Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾತ್ಮ ಜ್ಯೋತಿರಾವ್ ಪುಲೆ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ; 200ನೇ ಜನ್ಮ ವಾರ್ಷಿಕೋತ್ಸವದ ಆರಂಭವನ್ನು ಸೂಚಿಸುತ್ತದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾತ್ಮ ಜ್ಯೋತಿರಾವ್ ಪುಲೆ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರು ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಆದರ್ಶಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೂರದೃಷ್ಟಿಯ ಸಮಾಜ ಸುಧಾರಕ ಎಂದು ಬಣ್ಣಿಸಿದರು.

ಮಹಾತ್ಮ ಫುಲೆ ಅವರು ಮಹಿಳೆಯರು ಮತ್ತು ಅಂಚಿನಲ್ಲಿರುವವರ ಹಕ್ಕುಗಳನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ತಮ್ಮ ಪ್ರಯತ್ನಗಳ ಮೂಲಕ ಶಿಕ್ಷಣವು ಸಬಲೀಕರಣದ ಪ್ರಬಲ ಸಾಧನವಾಗುವಂತೆ ನೋಡಿಕೊಂಡರು ಎಂದು ಪ್ರಧಾನಮಂತ್ರಿ ಹೇಳಿದರು. ಈ ವರ್ಷ ಮಹಾನ್ ಸುಧಾರಕನ 200ನೇ ಜನ್ಮ ವಾರ್ಷಿಕೋತ್ಸವದ ಮಹತ್ವದ ಆರಂಭವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ಸಂದರ್ಭದ ಸ್ಮರಣಾರ್ಥ, ಮಹಾತ್ಮ ಫುಲೆ ಅವರು ಹಲವಾರು ಜನರಿಗೆ ಹೇಗೆ ಮಾರ್ಗದರ್ಶಕ ಬೆಳಕಾಗಿ ಉಳಿದಿದ್ದಾರೆ ಮತ್ತು ಶಿಕ್ಷಣ, ಕಲಿಕೆ ಮತ್ತು ಎಲ್ಲರ ಕಲ್ಯಾಣಕ್ಕೆ ಅವರು ನೀಡಿದ ಒತ್ತು ಇಂದಿನ ಯುಗದಲ್ಲಿ ಹೇಗೆ ಆಳವಾಗಿ ಪ್ರಸ್ತುತವಾಗಿದೆ ಎಂಬುದನ್ನು ಹಂಚಿಕೊಳ್ಳುವ ಲೇಖನವನ್ನು ಪ್ರಧಾನಮಂತ್ರಿ ಅವರು ಬರೆದಿದ್ದಾರೆ. ಸಾಮಾಜಿಕ ಪ್ರಗತಿಯ ಅನ್ವೇಷಣೆಯಲ್ಲಿ ಅವರ ಆಲೋಚನೆಗಳು ಎಲ್ಲರಿಗೂ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ ಎಂದು ಶ್ರೀ ನರೇಂದ್ರ ಮೋದಿ ಅವರು ಪ್ರಾರ್ಥಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;

“ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದಂದು, ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಆದರ್ಶಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೂರದೃಷ್ಟಿಯ ಸಮಾಜ ಸುಧಾರಕರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರು ಮಹಿಳೆಯರು ಮತ್ತು ಅಂಚಿನಲ್ಲಿರುವವರ ಹಕ್ಕುಗಳ ಪರವಾಗಿ ಹೋರಾಡುವಲ್ಲಿ ಪ್ರವರ್ತಕರಾಗಿದ್ದರು. ಅವರ ಪ್ರಯತ್ನಗಳ ಮೂಲಕ, ಶಿಕ್ಷಣವು ಸಬಲೀಕರಣದ ಪ್ರಬಲ ಸಾಧನವಾಯಿತು. ಈ ವರ್ಷ, ನಾವು ಅವರ 200ನೇ ಜನ್ಮ ವಾರ್ಷಿಕೋತ್ಸವದ ಆರಂಭವನ್ನು ಆಚರಿಸುತ್ತಿದ್ದೇವೆ. ಅವರ ಆಲೋಚನೆಗಳು ಸಾಮಾಜಿಕ ಪ್ರಗತಿಯ ಅನ್ವೇಷಣೆಯಲ್ಲಿ ಎಲ್ಲರಿಗೂ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ.” 

“महात्मा ज्योतिराव फुले यांच्या जयंतीदिनी, समता, न्याय आणि शिक्षण या मूल्यांसाठी आपले जीवन समर्पित करणाऱ्या या द्रष्ट्या समाजसुधारकाला अभिवादन करतो. महिला आणि उपेक्षितांच्या हक्कांचा लढा सुरु करणारेही तेच होते. त्यांच्या प्रयत्नांमुळे शिक्षण हे सक्षमीकरणाचे एक शक्तिशाली साधन बनले.”

“ನಾವು ಮಹಾತ್ಮ ಫುಲೆ ಅವರ 200ನೇ ಜನ್ಮ ದಿನಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆ, ಅವರು ಹೇಗೆ ಹಲವಾರು ಜನರಿಗೆ ಮಾರ್ಗದರ್ಶಕ ಬೆಳಕಾಗಿದ್ದಾರೆ ಮತ್ತು ಶಿಕ್ಷಣ, ಕಲಿಕೆ ಮತ್ತು ಎಲ್ಲರ ಕಲ್ಯಾಣಕ್ಕೆ ಅವರು ನೀಡಿದ ಒತ್ತು ಇಂದಿನ ಯುಗದಲ್ಲಿ ಹೇಗೆ ಪ್ರಸ್ತುತವಾಗಿದೆ ಎಂಬುದರ ಕುರಿತು ಕೆಲವು ಆಲೋಚನೆಗಳನ್ನು ಬರೆದಿದ್ದೇನೆ”

“आपण महात्मा फुले यांच्या जयंतीच्या द्विशताब्दी वर्षात पाऊल ठेवत असल्याच्या पार्श्वभूमीवर, ते कशा प्रकारे अनेक लोकांसाठी मार्गदर्शक दीपस्तंभ ठरले आहेत तसेच त्यांनी शिक्षण, अध्ययन आणि सर्वांच्या कल्याणावर दिलेला भर आजच्या युगातही कसा समर्पक आहे, याबद्दलचे काही विचार लेखणीतून उतरवले”

महान समाज सुधारक महात्मा फुले की 200वीं जयंती वर्ष के समारोहों का शुभारंभ हो रहा है। उन्होंने अपना पूरा जीवन शिक्षा, ज्ञान और जन कल्याण को समर्पित कर दिया। वे कैसे आज भी करोड़ों देशवासियों के लिए प्रेरणापुंज बने हुए हैं, इसी को लेकर मैंने इस आलेख में अपने विचार रखे हैं।

 

*****