ಪಿಎಂಇಂಡಿಯಾ
ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾಜಿ ಭಾರತದ ಸೇನೆಯ ಹುತಾತ್ಮರ ಕುಟುಂಬ ವರ್ಗ, ಬಾಂಗ್ಲಾ ದೇಶದ ಸನ್ಮಾನ್ಯ ವಿದೇಶಾಂಗ ಸಚಿವರ ಮತ್ತು ಸನ್ಮಾನ್ಯ ಲಿಬರೇಶನ್ ವಾರ್ ಸಚಿವರೆ,
ನನ್ನ ಮಂತ್ರಿಮಂಡಲದ ಸಚಿವರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರವರೆ ಮತ್ತು ರಕ್ಷಣಾ ಸಚಿವ ಶ್ರೀ ಅರುಣ್ ಜೇಟ್ಲಿಯವರೆ,
ಸಭೆಯಲ್ಲಿ ಉಪಸ್ಥಿತರಿರುವ ಅತ್ಯಂತ ಗಣ್ಯ ಸದಸ್ಯರೆ ಗಣ್ಯ ಅತಿಥಿಗಣ ಮತ್ತು ಎಲ್ಲಾ ಮಿತ್ರರೇ
ಇಂದು ವಿಶೇಷ ದಿನ.
ಇಂದು ಭಾರತ ಹಾಗೂ ಬಾಂಗ್ಲಾದೇಶದ ಹುತಾತ್ಮರ ಬಲಿದಾನವನ್ನು ಸ್ಮರಿಸುವ ದಿನ. ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವನ್ನು ನೀಡಿದ ಯೋಧರನ್ನು ಸ್ಮರಿಸುವ ದಿನ. ಬಾಂಗ್ಲಾ ದೇಶದ ಸ್ವಾಭಿಮಾನದ ರಕ್ಷಣೆಗೊಳಿಸುವ ಹೋರಾಡುವ ಭಾರತೀಯ ಸೇನೆಯ ವೀರರನ್ನು ಸ್ಮರಿಸುವ ದಿನ. ಆದರೆ ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸ್ವಾಭಿಮಾನದ ರಕ್ಷಣೆಗೋಸುಗ ಹೋರಾಡುವ ಭಾರತೀಯ ಸೇನೆಯ ವೀರರನ್ನು ಸ್ಮರಿಸುವ ದಿನ. ಆದರೆ ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಮೇಲೆ ನಡೆದ ಆ ಕ್ರೂರ ಪ್ರಹಾರವನ್ನು ನೆನಪಿಸಿಕೊಳ್ಳಬೇಕಾಗಿದೆ. ಅದು ಲಕ್ಷಾಂತರ ಜನರ ಜೀವನವನ್ನು ಕಿತ್ತುಕೊಂಡಿದೆ. ಆದರೆ ಜೊತೆ ಜೊತೆಗೆ ಬಾಂಗ್ಲಾದೇಶ ಅನುಭವಿಸಿದ ಕಷ್ಟದ ಇತಿಹಾಸದ ಹಿಂದಿರುವ ವಿಕೃತ ಮಾನಸಿಕತೆಯನ್ನು ತಿರಸ್ಕರಿಸಬೇಕಾಗಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದ 140 ಕೋಟಿಗೂ ಮಿಕ್ಕ ನಾಗರಿಕರ ನಡುವಿನ ಅಚಲ ನಂಬಿಕೆಯ ಬಲವನ್ನೂ ಗುರುತಿಸಬೇಕಾಗಿದೆ. ನಾವು ನಮ್ಮ ಸಮಾಜಕ್ಕೆ ಒಂದು ಸಬಲ ಹಾಗೂ ಸಮೃದ್ಧ ಭವಿಷ್ಯ ಹೇಗೆ ನೀಡಬೇಕು ಎಂಬುದರ ಬಗ್ಗೆ ಚಿಂತಿಸಲು ಇದೊಂದು ಸೂಕ್ತ ಸಂದರ್ಭವಾಗಿದೆ.
