ಪಿಎಂಇಂಡಿಯಾ
ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಇಂದು ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಅನಾವರಣ ಮಾಡಿದರು.
ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ಮತ್ತು ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು. ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು :
“ಇನ್ನು ಮುಂದೆ ಅಟಲ್ ಜಿ ಅವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಶಾಶ್ವತವಾಗಿ ಇರಲಿದ್ದು, ನಮಗೆ ಸ್ಪೂರ್ತಿ ನೀಡಲಿದ್ದಾರೆ ಮತ್ತು ನಮ್ಮನ್ನು ಹರಸಲಿದ್ದಾರೆ.
ನಾವು ಅಟಲ್ ಜಿ ಅವರ ಒಳ್ಳೆಯತನಗಳ ಬಗ್ಗೆ ಮಾತನಾಡುತ್ತಾ ಹೋದರೆ, ಹಲವು ಗಂಟೆಗಳೇ ಬೇಕಾಗುತ್ತದೆ.
ಅಟಲ್ ಜೀ ಅವರು ದೀರ್ಘ ಕಾಲದ ರಾಜಕೀಯ ಜೀವನ ಹೊಂದಿದ್ದರು, ಅದರಲ್ಲಿ ಬಹುಪಾಲು ಪ್ರತಿಪಕ್ಷದಲ್ಲೇ ಕಳೆದರು.
ಆದರೂ, ಅವರು ಸಾರ್ವಜನಿಕ ಹಿತದ ವಿಷಯಗಳನ್ನು ಪ್ರಸ್ತಾಪಿಸುತ್ತಲೇ ಇದ್ದರು ಮತ್ತು ಎಂದಿಗೂ ಅವರು ತಮ್ಮ ಸಿದ್ಧಾಂತದಿಂದ ವಿಮುಖರಾಗಲಿಲ್ಲ.
ಅಟಲ್ ಜಿ ಅವರ ಭಾಷಣದಲ್ಲಿ ಒಂದು ಶಕ್ತಿ ಇತ್ತು, ಅದೇ ರೀತಿ ಅಟಲ್ ಜಿ ಅವರ ಮೌನದಲ್ಲೂ ಶಕ್ತಿ ಇತ್ತು.
ಅವರ ಸಂವಹನ ಕೌಶಲ ಅನುಪಮವಾದದ್ದು. ಅವರಲ್ಲಿ ಉತ್ತಮ ಹಾಸ್ಯಪ್ರಜ್ಞೆ ಇತ್ತು” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.