Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಹಾಗೂ ಡೆನ್ಮಾರ್ಕ್ ನಡುವೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ ಕುರಿತು ಮೌಲ್ಯಮಾಪನ


ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಹಾಗೂ ಡೆನ್ಮಾರ್ಕ್ ನಡುವೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದದ ಮೌಲ್ಯಮಾಪನ ನಡೆಯಿತು.

ಭಾರತ ಹಾಗೂ ಡೆನ್ಮಾರ್ಕ್ ನಡುವೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿ ಸಹಕಾರ ಕುರಿತ ಒಪ್ಪಂದಕ್ಕೆ ಮೇ 22,2018 ರಂದು ಸಹಿ ಹಾಕುವ ಮೂಲಕ ಇಂಡೋ-ಡೇನಿಷ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಚಾರಿತ್ರಿಕ ಮೈಲುಗಲ್ಲನ್ನು ಮುಟ್ಟಲಾಗಿತ್ತು.

ಅನುಕೂಲಗಳು:

ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿನ ಪರಸ್ಪರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡರೆ, ಈ ಒಪ್ಪಂದದಿಂದ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯವೊಂದು ತೆರೆಯಲಿದೆ. ಭಾರತ ಮತ್ತು ಡೆನ್ಮಾರ್ಕ್ ನಡುವೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆ ಕ್ಷೇತ್ರದಲ್ಲಿನ ಸಾಮಾನ್ಯ ಆಸಕ್ತಿಯನ್ನು ಪರಿಗಣಿಸಿ, ಎರಡೂ ದೇಶಗಳ ನಡುವೆ ಸಹಕಾರವನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ನೆರವಾಗುವುದು ಒಪ್ಪಂದದ ಉದ್ದೇಶ. ಭಾರತ ಮತ್ತು ಡೆನ್ಮಾರ್ಕ್‍ನ ವೈಜ್ಞಾನಿಕ ಸಂಸ್ಥೆಗಳು, ಶಿಕ್ಷಣ ತಜ್ಞರು, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಕಂಪನಿಗಳು ಇದರಲ್ಲಿ ಪಾಲುದಾರ ರಾಗಿರುತ್ತಾರೆ. ಮರುಬಳಕೆ ಇಂಧನ, ನೀರು, ಪದಾರ್ಥ ವಿಜ್ಞಾನ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ, ಕೃತಕ ಜೀವಶಾಸ್ತ್ರ, ಆಹಾರ ಇನ್ನಿತರ ಕ್ಷೇತ್ರಗಳನ್ನು ತಕ್ಷಣದ ಸಹಭಾಗಿತ್ವಕ್ಕೆ ಕ್ಷೇತ್ರಗಳು ಎಂದು ಗುರುತಿಸಲಾಗಿದೆ.