ಎಕ್ಸಲೆನ್ಸಿ,
ಹಾಗೂ ಮಿತ್ರರೆ ಅನೇಕ ಕಾರಣಗಳಿಂದಾಗಿ ಈ ದಿನ ಐತಿಹಾಸಿಕವಾಗಿದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರ ಕುಟುಂಬದವರಿಗೂ ಇಂದು ಎಂದಿಗೂ ಮರೆಯಲಾಗದ ಕ್ಷಣವಾಗಿದೆ. 1971ರಲ್ಲಿ ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿ ಕೊಟ್ಟ 1661 ಭಾರತೀಯ ಸೈನಿಕರನ್ನು ಬಾಂಗ್ಲಾ ದೇಶವು ಇಂದು ಗೌರವಿಸುತ್ತಿದೆ. ನಾನು ಭಾರತದ 125 ಕೋಟಿ ಜನರ ಪರವಾಗಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾಜೀ ಅವರಿಗೆ, ಅವರ ಸರ್ಕಾರಕ್ಕೆ ಮತ್ತು ಬಾಂಗ್ಲಾದೇಶದ ಜನತೆಗೆ ಈ ಭಾವನಾತ್ಮಕ ನಡೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭಾರತದ ವೀರಸೈನಿಕ ಹಾಗೂ ನಮ್ಮ ಗೌರವಾನ್ವಿತ ಸೇನೆಯು ಕೇವಲ ಬಾಂಗ್ಲಾದೇಶದೊಂದಿಗೆ ನಡೆಯುತ್ತಿರುವ ಅನ್ಯಾಯ ಹಾಗೂ ನರಮೇಧದ ವಿರುದ್ಧ ಹೋರಾಡಲಿಲ್ಲ. ಈ ವೀರರು ಭಾರತೀಯ ಸಂಸ್ಕøತಿಯಲ್ಲಿ ನೆಲೆಗೊಂಡಿರುವ ಮಾನವೀಯ ಮೌಲ್ಯಗಳಿಗಾಗಿಯೂ ಹೋರಾಡಿದ್ದರು. ಈ ಸಮಯದಲ್ಲಿ 7 ಭಾರತೀಯ ಹುತಾತ್ಮರ ಕುಟುಂಬದವರು ಇಲ್ಲಿ ಉಪಸ್ಥಿತರಾಗಿರುವುದು ನನ್ನ ಸೌಭಾಗ್ಯ. ಇಡೀ ಭಾರತವು ನಿಮ್ಮ ವ್ಯಥೆ, ನಿಮ್ಮ ನೋವು ಮತ್ತು ನಿಮ್ಮ ವೇದನೆಗಳಲ್ಲಿ ಸಹಭಾಗಿಯಾಗಿದೆ. ನಿಮ್ಮ ತ್ಯಾಗ ಮತ್ತು ತಪಸ್ಸು ಅಸಮಾನವಾದದ್ದು. ಭಾರತೀಯ ಸೈನಿಕರ ಬಲಿದಾನಕ್ಕಾಗಿ ನಾನು ಮತ್ತು ಪೂರಾದೇಶವು ಸಕಲ ಹುತಾತ್ಮರಿಗೆ ಕೋಟಿ ಕೋಟಿ ನಮಸ್ಕಾರಗಳನ್ನು ಹೇಳುತ್ತೇವೆ.
ಮಿತ್ರರೆ,
ಬಾಂಗ್ಲಾದೇಶದ ಹುಟ್ಟು ಒಂದು ಹೊಸ ಆಸೆಯ ಉದಯವಾಗಿದೆ. ಹಾಗೆ 1971ರ ಚರಿತ್ರೆ ನಮಗೆ ಅನೇಕ ಅತ್ಯಂತ ನೋವಿನ ಕ್ಷಣಗಳನ್ನೂ ನೆನಪಿಸುತ್ತದೆ. 1971ರ ಇದೇ ಏಪ್ರಿಲ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ನರಮೇಧವು ಚರಮ ಸ್ಥಿತಿಯಲ್ಲಿತ್ತು. ಬಾಂಗ್ಲಾದೇಶದಲ್ಲಿ ಒಂದು ಪೀಳಿಗೆಯನ್ನು ಪೂರ್ಣವಾಗಿ ಮುಗಿಸಲೆಂದು ಸಂಹಾರ ಮಾಡಲಾಗುತ್ತಿತ್ತು. ಬಾಂಗ್ಲಾದೇಶದ ಶ್ರೇಷ್ಠತೆಯೊಂದಿಗೆ ಬೆಸೆದುಕೊಂಡಿದ್ದಂತಹ, ಭಾವಿ ಪೀಳಿಗೆಗೆ ಬಾಂಗ್ಲಾದೇಶದ ಇತಿಹಾಸವನ್ನು ತಿಳಿಸಬಲ್ಲಂತಹ ವ್ಯಕ್ತಿಗಳನ್ನು ಮುಗಿಸಲಾಯಿತು. ಈ ನರಮೇಧದ ಉದ್ದೇಶ ಕೇವಲ ನಿರ್ದೋಷಿಗಳನ್ನು ಹತ್ಯೆ ಮಾಡುವುದಾಗಿರಲಿಲ್ಲ. ಬದಲಿಗೆ ಬಾಂಗ್ಲಾದೇಶದ ವಿಚಾರವನ್ನು ಬುಡಸಮೇತ ಹಾಳು ಮಾಡುವುದಾಗಿತ್ತು. ಆದರೆ ಕಡೆಗೂ ಅತ್ಯಾಚಾರ ವಿಜಯಿಯಾಗಲಿಲ್ಲ. ವಿಜಯ ಮಾನವ ಮೌಲ್ಯಗಳದ್ದಾಯಿತು. ಕೋಟ್ಯಂತರ ಬಾಂಗ್ಲಾದೇಶವಾಸಿಗಳ ಇಚ್ಛಾಶಕ್ತಿಯದಾಯಿತು.
