Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಯನೈಟೆಡ್ ಕಿಂಗ್ದಂ ಹಾಗು ಉತ್ತರ ಐರ್ಲೆಂಡ್ ನಡುವೆ ಅಂತಾರಾಷ್ಟ್ರೀಯ ಅಪರಾಧೀಕರಣ ಮತ್ತು ಗಂಭೀರ ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಸಂಬಂಧಿಸಿ ಮಾಹಿತಿ ವಿನಿಮಯ ಮತ್ತು ಸಹಕಾರಕ್ಕೆ ಸಂಬಂಧಿಸಿದ ತಿಳುವಳಿಕಾ ಒಪ್ಪಂದಕ್ಕೆ ಸಂಪುಟ ಅಂಗೀಕಾರ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಯನೈಟೆಡ್ ಕಿಂಗ್ದಂ ಹಾಗು ಉತ್ತರ ಐರ್ಲೆಂಡ್ ನಡುವೆ ಅಂತಾರಾಷ್ಟ್ರೀಯ ಅಪರಾಧೀಕರಣ ಮತ್ತು ಗಂಭೀರ ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಸಂಬಂಧಿಸಿ ಮಾಹಿತಿ ವಿನಿಮಯ ಮತ್ತು ಸಹಕಾರಕ್ಕೆ ಸಂಬಂಧಿಸಿದ ತಿಳುವಳಿಕಾ ಒಪ್ಪಂದಕ್ಕೆ ಅಂಕಿತ ಹಾಕಿರುವುದಕ್ಕೆ ಅಂಗೀಕಾರ ನೀಡಿತು.

ಭಾರತ ಮತ್ತು ಯುನೈಟೆಡ್ ಕಿಂಗ್ಡಂಗಳು ಅಪರಾಧಗಳ ತನಿಖೆ ಮತ್ತು ವಿಚಾರಣೆ, ಹಾಗು ಅಪರಾಧದ ಪತ್ತೆ, ತಡೆ ಮತ್ತು ಸಲಕರಣೆಗಳನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ( ಕರೆನ್ಸಿ ವರ್ಗಾವಣೆಯ ಅಪರಾಧವೂ ಸೇರಿದಂತೆ ) ಮತ್ತು ಭಯೋತ್ಪಾದಕರ ನಿಧಿಯನ್ನು ವಶಪಡಿಕೊಳ್ಳುವ ಒಪ್ಪಂದವನ್ನು ಈಗಾಗಲೇ ಹೊಂದಿವೆ. ಈ ಒಪ್ಪಂದಕ್ಕೆ 1995 ರಲ್ಲೆ ಅಂಕಿತ ಹಾಕಲಾಗಿದ್ದು, ಉಭಯ ದೇಶಗಳೂ ಅಂತಾರಾಷ್ಟ್ರೀಯ ಅಪರಾಧಗಳು ಮತ್ತು ಗಂಭೀರ ಸಂಘಟಿತ ಅಪರಾಧಗಳ ವಿರುದ್ದ ಹೋರಾಡಲು ಸಹಕಾರವನ್ನು ಬಲಪಡಿಸಲು ಆಶಿಸಿವೆ. ಈ ತಿಳುವಳಿಕಾ ಒಡಂಬಡಿಕೆ ಭದ್ರತಾ ಕ್ಷೇತ್ರದಲ್ಲಿ ದ್ವಿಪಕ್ಷೀಯವಾಗಿ ಲಾಭದಾಯಕವಾಗುವ ಸಹಯೋಗವನ್ನು ಮರುಸ್ಥಾಪಿಸಲಿದೆ.