Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಬ್ರೆಜಿಲ್ ನಡುವೆ ಆದಾಯದ ಮೇಲಣ ತೆರಿಗೆಗಳಿಗೆ ಸಂಬಂಧಿಸಿ  ಹಣಕಾಸು ಸೋರಿಕೆ ನಿಯಂತ್ರಣ ಮತ್ತು ದುಪ್ಪಟ್ಟು ತೆರಿಗೆ ತಪ್ಪಿಸುವಿಕೆಗೆ ಸಂಬಂಧಿಸಿದ ಸಮಾವೇಶದ ಶಿಷ್ಟಾಚಾರ ತಿದ್ದುಪಡಿಗೆ ಸಂಪುಟದ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಗಣತಂತ್ರ ರಾಷ್ಟ್ರ ಭಾರತ ಮತ್ತು ಒಕ್ಕೂಟ ಗಣತಂತ್ರ ಬ್ರೆಜಿಲ್ ನಡುವೆ ದುಪ್ಪಟ್ಟು ತೆರಿಗೆ ನಿವಾರಣೆ ಮತ್ತು ಆದಾಯದ ಮೇಲಣ ತೆರಿಗೆಗಳಿಗೆ ಸಂಬಂಧಿಸಿದ ಹಣಕಾಸು ಸೋರಿಕೆ ನಿಯಂತ್ರಣ ಕುರಿತ ಸಮಾವೇಶದ ಶಿಷ್ಟಾಚಾರ ತಿದ್ದುಪಡಿಗೆ ಅಂಕಿತಕ್ಕೆ ತನ್ನ ಅನುಮೋದನೆ ನೀಡಿತು. 

ಅನುಷ್ಟಾನ ತಂತ್ರ ಮತ್ತು ಗುರಿಗಳು:

ಸಂಪುಟ ಅನುಮೋದನೆ ಬಳಿಕ, ಶಿಷ್ಟಾಚಾರ ಜಾರಿಗೆ ತರಲು ಬೇಕಾದ  ಅವಶ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಗುವುದು. ಸಚಿವಾಲಯವು ಅನುಷ್ಟಾನದ ಮೇಲೆ ನಿಗಾ ಇರಿಸುವುದು ಮತ್ತು  ವರದಿ ಮಾಡುವುದು.

ಪ್ರಮುಖ ಪರಿಣಾಮಗಳು :

ದುಪ್ಪಟ್ಟು ತೆರಿಗೆ ನಿವಾರಣೆ ಸಮಾವೇಶ (ಡಿ.ಟಿ.ಎ.ಸಿ.ಗಳ) ದ ಪ್ರಸ್ತಾವನೆಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನ್ವಯವಾಗುವಂತೆ ಸಕಾಲಿಕಗೊಳಿಸುವ ಮೂಲಕ , ಭಾರತ ಮತ್ತು ಒಕ್ಕೂಟ ಗಣತಂತ್ರ ಬ್ರೆಜಿಲ್ ಗಳು ಶಿಷ್ಟಾಚಾರ ತಿದ್ದುಪಡಿ ಮಾಡಿ ದುಪ್ಪಟ್ಟು ತೆರಿಗೆಯನ್ನು ನಿವಾರಿಸಲು ಅವಕಾಶ ಮಾಡಿಕೊಟ್ಟಿವೆ. ಡಿ.ಟಿ.ಎ.ಸಿ. ಮೂಲಕ ಗುತ್ತಿಗೆ/ ಒಪ್ಪಂದ ಮಾಡಿಕೊಂಡ  ರಾಷ್ಟ್ರಗಳು ಉಭಯ ದೇಶಗಳ ಹೂಡಿಕೆದಾರರು ಮತ್ತು ವ್ಯಾಪಾರೋದ್ಯಮಿಗಳಿಗೆ  ತೆರಿಗೆ ನಿರ್ದಿಷ್ಟತೆಯನ್ನು ಒದಗಿಸುತ್ತವೆ. ತಿದ್ದುಪಡಿ ಮಾಡಲಾದ ಶಿಷ್ಟಾಚಾರವು ಹೂಡಿಕೆ ಮೂಲ ರಾಷ್ಟ್ರಗಳ ಹೂಡಿಕೆಯ ಮೇಲಣ ಬಡ್ಡಿ , ಗೌರವಧನ ಮತ್ತು ತಾಂತ್ರಿಕ ಸೇವೆಗಳ ಶುಲ್ಕಗಳ ಮೇಲಣ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಹೂಡಿಕೆ ಹರಿವಿಗೆ ಅನುಕೂಲ ಮಾಡಿಕೊಡುತ್ತದೆ. ತಿದ್ದುಪಡಿ ಮಾಡಲಾದ ಶಿಷ್ಟಾಚಾರವು ಜಿ-20 ಒ.ಇ.ಸಿ.ಡಿ. ಮೂಲ ಸವಕಳಿ ಮತ್ತು  ಲಾಭ ವರ್ಗಾವಣೆ  (ಬಿ.ಇ.ಪಿ.ಎಸ್.) ಯೋಜನೆಗಳಿಗೆ ಅನ್ವಯಿಸಿ  ಕನಿಷ್ಟ ಗುಣಮಾನಕಗಳನ್ನು ಅನುಷ್ಟಾನಕ್ಕೆ ತರುತ್ತದೆ. ಮುನ್ನುಡಿ ಪಠ್ಯದ ಸೇರ್ಪಡೆ, ಪ್ರಮುಖ ಉದ್ದೇಶ ಪರೀಕ್ಷೆ, ಡಿ.ಟಿ.ಎ.ಸಿ.ಯಲ್ಲಿ ಅಡಕವಾಗಿರುವ ಸಾಮಾನ್ಯ ದುರುಪಯೋಗ ತಡೆ ಪ್ರಸ್ತಾವನೆಗಳು ಮತ್ತು ಬಿ.ಇ.ಪಿ.ಎಸ್. ಯೋಜನೆಯನ್ವಯ ಸರಳೀಕೃತ ಲಾಭ ಮಿತಿಗಳ ನಿಬಂಧನೆಗಳು ತೆರಿಗೆ ಕಾಯ್ದೆಗಳ ಪರಸ್ಪರ ಹೋಲಿಕೆಯಾಗದ ಅಂಶಗಳು ಮತ್ತು ಲೋಪಗಳ ಮೂಲಕ ಮಾಡಲಾಗುವ ತೆರಿಗೆ ಯೋಜನಾ ತಂತ್ರಗಳನ್ನು ತಡೆಗಟ್ಟುತ್ತವೆ.

