Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನೋತ್ಸವಕ್ಕೆ ಪ್ರಧಾನಿ ಅವರಿಂದ ಗೌರವ ನಮನ ಸಲ್ಲಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಬ್ಬರ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.

ಪ್ರಧಾನಮಂತ್ರಿ ಅವರು, ಶಾಂತಿ, ಸೌಹಾರ್ದತೆ ಮತ್ತು ಸಹೋದರತೆ ಬಗೆಗಿನ ಗಾಂಧೀಜಿ ಅವರ ಬದ್ಧತೆಗೆ ಸರಿಸಾಟಿ ಇಲ್ಲ, ಅವರು ಬಡವರಲ್ಲಿ ಕಡುಬಡವರನ್ನು ಸಬಲೀಕರಣಗೊಳಿಸುವ ಮೂಲಕ ಇಡೀ ವಿಶ್ವಕ್ಕೆ ಹೊಸ ದೂರ ದೃಷ್ಟಿಯನ್ನು ನೀಡಿದ್ದಾರೆ. ಅವರ ಆದರ್ಶಗಳು ನಮಗೆ ಸದಾ ದಾರಿದೀಪ ಎಂದರು. #Gandhi150

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತಂತೆ ಪ್ರಧಾನಮಂತ್ರಿ, ಭಾರತಕ್ಕೆ ಶಾಸ್ತ್ರೀಜಿ ಅವರ ಮೌಲ್ಯಯುತ ಕೊಡುಗೆ ಮರೆಯಲಾಗದು ಎಂದರು. ಶಾಸ್ತ್ರೀಜಿ ಎಂತಹುದೇ ಸಂದರ್ಭ ಎದುರಾದರೂ ತಮ್ಮ ಆದರ್ಶ ಮತ್ತು ತತ್ವಗಳಿಂದ ವಿಚಲಿತರಾಗದ ಮುತ್ಸದ್ಧಿಯಾಗಿದ್ದರು ಎಂದರು.

ರಾಜಘಾಟ್ ನಲ್ಲಿ ಬಾಪುಗೆ ನಮನ ಸಲ್ಲಿಸಿದ ವೇಳೆ ಪ್ರಧಾನಮಂತ್ರಿ, ಶಾಂತಿ, ಸೌಹಾರ್ದತೆ ಮತ್ತು ಸಹೋದರತೆ ಬಗೆಗಿನ ಗಾಂಧೀಜಿ ಅವರ ಬದ್ಧತೆಗೆ ಸರಿಸಾಟಿ ಇಲ್ಲ, ಅವರು ಬಡವರಲ್ಲಿ ಕಡುಬಡವರನ್ನು ಸಬಲೀಕರಣಗೊಳಿಸುವ ಮೂಲಕ ಇಡೀ ವಿಶ್ವಕ್ಕೆ ಹೊಸ ದೂರ ದೃಷ್ಟಿಯನ್ನು ನೀಡಿದ್ದಾರೆ. ಅವರ ಆದರ್ಶಗಳು ನಮಗೆ ಸದಾ ದಾರಿದೀಪ. #Gandhi150

pic.twitter.com/4UHLj1EfhB

–       ನರೇಂದ್ರ ಮೋದಿ (@narendramodi) ಅಕ್ಟೋಬರ್ 2, 2019

 

ವಿಜಯಘಾಟ್ ನಲ್ಲಿ ಶಾಸ್ತ್ರೀಜಿ ಅವರಿಗೆ ನಮನ ಸಲ್ಲಿಸಿದರು. ಭಾರತಕ್ಕೆ ಶಾಸ್ತ್ರೀಜಿ ಅವರ ಮೌಲ್ಯಯುತ ಕೊಡುಗೆ ಮರೆಯಲಾಗದು, ಶಾಸ್ತ್ರೀಜಿ ಎಂತಹುದೇ ಸಂದರ್ಭ ಎದುರಾದರೂ ತಮ್ಮ ಆದರ್ಶ ಮತ್ತು ತತ್ವಗಳಿಂದ ವಿಚಲಿತರಾಗದ ಮುತ್ಸದ್ಧಿ.

pic.twitter.com/myP7h3erqt

–        ನರೇಂದ್ರ ಮೋದಿ (@narendramodi) ಅಕ್ಟೋಬರ್ 2, 2019