ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವೀಡನ್ ಪ್ರಧಾನಮಂತ್ರಿ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ಜಂಟಿಯಾಗಿ ಒಂದು ಸಂಪಾದಕೀಯ ಲೇಖನ ಬರೆದಿರುವುದಾಗಿ ಹಂಚಿಕೊಂಡಿದ್ದು, ಅದರಲ್ಲಿ ಭಾರತ ಮತ್ತು ಸ್ವೀಡನ್ ದ್ವಿಪಕ್ಷೀಯ ಸಹಕಾರದ ಹೊಸ ಯುಗವನ್ನು ಹೇಗೆ ರೂಪಿಸುತ್ತಿವೆ ಎಂಬುದನ್ನು ಪ್ರತಿಬಿಂಬಿಸಲಾಗಿದೆ.
ಹಸಿರು ಪರಿವರ್ತನೆಯಿಂದ ಬಲವಾದ ಪೂರೈಕೆ ಸರಣಿಗಳವರೆಗೆ, ಭಾರತ-ಸ್ವೀಡನ್ ಪಾಲುದಾರಿಕೆಯು ಎರಡೂ ರಾಷ್ಟ್ರಗಳ ಜನರಿಗೆ ನಾವೀನ್ಯತೆ, ಸುಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯಿಂದ ದೃಢವಾಗಿ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಪ್ರಧಾನ ಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ಸಂಪಾದಕೀಯ ಲೇಖನದಲ್ಲಿ, ಭಾರತ ಮತ್ತು ಸ್ವೀಡನ್ ಸಹಕಾರದ ಹೊಸ ಯುಗವನ್ನು ಹೇಗೆ ರೂಪಿಸುತ್ತಿವೆ ಎಂಬುದನ್ನು ಪ್ರತಿಬಿಂಬಿಸಲಾಗಿದೆ. ಹಸಿರು ಪರಿವರ್ತನೆಯಿಂದ ಪೂರೈಕೆ ಸರಣಿಗಳವರೆಗೆ, ಭಾರತ-ಸ್ವೀಡನ್ ಪಾಲುದಾರಿಕೆಯು ನಮ್ಮ ರಾಷ್ಟ್ರಗಳ ಜನರಿಗೆ ನಾವೀನ್ಯತೆ, ಸುಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ.’’
*****
In an op-ed with PM Ulf Kristersson, reflected on how India and Sweden are shaping a new era of cooperation. From green transition to supply chains, the India-Sweden partnership is guided by innovation, sustainability and shared prosperity for the people of our nations.…
— Narendra Modi (@narendramodi) May 20, 2026