ಪಿಎಂಇಂಡಿಯಾ
ಪ್ರಧಾನ ಮಂತ್ರಿ, ಶ್ರೀ ನರೇಂದ್ರ ಮೋದಿ ಅವರು ರಾಜಧಾನಿಯಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ 100 ಮಂದಿ ಮುದ್ರಾ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.
ಪ್ರಧಾನ ಮಂತ್ರಿ ಮುದ್ರಾ ಯೋಜನಾ (ಪಿ.ಎಂ.ಎಂ.ವೈ.)ಯು ಭದ್ರತೆ ಇಲ್ಲದೆ ಸುಲಭದಲ್ಲಿ ಸಾಲ ಲಭ್ಯವಾಗುವಂತೆ ಮಾಡುವ ಮೂಲಕ ಯುವಕರಲ್ಲಿ ಉದ್ಯಮಶೀಲತ್ವವನ್ನು ಉತ್ತೇಜಿಸಲು ಕೇಂದ್ರ ಸರಕಾರ ಜಾರಿಗೆ ತಂದ ಮಹತ್ವದ ಕಾರ್ಯಕ್ರಮವಾಗಿದೆ. 2018 ರ ಮಾರ್ಚ್ 23 ರವರೆಗೆ 4,53,51,509 ಸಾಲಗಳನ್ನು ಮಂಜೂರು ಮಾಡಲಾಗಿದೆ, ಇವುಗಳ ಮೊತ್ತ 2,28,144.72 ಕೋ.ರೂ.ಗಳು. ಈ ಯೋಜನೆಯಡಿ ಒಟ್ಟು ವಿತರಿಸಲಾಗಿರುವ ಸಾಲಗಳ ಮೊತ್ತ 220596.05 ಕೋ.ರೂ.
ಈ ಯೋಜನೆಯನ್ನು 2015 ರ ಏಪ್ರಿಲ್ 8 ರಂದು ಸಾಂಸ್ಥಿಕವಲ್ಲದ ಸಣ್ಣ ವ್ಯಾಪಾರೀ ವಲಯಕ್ಕೆ (ಎನ್.ಸಿ.ಎಸ್.ಬಿ.ಎಸ್.) ಹಣಕಾಸು ಲಭ್ಯತೆಯನ್ನು ಖಾತ್ರಿಪಡಿಸಲು ಆರಂಭಿಸಲಾಗಿತ್ತು. ಇದರಡಿ ಶಿಶು, ಕಿಶೋರ ಮತ್ತು ತರುಣ್ ಮೂರು ವಿಭಾಗಗಳಡಿ ಸುಲಭದಲ್ಲಿ ಸಾಲ ಲಭ್ಯವಾಗುತ್ತಿದೆ.
ಆದಾಯ ಸೃಷ್ಟಿಸುವ ಚಟುವಟಿಕೆಗೆ ಸಂಬಂಧಿಸಿದಂತೆ 10 ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಪಿ.ಎಂ. ಎಂ. ವೈ. ವಿಭಾಗದಲ್ಲಿ ನೀಡಲಾಗುತ್ತದೆ. ’ಶಿಶು’ ವಿಭಾಗದಲ್ಲಿ 50000 ರೂ.ಗಳವರೆಗೆ, ’ಕಿಶೋರ’ ಉಪವಿಭಾಗದಲ್ಲಿ 50,000 ದಿಂದ 5 ಲಕ್ಷ ರೂ.ಗಳವರೆಗೆ ಮತ್ತು ’ತರುಣ್’ ಉಪವಿಭಾಗದಡಿ 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಸಾಲ ಒದಗಿಸಲಾಗುತ್ತದೆ.
ಕೃಷಿ (ಬೆಳೆ ಸಾಲ, ಕಾಲುವೆ, ನೀರಾವರಿ, ಬಾವಿಗಳು ಇತ್ಯಾದಿ ಭೂ ಅಭಿವೃದ್ದಿ ಹೊರತುಪಡಿಸಿ) ಸಂಬಂಧಿ ಚಟುವಟಿಕೆಗಳು ಮತ್ತು ಇವುಗಳನ್ನು ಬೆಂಬಲಿಸುವ ಪೂರಕ ಚಟುವಟಿಕೆಗಳು , ಜೀವನೋಪಾಯ ವರ್ಧಿಸುವ ಅಥವಾ ಆದಾಯ ಉತ್ಪಾದಿಸುವ ಕಾರ್ಯಚಟುವಟಿಕೆಗಳನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ 2016ರ ಏಪ್ರಿಲ್ ತಿಂಗಳಿನಿಂದ ತರಲಾಗಿದೆ.
On 11th April, I look forward to a special programme! I will be interacting with beneficiaries of the Mudra Yojana at my residence. It would be wonderful to speak to them and personally hear about their journeys.
— Narendra Modi (@narendramodi) April 8, 2018