Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನ ಕಿ ಬಾತ್’ ಕಾರ್ಯಕ್ರಮದ 134ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಮನ ಕಿ ಬಾತ್’ ಕಾರ್ಯಕ್ರಮದ 134ನೇ ಸಂಚಿಕೆಯಲ್ಲಿ ತಾವು ನೀಡಿದ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;

“ಗುರಿಂದರ್‌ವೀರ್ ಸಿಂಗ್ ಮತ್ತು ಅನಿಮೇಶ್ ಕುಜುರ್ ಅವರೊಂದಿಗೆ ನಡೆದ ಸಂವಾದವು ಅತ್ಯಂತ ವಿಶೇಷವಾಗಿತ್ತು. ಭಾರತೀಯ ಅಥ್ಲೆಟಿಕ್ಸ್ ನ ಭವಿಷ್ಯ ಏಕೆ ಅತ್ಯಂತ ಉಜ್ವಲವಾಗಿದೆ ಎಂಬುದರ ಒಂದು ನೋಟವನ್ನು ಅದು ನೀಡಿತು!

#MannKiBaat”

“ಭಾರತ ದೇಶದ ಮಾವಿನಹಣ್ಣುಗಳು ಮತ್ತು ಅವುಗಳ ವೈವಿಧ್ಯತೆ ಖಂಡಿತವಾಗಿಯೂ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿವೆ! ನಿಮ್ಮ ನೆಚ್ಚಿನ ಮಾವಿನಹಣ್ಣಿನ ತಳಿ ಯಾವುದು?”

#MannKiBaat”

“ಬೇಸಿಗೆಯ ಬಿಸಿಲನ್ನು ತಣಿಸಿಕೊಳ್ಳಲು ಈಜುವುದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಭವಿಷ್ಯದ ಈಜುಪಟುಗಳಿಗೆ ಉತ್ತಮ ತರಬೇತಿ ನೀಡುತ್ತಿರುವ ಕೇರಳಂನ ಸಾಜಿ ಅವರ ಪ್ರಯತ್ನಗಳನ್ನು #MannKiBaat” ಕಾರ್ಯಕ್ರಮದಲ್ಲಿ ನಾನು ಪ್ರಸ್ತಾಪಿಸಿದೆ.”

#MannKiBaat”

“ಭಾರತದಾದ್ಯಂತ ಯುವಜನರಲ್ಲಿ ಖಗೋಳ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿರುವ ಅನೇಕ ಕ್ಲಬ್‌ಗಳು ಮತ್ತು ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪ್ರತಿಯೊಂದು ಪ್ರಯತ್ನದ ಬಗ್ಗೆಯೂ ನನಗೆ ಹೆಮ್ಮೆ ಇದೆ.”

#MannKiBaat”

“ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಲ್ಫಿನ್ ರಕ್ಷಣಾ ಆಂಬುಲೆನ್ಸ್ ಶ್ಲಾಘನೀಯ ಕೆಲಸ ಮಾಡುತ್ತಿದೆ. ಈ ಭೂಮಿಯನ್ನು ಹಂಚಿಕೊಂಡಿರುವ ಜೀವಿಗಳ ಬಗ್ಗೆ ನಾವು ಕಾಳಜಿ ವಹಿಸಬೇಕು ಎಂಬ ಮಹತ್ವದ ಸಂದೇಶವನ್ನು ಅದು ನೀಡುತ್ತಿದೆ.”

#MannKiBaat”

“ಉತ್ತರ ಪ್ರದೇಶದ ಆಕಾಶ್ ಗುಪ್ತಾ  ಮತ್ತು ಗೋವಾದ ಬಾಲಕೃಷ್ಣ ಅಯ್ಯಾ ಅವರಂತಹವರು ಜಲ ಸಂರಕ್ಷಣೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಸುಸ್ಥಿರತೆಯ ಮಹತ್ವದ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ.”

#MannKiBaat”

“ತಮಿಳುನಾಡಿನ ಗಿರಿಜಾ ಅಮ್ಮ ಅವರೊಂದಿಗೆ ನಡೆದ ನನ್ನ ಭೇಟಿ ಸ್ಮರಣೀಯ. ರಾಷ್ಟ್ರ ನಿರ್ಮಾಣದತ್ತ ಅವರ ಅಪರೂಪದ ಸಮರ್ಪಣೆ ಹಾಗೂ ಉತ್ಸಾಹವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಶಾಲೆಗಳ ಕಾರ್ಯವನ್ನೂ ಪ್ರಶಂಸಿಸುತ್ತಿದ್ದೇನೆ.”

#MannKiBaat”

“ನಾನು ನೆದರ್‌ಲ್ಯಾಂಡ್ ಗೆ ಭೇಟಿ ನೀಡಿದ ಬಳಿಕ ಭಾರತಕ್ಕೆ ಮರಳಿ ತಂದ ಚೋಳರ ಸಾಮ್ರಾಜ್ಯದ ತಾಮ್ರಶಾಸನಗಳ ಕುರಿತು ಅಪಾರ ಕುತೂಹಲ ಮೂಡಿದೆ. ಅದನ್ನು #ಮನ್ ಕಿಬಾತ್ ಕಾರ್ಯಕ್ರಮದಲ್ಲಿ ಅದರ ಬಗ್ಗೆ ಪ್ರಸ್ತಾಪಿಸಿದೆ. ಜೊತೆಗೆ, ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರು ಅಪರೂಪದ ತಾಮ್ರಶಾಸನಗಳ ಕುರಿತೂ ಉಲ್ಲೇಖಿಸಿದೆ.”

#MannKiBaat”

 

*****