ಮಿತ್ರರೆ,
ಬಾಂಗ್ಲಾದೇಶದ ಜನ್ಮಕಥೆ ಎಲ್ಲೆಯಿಲ್ಲದ ಬಲಿದಾನಗಳ ಕಥೆಯಾಗಿದೆ. ಮತ್ತು ಈ ಎಲ್ಲಾ ಬಲಿದಾನಗಳ ಕಥೆಗಳಲ್ಲಿ ಒಂದು ಸೂತ್ರ, ಒಂದು ವಿಚಾರ ಸಮಾನವಾಗಿದೆ. ಅದೆಂದರೆ ನಾಡು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಇರುವ ಅಗಾಧ ಪ್ರೇಮ. ಮುಕ್ತಿ ಯೋಧ ಬರೀ ಮಾನವ ಶರೀರ ಮತ್ತು ಆತ್ಮವಾಗಿರಲಿಲ್ಲ. ಬದಲಿಗೆ ಒಂದು ಅದಮ್ಯ ಚೇತನ ಮತ್ತು ಅವಿನಾಶಿ ವಿಚಾರವಾಗಿತ್ತು. ಮುಕ್ತಿಯೋಧರಿಗಾಗಿ ಭಾರತದ ಕಡೆಯಿಂದ ಕೆಲವು ಯೋಜನೆಗಳನ್ನು ಮಾಡುತ್ತಾ ಬಂದಿರುವುದು ನನಗೆ ಸಂತಸವಾಗಿದೆ. ಮುಕ್ತಿ ಯೋಧ ಸ್ಕಾಲರ್ ಶಿಪ್‍ನ ಅಡಿಯಲ್ಲಿ ಮುಕ್ತಿಯೋಧರ ಕುಟುಂಬಗಳಿಂದ 10,000ಕ್ಕೂ ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅವರ ಕುಟುಂಬಗಳ ಒಳಿತಿಗಾಗಿ ಈ ಸಂದರ್ಭದಲ್ಲಿ ನಾನು ಇನ್ನೂ ಮೂರು ಘೋಷಣೆಗಳನ್ನು ಮಾಡುತ್ತಿದ್ದೇನೆ.
ಮುಂಬರುವ 5 ವರ್ಷಗಳಲ್ಲಿ ಮುಕ್ತಿ ಯೋಧ ಸ್ಕಾಲರ್ ಶಿಪ್ ಯೋಜನೆಯ ಲಾಭವು ಮತ್ತು 10 ಸಾವಿರ ಮಕ್ಕಳಿಗೆ ತಲುಪುತ್ತದೆ. ಮುಕ್ತ ಯೋಧರಿಗೆ 5 ವರ್ಷಕ್ಕಾಗಿ ಮಲ್ಟಿಪಲ್ ಎಂಟ್ರಿ ವೀಸಾ ಸೌಲಭ್ಯ ನೀಡಲಾಗುತ್ತದೆ ಮತ್ತು ಭಾರತದಲ್ಲಿ ಉಚಿತ ಚಿಕಿತ್ಸೆಗಾಗಿ ಪ್ರತಿವರ್ಷ 100 ಮುಕ್ತಿ ಯೋಧರಿಗೆ ಒಂದು ವಿಶೇಷ ವೈದ್ಯಕೀಯ ಯೋಜನೆಯ ಅಡಿಯಲ್ಲಿ ಸಹಾಯ ಮಾಡಲಾಗುತ್ತದೆ. ಮುಕ್ತಿಯೋಧರ ಜೊತೆಗೆ ಬಾಂಗ್ಲಾದೇಶಕ್ಕಾಗಿ ಭಾರತೀಯ ಸೇನೆಯು ಮಾಡಿದ ಸಂಘರ್ಷ ಮತ್ತು ಬಲಿದಾನವನ್ನು ಕೂಡ ಯಾರೂ ಮರೆಯುವಂತಿಲ್ಲ. ಹೀಗೆ ಮಾಡಲು ಅವರಿಗಿದ್ದ ಪ್ರೇರಣೆಯೆಂದರೆ ಬಾಂಗ್ಲಾದೇಶದ ಜನತೆಯ ಬಗ್ಗೆ ಪ್ರೀತಿ ಮತ್ತು ಬಾಂಗ್ಲಾ ದೇಶವಾಸಿಗಳ ಕನಸುಗಳ ಬಗ್ಗೆ ಗೌರವ. ಬರ್ಬರವಾದ ಯುದ್ಧದಲ್ಲೂ ಭಾರತೀಯ ಸೇನೆಯು ತನ್ನ ಕರ್ತವ್ಯದಿಂದ ಹಿಂತೆಗೆಯಲಿಲ್ಲ ಮತ್ತು ಯುದ್ಧ ನಿಯಮಗಳನ್ನು ಪಾಲಿಸಿ ಇಡೀ ವಿಶ್ವದ ಮುಂದೆ ಒಂದು ಉದಾಹರಣೆಯಾಯಿತು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. 90 ಸಾವಿರ ಕೈದಿ ಸೈನಿಕರನ್ನು ಸುರಕ್ಷಿತವಾಗಿ ಹೋಗಲು ಬಿಟ್ಟಿದ್ದು ಭಾರತೀಯ ಸೇನೆಯ ಸಹಜ ಗುಣವಾಗಿತ್ತು (ಪಿಓಡಬ್ಲ್ಯೂಎಸ್) 1971ರಲ್ಲಿ ಭಾರತದ ಈ ಮಾನವೀಯತೆಯು ಕಳೆದ ಶತಮಾನದ ಬಹಳ ದೊಡ್ಡ ಘಟನೆಗಳಲ್ಲಿ ಒಂದು. ಮಿತ್ರರೆ, ಭಾರತ ಮತ್ತು ಬಾಂಗ್ಲಾದೇಶ ಕೇವಲ ಕ್ರೂರತೆಯನ್ನು ಸೋಲಿಸುವ ದೇಶಗಳಷ್ಟೇ ಅಲ್ಲ, ಬದಲಿಗೆ ಕ್ರೂರತೆಯ ಮೂಲಭೂತ ವಿಚಾರವನ್ನೇ ತಿರಸ್ಕರಿಸುವ ದೇಶಗಳಾಗಿವೆ.
