Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾಜಿ ಕೇಂದ್ರ ಸಚಿವ ಶ್ರೀ ಜಸ್ವಂತ್ ಸಿಂಗ್ ನಿಧನಕ್ಕೆ ಪ್ರಧಾನಿ ಸಂತಾಪ


ಕೇಂದ್ರದ ಮಾಜಿ ಸಚಿವ ಶ್ರೀ ಜಸ್ವಂತ್ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಜಸ್ವಂತ್ ಸಿಂಗ್ ಜಿ ರಾಷ್ಟ್ರಕ್ಕೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ, ಮೊದಲಿಗೆ ಒರ್ವ ಯೋಧರಾಗಿ ಮತ್ತು ಆನಂತರ ಸುದೀರ್ಘ ರಾಜಕಾರಣದಲ್ಲಿ. ಅಟಲ್ ಜಿ ಅವರ ಸರ್ಕಾರದಲ್ಲಿ ಅವರು ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು ಮತ್ತು ಹಣಕಾಸು, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ವಲಯಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ’’ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

“ರಾಜಕೀಯ ಮತ್ತು ಸಾಮಾಜಿಕ ವಿಷಯಗಳಲ್ಲಿ ಜಸ್ವಂತ್ ಸಿಂಗ್ ಜಿ ಅವರ ವಿಭಿನ್ನ ದೃಷ್ಟಿಕೋನ ನೆನೆಯಬೇಕಾಗುತ್ತದೆ. ಅವರೊಂದಿಗಿನ ನಮ್ಮ ಸಂವಾದಗಳನ್ನು ಸದಾ ಸ್ಮರಿಸಲಾಗುತ್ತಿದೆ. ಅವರ ಕುಟುಂಬ ಮತ್ತು  ಅಭಿಮಾನಿಗಳಿಗೆ ನನ್ನ ಸಂತಾಪಗಳು, ಓಂ ಶಾಂತಿ’’ ಎಂದು ಪ್ರಧಾನಿ  ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು, ಶ್ರೀ ಮನ್ವೇಂದರ್ ಸಿಂಗ್ ಅವರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು ಮತ್ತು ಶ್ರೀ ಜಸ್ವಂತ್ ಸಿಂಗ್ ಜಿ ಅವರ ಸಾವು ದುರದೃಷ್ಟಕರ ಎಂದು ತಿಳಿಸಿದರು.

***