Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂಮಿ ದಿನದಂದು ಪ್ರಧಾನಿ ಸಂದೇಶ


ಭೂಮಿಯ ದಿನದಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ನೀಡಿರುವ ಸಂದೇಶ ಈ ಕೆಳಕಂಡಂತಿದೆ:

“ಭೂಮಿಯ ದಿನ ಭೂಮಿತಾಯಿಗೆ ಕೃತಜ್ಞತೆಯನ್ನು ಅರ್ಪಿಸುವ ದಿನ ಮತ್ತು ನಮ್ಮ ಭೂಗ್ರಹವನ್ನು ಹಸಿರಾಗಿ ಮತ್ತು ಶುದ್ಧವಾಗಿ ಇಟ್ಟುಕೊಳ್ಳಲು ಸಂಕಲ್ಪ ಪುನರುಚ್ಚರಿಸುವ ದಿನ.

ಭೂಗ್ರಹವನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಪ್ರಾಣಿಗಳು ಮತ್ತು ಪಕ್ಷಿಗಳೊಂದಿಗೆ ಸೌಹಾರ್ದಯುತವಾಗಿ ಬಾಳುವುದು ನಮ್ಮ ಕರ್ತವ್ಯ, ನಮ್ಮ ಮುಂದಿನ ಪೀಳಿಗೆಗೆ ಇದು ನಮ್ಮ ಬದ್ಧತೆ.

ಈ ವರ್ಷದ ಧ್ಯೇಯವಾದ ಪರಿಸರ ಮತ್ತು ಹವಾಮಾನ ಸಾಕ್ಷರತೆಯು ನಮ್ಮ ಪ್ರಕೃತಿ ಮತ್ತು ಪ್ರಾಕೃತಿಕ ಸಂಪನ್ಮೂಲವನ್ನು ಸಂರಕ್ಷಿಸುವ ಜಾಗೃತಿಯನ್ನು ಉಂಟು ಮಾಡಲು ನೆರವಾಗುತ್ತದೆ. ಎಂದು ಭಾವಿಸುತ್ತೇನೆ.”