ಮಿತ್ರರೆ,
ಬಾಂಗ್ಲಾದೇಶದ ಬಗ್ಗೆ ಚರ್ಚೆ ಬಂಗಬಂಧು ರಹಿತವಾದರೆ ಅಪೂರ್ಣವೆನಿಸುತ್ತದೆ. ಇಬ್ಬರ ಅಸ್ತಿತ್ವ ಪರಸ್ಪರ ಬೆಸೆದುಕೊಂಡಿದೆ. ಎರಡೂ ಪರಸ್ಪರ ವಿಚಾರಗಳಿಗೆ ಪೂರಕ ಬಂಗಬಂಧು ಬಾಂಗ್ಲಾದೇಶದ ಸ್ವಾತಂತ್ರ್ಯದ ಪ್ರಮುಖ ಸೂತ್ರಧಾರಿಯಾಗಿದ್ದರು. ಅವರು ತಮ್ಮ ಕಾಲಕ್ಕಿಂತ ಬಹಳ ಮುಂದಿನದರ ಬಗ್ಗೆ ಯೋಚಿಸುತ್ತಿದ್ದರು. ಅವರ ಪ್ರತಿಯೊಂದು ಕರೆಯೂ ಜನತೆಯ ಆಹ್ವಾನವಾಗಿರುತ್ತಿತ್ತು. ಒಂದು ಆಧುನಿಕ, ಸ್ವತಂತ್ರ ಹಾಗೂ ಪ್ರಗತಿಶೀಲ ಬಾಂಗ್ಲಾದೇಶದ ಪರಿಕಲ್ಪನೆಯು ಇಂದೂ ಬಾಂಗ್ಲಾದೇಶದ ಪ್ರಗತಿಯ ಹಾದಿಯನ್ನು ಪ್ರಶಸ್ತಗೊಳಿಸುತ್ತದೆ. 1971ರ ನಂತರ ಈ ಬಂಗಬಂಧು ಶೇಖ್ ಮುಜೀಬರ್ ರಹಮಾನ್‍ರ ನಾಯಕತ್ವವೇ ಬಾಂಗ್ಲಾದೇಶವನ್ನು ಅಶಾಂತಿ ಮತ್ತು ಅಸ್ಥಿರತೆಗಳ ಹಿಡಿತದಿಂದ ಹೊರಗೆ ತಂದಿದ್ದು, ಸಮಾಜದಲ್ಲಿರುವ ದ್ವೇಷ ಹಾಗೂ ಆಕ್ರೋಶಗಳನ್ನು ನಾಶಗೊಳಿಸಿ ಬಾಂಗ್ಲಾದೇಶಕ್ಕೆ ಶಾಂತಿ ಹಾಗೂ ವಿಕಾಸದ ಮಾರ್ಗವನ್ನೂ ತೋರಿಸಿಕೊಟ್ಟವರು ಮಹಾನ್ ಬಂಗಬಂಧು ಸೋನಾರ್ ಬಾಂಗ್ಲಾದ ಕನಸನ್ನು ನನಸಾಗಿಸುವ ಹಾದಿಯನ್ನು ತೋರಿದರು. ಆ ಸಮಯದಲ್ಲಿನ ಭಾರತದ ಯುವಜನತೆ ಅವರಿಂದ ವಿಶೇಷವಾಗಿ ಪ್ರಭಾವಿತರಾಗಿದ್ದರು. ಅವರ ವಿಚಾರಗಳ ಜ್ಞಾನದ ಪ್ರಯೋಜನವನ್ನು ಸ್ವತ: ನಾನೇ ಪಡೆದಿರುವುದು ನನ್ನ ಸೌಭಾಗ್ಯ. ಇಂದು ಬಂಗಬಂಧುವನ್ನು ದಕ್ಷಿಣ ಏಶಿಯಾ ಮಾತ್ರವಲ್ಲ ಇಡೀ ವಿಶ್ವದಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಸ್ಥಾಪಿಸುವ ನಾಯಕನ ರೂಪದಲ್ಲಿ ಸ್ಮರಿಸಲಾಗುತ್ತದೆ. ಅವರ ಪುತ್ರಿ ಎಕ್ಸಲೆನ್ಸಿ ಶೇಖ್ ಹಸೀನಾಜಿ ಇಂದು ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಇಲ್ಲಿ ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರ ಸಾಹಸವನ್ನು ಪ್ರಶಂಸಿಸಲು ಬಯಸುತ್ತೇನೆ. ಯಾವ ಕಠಿಣ ಪರಿಸ್ಥಿತಿಯಿಂದ ಅವರು ತಮ್ಮನ್ನು ಪಾರು ಮಾಡಿಕೊಂಡರೋ ಮತ್ತು ತಮ್ಮ ದೇಶವನ್ನು ಪಾರು ಮಾಡಿದರೋ ಆ ಸಾಹಸ ಶಕ್ತಿಯು ಎಲ್ಲರಲ್ಲೂ ಇರುವುದಿಲ್ಲ. ಆದರೆ ಅವರು ಇಂದೂ ಬಂಡೆಯಂತೆ ನಿಂತಿದ್ದಾರೆ ಮತ್ತು ತಮ್ಮ ದೇಶವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಕೆಲಸ ಮಾಡುತ್ತಿದ್ದಾರೆ.
