ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಐತಿಹಾಸಿಕ ಹಣ ಪೂರಣ ಉಪಕ್ರಮವಾದ ಜನ್ ಧನ್ ಯೋಜನೆ ಮೂರು ವರ್ಷ ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಎಲ್ಲ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಇಂದು, ಜನ್ ಧನ್ ಯೋಜನೆ ಮೂರು ವರ್ಷ ಪೂರೈಸಿದೆ. ಈ ಉಪಕ್ರಮದ ಪ್ರಯೋಜನಕ್ಕೆ ಪಾತ್ರವಾಗಿರುವ ಕೋಟ್ಯಂತರ ಜನರಿಗೆ ಅದರಲ್ಲೂ ಬಡವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಬಡವರನ್ನು, ಶೋಷಿತರನ್ನು ಮತ್ತು ಕಡೆಗಣಿಸಿದವರನ್ನು ಆರ್ಥಿಕ ಮುಖ್ಯವಾಹಿನಿಗೆ ತರಲು ಜನ್ ಧನ್ ಕ್ರಾಂತಿ ಒಂದು ಐತಿಹಾಸಿಕ ಕ್ಷಣವಾಗಿದೆ.
ಜನ್ ಧನ್, ಸಾಮಾಜಿಕ ಸುರಕ್ಷತಾ ಯೋಜನೆಗಳಪ, ಮುದ್ರಾ ಮತ್ತು ಸ್ಟಾಂಡ್ ಅಪ್ ಇಂಡಿಯಾ ಮೂಲಕ ಲಕ್ಷಾಂತರ ಆಕಾಂಕ್ಷಿಗಳಿಗೆ ನಾವು ಚೈತನ್ಯ ನೀಡಿದ್ದೇವೆ.
ಬಡಜನರ ಮತ್ತು ಶೋಷಿತರ ಬದುಕಿನಲ್ಲಿ ಗುಣಾತ್ಮಕ ಪರಿವರ್ತನಾತ್ಮಕ ಬದಲಾವಣೆ ತರುವ ನಮ್ಮ ಪ್ರಯತ್ನ ಅದಮ್ಯ ಚೈತನ್ಯದೊಂದಿಗೆ ಮುಂದುವರಿಯಲಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
Today, Jan Dhan Yojana completes 3 years. I congratulate the crores of people, particularly the poor, who benefitted from this initiative. pic.twitter.com/rV3wpc7Zi4
— Narendra Modi (@narendramodi) August 28, 2017
#JanDhanRevolution is a historic movement to bring the poor, downtrodden & marginalised into the financial mainstream. pic.twitter.com/Np8jFpaTHB
— Narendra Modi (@narendramodi) August 28, 2017
Through Jan Dhan Yojana, social security schemes, MUDRA & stand up India, we have given wings to millions of aspirations. #JanDhanRevolution
— Narendra Modi (@narendramodi) August 28, 2017
Our efforts to bring a qualitative & transformative change in the lives of the poor & marginalised continue with immense vigour.
— Narendra Modi (@narendramodi) August 28, 2017