Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಣಿಪುರ ರಾಜ್ಯೋದಯ: ಜನತೆಗೆ ಪ್ರಧಾನ ಮಂತ್ರಿ ಶುಭಾಶಯ


ಮಣಿಪುರ ರಾಜ್ಯೋದಯ ದಿನವಾದ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಣಿಪುರ ರಾಜ್ಯದ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು “ ಮಣಿಪುರವು ಅದರ ರೋಮಾಂಚಕಾರಿ ಸಂಸ್ಕೃತಿಗೆ ಹೆಸರಾಗಿದೆ. ಮಣಿಪುರದ ಜನತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ರಾಜ್ಯದ ಜನತೆ ಪ್ರಗತಿಯಲ್ಲಿ ಮುಂದುವರಿಯುತ್ತಿರಲಿ” ಎಂದು ಹಾರೈಸಿದ್ದಾರೆ.