ಮಿತ್ರರೆ,
ಇಂದು ನಮ್ಮೀ ಪ್ರದೇಶವನ್ನು, ಪ್ರಪಂಚದ ಪ್ರಾಚೀನ ಭೂ ಭಾಗವನ್ನು ಮೂರು ವಿಚಾರಧಾರೆಗಳು ವ್ಯಾಖ್ಯಾನ ಮಾಡುತ್ತಿವೆ. ಈ ವಿಚಾರಧಾರೆಗಳು ನಮ್ಮ ಸಮಾಜ ಮತ್ತು ಸರ್ಕಾರಿ ವ್ಯವಸ್ಥೆಗಳ ಆದ್ಯತೆಗಳಿಗೆ ಹಿಡಿದ ಕನ್ನಡಿಯಾಗಿದೆ. ಇದರಲ್ಲಿ ಒಂದು ವಿಚಾರವು ಆರ್ಥಿಕಾಭಿವೃದ್ಧಿಯ ಮೇಲೆ ಕೇಂದ್ರಿತವಾಗಿದೆ; ದೇಶವನ್ನು ಸಮೃದ್ಧ ಹಾಗೂ ಬಲಶಾಲಿಯಾಗಿ ಮಾಡುವುದರತ್ತ ಗುರಿ ಇಟ್ಟಿದೆ; ಸಮಾಜದ ಎಲ್ಲಾ ವರ್ಗದವರನ್ನು ಜೊತೆಯಾಗಿಸಿ ನಡೆಯುವುದರತ್ತ ಗಮನವಿರಿಸಿದೆ. ಈ ವಿಚಾರಧಾರೆಯ ಒಂದು ಪ್ರತ್ಯಕ್ಷ ಉದಾಹರಣೆಯೆಂದರೆ ಬಾಂಗ್ಲಾದೇಶದ ಪ್ರಗತಿ ಮತ್ತು ಉನ್ನತಿ. 1971ರಲ್ಲಿ ಬಾಂಗ್ಲಾದೇಶದ ನಾಗರೀಕರ ಸರಾಸರಿ ಆಯಸ್ಸು (ಜೀವನ ನಿರೀಕ್ಷೆ) ಭಾರತಕ್ಕಿಂತಲೂ ಕಡಿಮೆ ಇತ್ತು. ಇಂದು ಬಾಂಗ್ಲಾದೇಶದ ನಾಗರೀಕರ ಸರಾಸರಿ ಆಯಸ್ಸು ಭಾರತೀಯರಿಗಿಂತ ಹೆಚ್ಚಾಗಿದೆ. ಕಳೆದ 45 ವರ್ಷಗಳಲ್ಲಿ ಬಾಂಗ್ಲಾದೇಶದ ಜಿಡಿಪಿ 31 ಪಟ್ಟು ಹೆಚ್ಚಾಗಿದೆ. ಪ್ರತಿ ವ್ಯಕ್ತಿಯ ಆದಾಯವು 13 ಪಟ್ಟು ಹೆಚ್ಚಾಗಿದೆ. ಶಿಶು ಮರಣ 222 ರಿಂದ ಇಳಿದು ಈಗ 38 ಆಗಿದೆ. ಪ್ರತಿ ವ್ಯಕ್ತಿಗೂ ಇರುವ ವೈದ್ಯರ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಸ್ವಾತಂತ್ರ್ಯದ ನಂತರ ಇಲ್ಲಿ ತನಕ ಬಾಂಗ್ಲಾದೇಶದ ರಫ್ತು 125 ಪಟ್ಟು ಹೆಚ್ಚಾಗಿದೆ. ಪರಿವರ್ತನೆಯ ಈ ಕೆಲವು ಅಳತೆಗಳು ತಾವೇ ಸಾಕಷ್ಟು ಹೇಳುತ್ತವೆ. ಪ್ರಧಾನಮಂತ್ರಿ ಶೇಖ್ ಹಸೀನಾರ ಪರಿಕಲ್ಪನೆಯಂತೆ ನಡೆಯುತ್ತಾ ಬಾಂಗ್ಲಾದೇಶವು ಆರ್ಥಿಕ ಪ್ರಗತಿಯಲ್ಲಿ ಹೊಸ ಎಲ್ಲೆಗಳನ್ನು ದಾಟುತ್ತಾ ಇದೆ.
