Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಕೊರಿಯಾ ನಡುವೆ ವ್ಯಾಪಾರ ಪರಿಹಾರಗಳ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಮತ್ತು ಕೊರಿಯಾ ನಡುವೆ ವ್ಯಾಪಾರ ಪರಿಹಾರಗಳ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯ ಅನುಮೋದನೆ ನೀಡಲಾಯಿತು.

ಈ ತಿಳುವಳಿಕಾ ಒಡಂಬಡಿಕೆಗೆ ಕೊರಿಯಾ ಅಧ್ಯಕ್ಷರು 2018 ರ ಜುಲೈಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅಂಕಿತ ಹಾಕಲಾಗಿತ್ತು.

ಈ ತಿಳುವಳಿಕಾ ಒಡಂಬಡಿಕೆ ವ್ಯಾಪಾರ ಪರಿಹಾರಗಳ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸಲಿದೆ. ಡಂಪಿಂಗ್ ವಿರೋಧಿ , ಸಬ್ಸಿಡಿಗಳನ್ನು ನಿಭಾಯಿಸುವ ಮತ್ತು ಸಮತೂಕದ ತೆರಿಗೆ ವಿಧಿಸುವ, ಹಿತಾಸಕ್ತಿ ಕಾಪಾಡುವ ಸುರಕ್ಷಾ ಕ್ರಮಗಳ ಮೂಲಕ ಉಭಯ ದೇಶಗಳ ನಡುವೆ ವ್ಯಾಪಾರ ಬಾಂಧವ್ಯ ಹೆಚ್ಚಿಸಲು ನೆರವಾಗಲಿದೆ.