ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಅನ್ವಯಿಕ ವಿಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನ ವಲಯದಲ್ಲಿ ಸಹಕಾರ ಸಂಬಂಧ ವೃದ್ಧಿಸುವ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು.
ದಕ್ಷಿಣ ಕೊರಿಯಾ ಅಧ್ಯಕ್ಷರು 2018ರ ಜುಲೈ 9ರಂದು ಭಾರತಕ್ಕೆ ಭೇಟಿ ನೀಡಿದ್ದಾಗ ದೆಹಲಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಸುಸ್ಥಿರ ಅಭಿವೃದ್ಧಿ ಉತ್ತೇಜನ ಮತ್ತು ಜೀವನದ ಗುಣಮಟ್ಟ ಹೆಚ್ಚಳದ ದೃಷ್ಠಿಯಿಂದ ಅನ್ವಯಿಕ ವಿಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಉದ್ದೇಶ ಮತ್ತು ಗುರಿಯನ್ನು ಈ ಒಡಂಬಡಿಕೆ ಹೊಂದಿದೆ