ಪಿಎಂಇಂಡಿಯಾ
ಮುತ್ತುಗಳಿಂದ ಮಾಡಿದ ವಿಶಿಷ್ಠ ಕಲಾಕೃತಿಯನ್ನು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗಿಂದು ಅರ್ಪಿಸಲಾಯಿತು. ಈ ಕಲಾಕೃತಿಯು ಭಾರತದ ಭೂಪಟ ಮತ್ತು ಪ್ರಧಾನಿಯವರ ಚಿತ್ರವನ್ನೂ ಒಳಗೊಂಡಿದೆ.
ಈ ಕೃತಿಯನ್ನು ರಚಿಸಿದ ಶ್ರೀಮತಿ. ಕುಶ್ಬೋ ಆಕಾಶ್ ದೇವ್ ಅವರು, ಈ ಕಲಾಕೃತಿಯ ರಚನೆಗೆ ಐದು ಲಕ್ಷಕ್ಕೂ ಹೆಚ್ಚು ಮುತ್ತುಗಳನ್ನು, 10 ಕಿಲೋ ಮೀಟರ್ ಉದ್ದದಷ್ಟು ದಾರವನ್ನು ಬಳಸಲಾಗಿದೆ ಎಂದು ತಿಳಿಸಿದರು. ಈ ಕಲಾಕೃತಿಯು 7 ಅಡಿ ಎತ್ತರ ಮತ್ತು 7 ಅಡಿ ಅಗಲವಿದ್ದು, ಇದನ್ನು ಮಾಡಲು 850 ಗಂಟೆ ತೆಗೆದುಕೊಳ್ಳಲಾಗಿದೆ.
ರಾಜಕೋಟ್ ನ ಸಂಸತ್ ಸದಸ್ಯ ಶ್ರೀ. ಮೋಹನ್ ಬಾಯ್ ಕುಂದಾರಿಯಾ ಈ ಸಂದರ್ಭದಲ್ಲಿ ಹಾಜರಿದ್ದರು.
*****/center>
AKT/HS