ಅಂಶವಾರು ವಿವರಗಳು:

ಎ. ಭಾರತ ಮತ್ತು ಬ್ರೆಜಿಲ್ ನಡುವೆ ಈಗಿರುವ ಡಿ.ಟಿ.ಎ.ಸಿ.ಗೆ 1988 ರ ಏಪ್ರಿಲ್ 26 ರಂದು ಅಂಕಿತ ಹಾಕಲಾಗಿತ್ತು. ಮತ್ತು ಅದನ್ನು 2013 ರ ಅಕ್ಟೋಬರ್ 15 ರಂದು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದ ಶಿಷ್ಟಾಚಾರದ ಮೂಲಕ ತಿದ್ದುಪಡಿ ಮಾಡಿ ಅಂಕಿತ ಹಾಕಲಾಗಿತ್ತು. ಈಗಿನ ಶಿಷ್ಟಾಚಾರದ ಮೂಲಕ ಡಿ.ಟಿ.ಎ.ಸಿ. ಯನ್ನು ಇತರ ವಿವಿಧ ವಿಷಯಗಳಿಗೆ ಸಂಬಂಧಿಸಿ ತಿದ್ದುಪಡಿ ಮಾಡಲಾಗಿದೆ.

ಬಿ. ತಿದ್ದುಪಡಿ  ಮಾಡಲಾದ ಡಿ.ಟಿ.ಎ.ಸಿ.ಯು ಜಿ-20 ಒ.ಇ.ಸಿ.ಡಿ ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ (ಬಿ.ಇ.ಪಿ.ಎಸ್.) ಯೋಜನೆಗಳ ಕನಿಷ್ಟ ಗುಣಮಾನಕಗಳು ಹಾಗು ಇತರ ಶಿಫಾರಸುಗಳನ್ನು ಅನುಷ್ಟಾನಿಸುತ್ತದೆ.

ಹಿನ್ನೆಲೆ:

ಭಾರತ ಮತ್ತು ಬ್ರೆಜಿಲ್ ನಡುವೆ ಈಗಿರುವ ದುಪ್ಪಟ್ಟು ತೆರಿಗೆ  ನಿವಾರಣೆ ಸಮಾವೇಶ (ಡಿ.ಟಿ.ಎ.ಸಿ.) ಬಹಳ ಹಳೆಯದಾಗಿದ್ದು, ಅಂತಾರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದನ್ನು ಆಧುನೀಕರಿಸಲು ಮತ್ತು ಜಿ.20 ಒ.ಇ.ಸಿ.ಡಿ. ಮೂಲ ಸವಕಳಿ ಹಾಗು ಲಾಭ ವರ್ಗಾವಣೆ ಯೋಜನೆಗಳ (ಬಿ.ಇ.ಪಿ.ಎಸ್.) ಶಿಫಾರಸುಗಳನ್ನು ಅನುಷ್ಟಾನಿಸುವುದಕ್ಕಾಗಿ ತಿದ್ದುಪಡಿ ಮಾಡಬೇಕಾದ ಅಗತ್ಯವಿತ್ತು.