ಮಿತ್ರರೆ,
ಇದರ ಜೊತೆಗೆ ಇನ್ನೊಂದು ವಿಚಾರವೂ ಇದೆ. ಸರ್ವರ ಜೊತೆ ಸರ್ವರ ವಿಕಾಸ, ನನ್ನ ದೇಶದ ಜೊತೆ ಭಾರತದ ಪ್ರತಿಯೊಂದು ನೆರೆ ದೇಶವೂ ಪ್ರಗತಿ ಪಥದಲ್ಲಿ ಮುಂಚೂಣಿಯಲ್ಲಿರಬೇಕೆಂಬುದೇ ನನ್ನ ಅಭಿಮತ; ಭಾರತದಷ್ಟೇ ವಿಕಾಸವೆಂದರೆ ಅಪೂರ್ಣವಾದಂತೆ ಮತ್ತು ನಮ್ಮದೊಬ್ಬರದೇ ಸಮೃದ್ಧಿ ಸಂಪೂರ್ಣವೆನಿಸಿಕೊಳ್ಳುವುದಿಲ್ಲ. ಸರ್ವರ ಜೊತೆ ಸರ್ವರ ವಿಕಾಸವು ಶಾಂತಿಯ ಆಧಾರಸ್ತಂಭದ ಮೇಲೆ ಸಾಧ್ಯ ಎನ್ನುವುದು ನಮಗೆ ಗೊತ್ತು. ಆದ್ದರಿಂದ ಪ್ರತಿ ದೇಶದ ಕಡೆಗೂ ನಾವು ಸ್ನೇಹ ಹಸ್ತ ಚಾಚುತ್ತಿದ್ದೇವೆ. ಪ್ರತಿಯೊಂದು ದೇಶವನ್ನು ನಮ್ಮ ಸಮೃದ್ಧಿಯಲ್ಲಿ ಸಹಭಾಗಿಗಳಾಗಲು ಆಮಂತ್ರಿಸುತ್ತಿದ್ದೇವೆ. ಸ್ವಾರ್ಥಿಯಾಗದೆ ನಾವು ಇಡೀ ಪ್ರದೇಶದ ಒಳಿತನ್ನು ಬಯಸುತ್ತೇವೆ. ಈ ವಿಚಾರದ ಯಶಸ್ಸಿನ ಪ್ರತ್ಯಕ್ಷ ಉದಾಹರಣೆಯೆಂದರೆ ಭಾರತ ಬಾಂಗ್ಲಾ ದೇಶದ ಸಂಬಂಧಗಳ ಸಶಕ್ತ ನಕ್ಷಾಚಿತ್ರ ಮತ್ತು ಎರಡು ಸಮಾಜಗಳಿಗೆ ಮತ್ತು ಇದರಿಂದಾಗುವ ಆರ್ಥಿಕ ಲಾಭಗಳು. ಪ್ರತಿ ಕ್ಷೇತ್ರ ಆರ್ಥಿಕ, ರಾಜನೈತಿಕ, ಮೂಲ ಸೌಲಭ್ಯಗಳಿರುವ ಕಟ್ಟಡ, ಆರ್ಥಿಕ, ಸಂಪರ್ಕ ಸಾಮಥ್ರ್ಯದ ಸುಭದ್ರತೆ ಅಥವಾ ಸುಭದ್ರತೆಯಾಗಲಿ ಇಲ್ಲವೇ ಅನೇಕ ದಶಕಗಳಿಂದಿರುವ ಭೂ ಸೀಮೆ ಹಾಗೂ ಸಮುದ್ರ ಸೀಮೆಯ ವಿವಾದ ಬಗೆಹರಿಸುವ ವಿಷಯವಾಗಲಿ ನಮ್ಮ ಸಹಕಾರ ಪರಸ್ಪರ ಶಾಂತಿ, ಜಂಟಿ ವಿಕಾಸ ಪರಸ್ಪರ ನಂಬಿಕೆ ಹಾಗೂ ಕ್ಷೇತ್ರೀಯ ಅಭಿವೃದ್ಧಿಯ ವಿಚಾರದ ಯಶಸ್ಸಿಗೆ ನಿಶ್ಚಿತವಾದ ಪ್ರಮಾಣವಾಗಿದೆ.
ಮಿತ್ರರೆ,
ಆದರೆ ದು:ಖದ ವಿಷಯವೆಂದರೆ ಈ ಎರಡು ವಿಚಾರಧಾರೆಗಳ ವಿರುದ್ಧವಾಗಿ ದಕ್ಷಿಣ ಏಶಿಯಾದಲ್ಲಿ ಒಂದು ಮನ:ಸ್ಥಿತಿ ಇದೆ. ಆತಂಕವಾದದ ಪ್ರೇರಣೆ ಮತ್ತು ಪೋಷಕವಾಗಿರುವಂತಹ ವಿಚಾರ ಮೌಲ್ಯಗಳು ಮಾನವತೆಯ ಮೇಲೆ ಇರದೆ ಹಿಂಸೆ ಆತಂಕ ಮತ್ತು ಕ್ರೋಧದ ಮೇಲೆ ಆಧರಿಸಿರುವಂತಹ ವಿಚಾರ ಇದರ ಮೂಲ ಉದ್ದೇಶ ಭಯೋತ್ಪಾದಕರ ಮೂಲಕ ಭಯವನ್ನು ಹರಡುವುದು.
