Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂತಾನ್ ನ ಗೌರವಾನ್ವಿತ ರಾಜರಿಂದ ಪ್ರಧಾನ ಮಂತ್ರಿಗಳಿಗೆ ಅಭಿನಂದನಾ ಕರೆ


ಭೂತಾನ್ ನ ಗೌರವಾನ್ವಿತ ರಾಜ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ ಚುಕ್ ರವರು 23 ಮೇ 2019 ರಂದು ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಭಾರತದ 17ನೇ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಅಭಿನಂದಿಸಿದರು.

ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಜನತೆ ಸಮೃದ್ಧಿ ಮತ್ತು ಅಭಿವೃದ್ಧಿ ಹೊಂದಲಿ ಎಂದು ಅವರು ಶುಭ ಹಾರೈಸಿದರು.

ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಗೌರವಾನ್ವಿತ ರಾಜರಿಗೆ ಅವರ ಶುಭ ಹಾರೈಕೆಗಳಿಗೆ ಕೃತಜ್ಞತೆ ತಿಳಿಸಿದರು. ಭೂತಾನ್ ಜೊತೆಗಿನ ವಿಶಿಷ್ಠ ಮತ್ತು ವಿಶೇಷ ಸಂಬಂಧಕ್ಕೆ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಅವರು ತಿಳಿಸಿದರು. ಭೂತಾನಿನ ಅರಸೊತ್ತಿಗೆಯ ಸರ್ಕಾರದ ಜೊತೆ ನಿಕಟವಾಗಿ ಕೆಲಸ ಮಾಡುವುದರೊಂದಿಗೆ ಉಭಯ ದೇಶಗಳ ಮೈತ್ರಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.