ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ತಿದ್ದುಪಡಿ ಮಾಡುವ ಎರಡನೇ ಶಿಷ್ಟಾಚಾರಕ್ಕೆ ಪೂರ್ವೋತ್ತರ ಅನುಮೋದನೆ ನೀಡಲಾಯಿತು. ಈ ಸಿಇಸಿಎ ಒಪ್ಪಂದಕ್ಕೆ 2018ರ ಆಗಸ್ಟ್ 24ರಂದು ಸಹಿ ಹಾಕಲಾಗಿತ್ತು.
ಪ್ರಯೋಜನಗಳು :
ಎರಡನೇ ಶಿಷ್ಟಾಚಾರಕ್ಕೆ ಸಹಿ ಹಾಕಿದ್ದರಿಂದ ಭಾರತ ಮತ್ತು ಸಿಂಗಾಪುರ ನಡುವೆ ದ್ವಿಪಕ್ಷೀಯ ವ್ಯಾಪಾರ ವೃದ್ಧಿಯಾಗುವುದಲ್ಲದೆ, ಆರ್ಥಿಕ ಸಹಕಾರ ಬಲವರ್ಧನೆಯಾಗಲಿದೆ. ಅಲ್ಲದೆ, ಸಿಇಸಿಎ ಬಳಕೆಯೂ ಸಹ ಸಾಕಷ್ಟು ಸುಧಾರಿಸಲಿದೆ.