ಇಂತಹ ಒಂದು ನೀತಿಯನ್ನು ರೂಪಿಸಿದವರಿಗೆ:
• ಮಾನವತಾವಾದಕ್ಕಿಂತ ಆತಂಕವಾದವೇ ಹಿರಿದಾಗಿ ಕಾಣಿಸುತ್ತದೆ.
• ವಿಕಾಸಕ್ಕಿಂತ ವಿನಾಶವೇ ದೊಡ್ಡದೆನಿಸುತ್ತದೆ.
• ಸೃಷ್ಟಿಗಿಂತ ಸಂಹಾರವೇ ದೊಡ್ಡದೆನಿಸುತ್ತದೆ.
• ನಂಬಿಕೆಗಿಂತ ನಂಬಿಕೆದ್ರೋಹವೇ ದೊಡ್ಡದೆನಿಸುತ್ತದೆ.
ಇಂತಹ ವಿಚಾರವು ನಮ್ಮ ಸಮಾಜದ ಶಾಂತಿ ಹಾಗೂ ಸಮತೋಲನ ಮತ್ತು ಅದರ ಮಾನಸಿಕ ಹಾಗೂ ಆರ್ಥಿಕ ವಿಕಾಸಕ್ಕೆ ಬಹಳ ದೊಡ್ಡ ಸವಾಲಾಗುತ್ತದೆ. ಈ ವಿಚಾರಧಾರೆಯು ಇಡೀ ದೇಶ ಹಾಗೂ ವಿಶ್ವಶಾಂತಿ ಮತ್ತು ವಿಕಾಸದಲ್ಲಿ ಅಡ್ಡಿಯನ್ನು ಉಂಟು ಮಾಡುತ್ತದೆ. ಸಮಾಜದ ಆರ್ಥಿಕ ವಿಕಾಸದ ವಿಚಾರಧಾರೆಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸಹಭಾಗಿಗಳಾಗಿರುವ ಹಾಗೆಯೇ ಈ ಮೂರನೇ ನಕಾರಾತ್ಮಕ ವಿಚಾರಧಾರೆ ಬಲಿಪಶುವಾಗಿದ್ದೇವೆ.
ಮಿತ್ರರೆ,
ಈ ಪ್ರದೇಶದ ಎಲ್ಲಾ ದೇಶಗಳ ಪ್ರಜೆಗಳು ಯಶಸ್ಸು ಮತ್ತು ಸಮೃದ್ಧಿಯತ್ತ ಸಾಗಲಿ ಎಂಬುದು ನಮ್ಮ ಹಾರ್ದಿಕ ಅಭಿಲಾಷೆ. ಮತ್ತು ಇದಕ್ಕಾಗಿ ನಮ್ಮ ಸಹಯೋಗದ ದ್ವಾರ ಸದಾ ತೆರೆದಿರುತ್ತದೆ. ಆದರೆ ಇದಕ್ಕಾಗಿ ಆತಂಕವಾದ ಮತ್ತು ಆತಂಕವಾದಿ ಆಲೋಚನೆಗಳನ್ನು ತ್ಯಾಗ ಮಾಡುವುದು ಅನಿವಾರ್ಯವಾಗಿದೆ.
ಮಿತ್ರರೆ,
ಭಾರತ- ಬಾಂಗ್ಲಾದೇಶದ ಸಂಬಂಧ ಸರ್ಕಾರಗಳ ಅಥವಾ ಅಧಿಕಾರದ ಅಧೀನದಲ್ಲಿಲ್ಲ. ಎರಡೂ ದೇಶಗಳ 140 ಕೋಟಿ ಜನರು ಜೊತೆಯಲ್ಲಿರುವುದರಿಂದ ಭಾರತ ಮತ್ತು ಬಾಂಗ್ಲಾದೇಶಗಳು ಜೊತೆಯಲ್ಲಿವೆ. ನಾವು ಸುಖ-ದು:ಖಗಳಲ್ಲಿ ಭಾಗಿಗಳು. ಭಾರತಕ್ಕಾಗಿ ನಾನು ಯಾವ ಕನಸು ಕಾಣುತ್ತೇನೋ ಅವೇ ಶುಭಕಾಮನೆಗಳು ನನ್ನ ಬಾಂಗ್ಲಾ ದೇಶಕ್ಕೂ ಇವೆ. ಮತ್ತು ಭಾರತದ ಪ್ರತಿಯೊಂದು ನೆರೆಯ ದೇಶಕ್ಕೂ ಇದೆ. ನಾನು ಬಾಂಗ್ಲಾ ದೇಶಕ್ಕೆ ಉಜ್ವಲ ಭವಿಷ್ಯವನ್ನು ಇಚ್ಛಿಸುತ್ತೇನೆ. ಓರ್ವ ಸ್ನೇಹಿತನಾಗಿ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಭಾರತ ಮಾಡುತ್ತದೆ. ಕಡೆಯದಾಗಿ ನಾನು ಮತ್ತೊಂದು ಸಲ ಮುಕ್ತಿ ಯೋಧರಿಗೆ, ಭಾರತದ ವೀರ ಸೈನಿಕರಿಗೆ ವಂದಿಸುತ್ತೇನೆ. ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸ್ವತ: ಉಪಸ್ಥಿತರಾಗಿರುವ ಪ್ರಧಾನಮಂತ್ರಿ ಶೇಖ್ ಹಸೀನಾಜೀ ಅವರಿಗೆ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತವು ಆಪ್ತ ಹಾಗೂ ವಿಶ್ವಸನೀಯ ಮಿತ್ರನ ರೀತಿಯಲ್ಲಿ ಬಾಂಗ್ಲಾದೇಶಕ್ಕೆ ಪ್ರತಿ ಗಳಿಗೆಯೂ ಎಲ್ಲಾ ಸಹಾಯ ಮಾಡಲು ಸಿದ್ಧವಾಗಿದೆ ಮತ್ತು ಸಿದ್ಧವಾಗಿರುತ್ತದೆ.
