ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ 2016ರ ಜುಲೈ 8ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದಲ್ಲಿನ ದ್ವಿಪಕ್ಷೀಯ ಉತ್ತೇಜನಕ್ಕಾಗಿ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು.
ಈ ತಿಳಿವಳಿಕೆ ಒಪ್ಪಂದವು ಅಂತರ ಸಾಂಸ್ಥಿಕ ಸಹಕಾರ ಸ್ಥಾಪನೆಗೆ ಮತ್ತು ಎರಡೂ ಪಕ್ಷಕಾರರ ನಡುವೆ ಐಸಿಟಿ ವಲಯದಲ್ಲಿ ಸಹಕಾರ ಉತ್ತೇಜನರಕ್ಕೆ ನೆರವಾಗಲಿದೆ.
ಐಸಿಟಿ ವಲಯದಲ್ಲಿ ಎರಡೂ ರಾಷ್ಟ್ರಗಳ ಸಾರ್ವಜನಿಕ ಸಂಸ್ಥೆಗಳು ಮತ್ತು ಸರ್ಕಾರಗಳ ನಡುವೆ, ಸಾಂಸ್ಥಿಕ ಸಾಮರ್ಥ್ಯ ವರ್ಧನೆ, ಖಾಸಗಿ ಕಾಯಗಳ ನಡುವೆ ವಿನಿಮಯ ಮತ್ತು ಸಕ್ರಿಯ ಸಹಕಾರಕ್ಕೂ ಇದು ಕಾರಣವಾಗಲಿದೆ.
AKT/VBA/AK