನಡಾದ ಪ್ರಾಂತೀಯ ಸಿಪಿಎ ಘಟಕಗಳ ಸದಸ್ಯತ್ವ ಪಡೆದುಕೊಂಡ ವ್ಯಕ್ತಿಗಳಿಗೆ ಈ ಒಡಂಬಡಿಕೆ ತನ್ನಿಂದತಾನೇ ಅನ್ವಯ ಆಗುವುದಿಲ್ಲ.

ಹಿನ್ನೆಲೆ:

ಐಸಿಎಐ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಪರರನ್ನು ನಿಯಂತ್ರಿಸಲು ಸಂಸತ್ತು ಅಂಗೀಕರಿಸಿದ, 1949ರ ಚಾರ್ಟರ್ಡ್ ಅಕೌಂಟೆಂಟ್‍ಗಳ ಕಾಯಿದೆ ಮೂಲಕ ರಚನೆಯಾದ ಶಾಸನಾತ್ಮಕ ಸಂಸ್ಥೆ. “ಸಿಪಿಎ” ಕೆನಡಾ ಇನ್‍ಸ್ಟಿಟ್ಯೂಟ್, ಕೆನಡಾದ ಲೆಕ್ಕಪತ್ರ ವೃತ್ತಿಪರರನ್ನು ಬೆಂಬಲಿಸಲು ಸ್ಥಾಪನೆಯಾದ ರಾಷ್ಟ್ರೀಯ ಸಂಘಟನೆ.

……….