ಜಯ ಹಿಂದ್, ಜಯ್ ಬಾಂಗ್ಲಾ .
आज एक विशेष दिन है। आज भारत तथा बांग्लादेश के शहीदों के प्राण बलिदान को स्मरण करने का दिन है: PM @narendramodi
— PMO India (@PMOIndia) April 8, 2017
आज का दिन ऐतिहासिक है। बांग्लादेश स्वतंत्रता संग्राम में शहीद हुए सभी भारतीय सैनिकों के परिवारों के लिए ये कभी न भूल पाने वाला क्षण है: PM
— PMO India (@PMOIndia) April 8, 2017
यह मेरा परम सौभाग्य है कि इस समय 7 भारतीय शहीदों के परिवार यहां उपस्थित हैं : PM @narendramodi
— PMO India (@PMOIndia) April 8, 2017
भारतीय सैनिको के बलिदानों के लिए मैं और पूरा देश सभी शहीदों को कोटि-कोटि नमन करते हैं : PM @narendramodi
— PMO India (@PMOIndia) April 8, 2017
बांग्लादेश का जन्म जहां एक नयी आशा का उदय था । वहीं 1971 का इतिहास हमें कई अत्यंत दर्दनाक पलों की भी याद दिलाता है : PM @narendramodi
— PMO India (@PMOIndia) April 8, 2017
बांग्लादेश की जन्म गाथा असीम बलिदानों की गाथा है : PM @narendramodi
— PMO India (@PMOIndia) April 8, 2017
मुक्तियोद्धाओं के साथ साथ बांग्लादेश के लिए किये गए भारतीय फौज का संघर्ष और बलिदान को भी कोई नहीं भुला सकता : PM
— PMO India (@PMOIndia) April 8, 2017
ऐसा करने में उनकी एक मात्र प्रेरणा थी, बांग्लादेश की जनता के प्रति उनका प्रेम, और बांग्लादेश के लोगों के सपनों के प्रति उनका सम्मान : PM
— PMO India (@PMOIndia) April 8, 2017
PM spoke on Major Ashok Tara during his speech. On 17 December 1971, Major Ashok Tara of 14 Guards rescued family of Sheikh Mujibur Rahman. pic.twitter.com/SRMH4MCoZX
— PMO India (@PMOIndia) April 8, 2017
Major Ashok Tara rescued family of Sheikh Mujibur Rahman from a house in Dhanmandi, where they had been imprisoned.
— PMO India (@PMOIndia) April 8, 2017
1971 में भारत की दिखाई ये इंसानियत पिछली शताब्दी की सबसे बड़ी घटनाओं में से एक है : PM @narendramodi
— PMO India (@PMOIndia) April 8, 2017
मेरा यह स्पष्ट मत है कि मेरे देश के साथ ही भारत का हर पड़ोसी देश प्रगति के मार्ग पर अग्रसर हो : PM @narendramodi
— PMO India (@PMOIndia) April 8, 2017
स्वार्थी न बनकर हमने पूरे क्षेत्र का भला चाहा है : PM @narendramodi
— PMO India (@PMOIndia) April 8, 2017
लेकिन दुःख की बात है कि इन दो विचार धाराओं के विपरीत भी दक्षिण एशिया में एक मानसिकता है : PM @narendramodi
— PMO India (@PMOIndia) April 8, 2017
ऐसी सोच जिस का value system मानवता पर नहीं अपितु हिंसा, आतिवाद तथा आतंक पर आधारित है : PM @narendramodi
— PMO India (@PMOIndia) April 8, 2017
भारत-बांग्लादेश संबंध ना सरकारों के मोहताज हैं और ना ही सत्ता के: PM @narendramodi
— PMO India (@PMOIndia) April 8, 2017
भारत और बांग्लादेश इसलिए साथ हैं, क्योंकि दोनों देशों के 140 करोड़ लोग साथ हैं। हम दुःख-सुख के साथी है : PM @narendramodi
— PMO India (@PMOIndia) April 8, 2017
Recalled the valour & sacrifices of the Indian armed forces in the 1971 war at the programme to honour Indian soldiers martyred in the war.
— Narendra Modi (@narendramodi) April 8, 2017
Reiterated India’s commitment to peace, harmony, brotherhood in our region, which will benefit people of all our nations.
— Narendra Modi (@narendramodi) April 8, 2017
Recalled the exemplary leadership, struggles & bravery of Bangabandhu Sheikh Mujibur Rahman. https://t.co/us4JDwBNUu
— Narendra Modi (@narendramodi) April 8, 2017