ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸೈಪ್ರೆಸ್ ನಡುವೆ ಮರ್ಚೆಂಟ್ ಶಿಪ್ಪಿಂಗ್ ಕುರಿತಂತೆ 2017ರ ಏಪ್ರಿಲ್ ನಲ್ಲಿ ಅಂಕಿತ ಹಾಕಲಾದ ಒಪ್ಪಂದಕ್ಕೆ ಪೂರ್ವಾನ್ವಯವಾಗಿ ತನ್ನ ಒಪ್ಪಿಗೆ ನೀಡಿದೆ.
ಮರ್ಚೆಂಟ್ ಶಿಪ್ಪಿಂಗ್ ಒಪ್ಪಂದವು ಎರಡೂ ದೇಶಗಳ ನಡುವೆ ಸಮುದ್ರ ವ್ಯಾಪಾರ ಅಭಿವೃದ್ಧಿಗೆ ಅಡ್ಡಿಯಾಗುವ ಯಾವುದೇ ರೀತಿಯ ತಡೆಗಳನ್ನು ನಿವಾರಿಸುವ ಸಹಕಾರಕ್ಕೆ ಹಾದಿ ಮಾಡಿಕೊಡುತ್ತದೆ.
ಈ ತಿಳಿವಳಿಕೆ ಒಪ್ಪಂದವು ದೇಶಗಳ ನಡುವಿನ ಸರಕು ಸಾಗಣೆಯ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುತ್ತದೆ. ಈ ತಿಳಿವಳಿಕೆ ಒಪ್ಪಂದವು ಉದ್ಯೋಗ, ಕಾರ್ಯ ಸ್ಥಳದ ಸ್ಥಿತಿ ಮತ್ತು ಎರಡೂ ಕಡೆಗಳ ಹಡಗುಗಳಲ್ಲಿ ಉದ್ಯೋಗದಲ್ಲಿರುವ ನೌಕಾ ಸಿಬ್ಬಂದಿಯ ಸ್ಥಿತಿ ಸುಧಾರಣೆಯ ಸಹಕಾರವನ್ನೂ ಹೆಚ್ಚಿಸ ಬಯಸುತ್ತದೆ.
AKT/VBA/SH