Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬೈನಲ್ಲಿರುವ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಭೂಮಿಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಭೂಮಿಯೊಂದಿಗೆ ಸಶ್ಮಾನವನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ವಿನಿಮಯ ಮಾಡಿಕೊಳ್ಳುತ್ತಿರುವ ವಿಚಾರ


ಶ್ರೀಯುತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರಸರ್ಕಾರದ ಸಂಪುಟ ಸಭೆ ಮಹತ್ವದ ಅನುಮೋದನೆಯನ್ನು ನೀಡಿದೆ. ಈ ಅನುಮೋದನೆಯ ವಿಷಯ ಏನೆಂದರೆ, ಮುಂಬೈ ಅಂತರಾಷ್ಟ್ರೀಯ ವಿಮಾನನಿಲ್ದಾಣ ಪ್ರೈವೇಟ್ ಲಿಮಿಟೆಡ್ ಮಾನ್ಯತೆ ಹೊಂದಿರುವ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ ಸಿಎಸ್ಐಎನಲ್ಲಿರುವ 2860.90 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು, ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಭೂಮಿಯೊಂದಿಗೆ ರಿಸಮಾನವಾದ ಮಾಪನದಲ್ಲಿ ವಿನಿಮುಯ ಮಾಡಿಕೊಳ್ಳುವುದಾಗಿದೆ. ಸಸ್ಮಾಶನ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಂಪುಟ ಈ ವಿನಿಮಯ ಪ್ರಕ್ರಿಯೆಗೆ ಅನುಮೋದನೆಯನ್ನು ನೀಡಿದೆ.

ಎಂಸಿಜಿಎಂನ ಭೂಮಿಯೊಂದಿಗಿನ ವಿನಿಮಯ ಪ್ರಕ್ರಿಯೆ ಮುಂಬೈ ಅಂತರಾಷ್ಟ್ರೀಯ ವಿಮಾನನಿಲ್ದಾಣ ಪ್ರೈವೇಟ್ ಲಿಮಿಟೆಡ್ಗೆ ಮುಂಬೈನ ಸಿಎಸ್ಐಎನಲ್ಲಿನ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರಿಯಾಗಲಿದೆ. ಮೇಲಾಗಿ, ಇದರ ಕಾರ್ಯಾಚರಣೆ ಫಲವಾಗಿ ಸಶ್ಮಾನವೂ ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳಲಿದೆ.ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ವಿನಿಮಯ ಹಿನ್ನೆಲೆಯಲ್ಲಿ ಪ್ರಸ್ತಾವನೆಗೊಳಪಟ್ಟಿರುವ ಖಾಸಗಿ ಭೂಮಿ ಒಂದೇ ವಿಸ್ತೀರ್ಣ ಹೊಂದಿದೆ. ಮೇಲಾಗಿ, ಉಭಯ ಜಾಗಗಳು ಅಕ್ಕಪಕ್ಕದಲ್ಲಿಯೇ ಇವೆ. ಅಲ್ಲದೇ, ಪ್ರಾಸ್ತಾವಿಕ ಭೂಮಿಯ ವಲಯದರಗಳು ಕೂಡ ಒಂದೇ ಆಗಿವೆ. ಇನ್ನು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯಾದ ಆರ್ಥಿಕ ಹೂಡಿಕೆ ಕೇಂದ್ರಸರ್ಕಾರದ ಮೂಲಕ ಈ ವಿಚಾರದಲ್ಲಿ ಇರುವುದಿಲ್ಲ. ಆದಾಗ್ಯೂ, ವಿನಿಮಯದ ಬಳಿಕ ಪರ್ಯಾಯ ಭೂಮಿಯ ಮುಟ್ಯೇಶನ್ ಖರ್ಚುವೆಚ್ಚವನ್ನು ಮುಂಬೈ ಅಂತರಾಷ್ಟ್ರೀಯ ವಿಮಾನನಿಲ್ದಾಣ ಪ್ರೈವೇಟ್ ಲಿಮಿಟೆಡ್ ಭರಿಸಲಿದೆ..