ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಮೂಲ ಸವಕಳಿ ಮತ್ತು ಭಾರತದಿಂದ ಲಾಭದ ವರ್ಗಾವಣೆಗಾಗಿ ತೆರಿಗೆ ಒಪ್ಪಂದದ ಸಂಬಂಧಿತ ಕ್ರಮಗಳ ಅಳವಡಿಕೆಗಾಗಿ ಬಹುಪಕ್ಷೀಯ ಸಮ್ಮೇಳನಕ್ಕೆ ಒಪ್ಪಿಗೆ ನೀಡಿದೆ. ಇದು ತೆರಿಗೆ ಯೋಜನೆ ತಂತ್ರಗಳ ಮೂಲಕ ಮೂಲ ಸವಕಳಿಯನ್ನು ನಿಭಾಯಿಸಲು ಮತ್ತು ಲಾಭದ ವರ್ಗಾವಣೆಗಾಗಿ ಓಎಸಿಡ್ / ಜಿ೨೦ ಬಿಪ್ಸ್ ಪ್ರಾಜೆಕ್ಟ್’ನ ಫಲಿತಾಂಶವಾಗಿದೆ. ಅದು ಲಾಭದ ವರ್ಗಾವಣೆ ತೆರಿಗೆ ನಿಯಮಗಳಲ್ಲಿ ಕೊರತೆಗಳನ್ನು ಮತ್ತು ಅಸಮತೋಲನವನ್ನು ನಿವಾರಿಸಿ, ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲದೆ, ಕಡಿಮೆ ಅಥವಾ ಶೂನ್ಯತೆರಿಗೆ ಸ್ಥಳಗಳಿಗೆ ಕೃತಕವಾಗಿ ಲಾಭಗಳನ್ನು ವರ್ಗಾಯಿಸುವುದನ್ನು ತಡೆಯತ್ತದೆ. ಪರಿಣಾಮವಾಗಿ ಕಡಿಮೆ ಸಾಂಸ್ಥಿಕ ತೆರಿಗೆಯನ್ನು ಪಾವತಿಸಲಾಗುವುದಿಲ್ಲ.
ಅಂತಿಮ ಬಿಇಪಿಎಸ್ ಪ್ರಾಜೆಕ್ಟ್, ಬಿಇಪಿಎಸ್ ಅನ್ನು ಸಮಗ್ರವಾದ ರೀತಿಯಲ್ಲಿ ನಿಭಾಯಿಸಲು 15 ಕ್ರಮಗಳನ್ನು ಗುರುತಿಸಿದೆ. ಅಂತಿಮ ಬಿಪ್ಸ್ ಪ್ಯಾಕೇಜನ್ನು ಕಾರ್ಯಗತಗೊಳಿಸುವುದು, ದುಬಾರಿಯಾದ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ 3000 ಕ್ಕಿಂತಲೂ ಹೆಚ್ಚು ದ್ವಿಪಕ್ಷೀಯ ತೆರಿಗೆ ಒಪ್ಪಂದಗಳಿಗೆ ಬದಲಾವಣೆಗಳನ್ನು ಬಯಸುತ್ತದೆ. ಅದೇ ರೀತಿಯಾಗಿ, ಸಮಾವೇಶವನ್ನು ಬಹುಪಕ್ಷೀಯ ಉಪಕರಣವೆಂದು ಪರಿಗಣಿಸಲಾಗಿತ್ತು, ಇದು ಬಿಇಪಿಎಸ್ ಕ್ರಮಗಳನ್ನು ಕಾರ್ಯಗತಗೊಳಿಸಲು ಎಲ್ಲಾ ದ್ವಿಪಕ್ಷೀಯ ತೆರಿಗೆ ಒಪ್ಪಂದಗಳನ್ನು (ಒಳಪಟ್ಟ ತೆರಿಗೆ ಒಪ್ಪಂದಗಳು / ಸಿಟಿಎ) ತ್ವರಿತವಾಗಿ ಮಾರ್ಪಡಿಸುತ್ತದೆ. ಈ ಉದ್ದೇಶಕ್ಕಾಗಿ, ಇಂತಹ ಬಹುಪಕ್ಷೀಯ ಸಲಕರಣೆಗಳ ಅಭಿವೃದ್ಧಿಗಾಗಿ ಆಡ್-ಹಾಕ್ ಗ್ರೂಪ್’ನ ರಚನೆಯು ಫೆಬ್ರವರಿ 2015ರಲ್ಲಿ ಜಿ -20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್’ಗಳಿಂದ ಅನುಮೋದಿಸಲ್ಪಟ್ಟಿತು.
ಹಿನ್ನೆಲೆ :
ಭಾರತವು 100 ಕ್ಕಿಂತ ಹೆಚ್ಚಿನ ದೇಶಗಳ ಆಡ್ ಹಾಕ್ ಗ್ರೂಪ್’ನ ಭಾಗವಾಗಿದೆ ಮತ್ತು ಜಿ 20, ಓಇಸಿಡಿ, ಬಿಇಪಿಎಸ್ ಪಾಲುದಾರ ಮತ್ತು ಇತರ ಆಸಕ್ತ ದೇಶಗಳ ವ್ಯಾಪ್ತಿಯನ್ನು ಹೊಂದಿದೆ. ಇದು ಮೇ 2015 ರಿಂದ ಬಹುಪಕ್ಷೀಯ ಸಮಾವೇಶದ ಪಠ್ಯವನ್ನು ಅಂತಿಮಗೊಳಿಸುವುದಕ್ಕೆ ಸಮನಾದ ಒಂದು ಪ್ರಕ್ರಿಯೆ ಮೇಲೆ ಕೆಲಸ ಮಾಡುತ್ತಿದೆ. ಸಮಾವೇಶದ ಪಠ್ಯ ಮತ್ತು ಅದರೊಂದಿಗೆ ವಿವರಣಾತ್ಮಕ ಹೇಳಿಕೆಗಳನ್ನು 24 ನವೆಂಬರ್ 2016 ರಂದು ಆಡ್ ಹಾಕ್ ಗ್ರೂಪ್ ಅಳವಡಿಸಿಕೊಂಡಿತು.
ಒಡಂಬಡಿಕೆ ದುರುಪಯೋಗದ ತಡೆಗಟ್ಟುವಿಕೆ ಮತ್ತು ಪರಸ್ಪರ ಒಪ್ಪಂದ ಪ್ರಕ್ರಿಯೆಯ ಮೂಲಕ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದ ಎರಡು ಕನಿಷ್ಠ ಮಾನದಂಡಗಳನ್ನು ಸಮಾವೇಶವು ಜಾರಿಗೆ ತರುತ್ತದೆ. ಸಮಾವೇಶವು ಅಸ್ತಿತ್ವದಲ್ಲಿರುವ ಒಪ್ಪಂದಕ್ಕೆ ತಿದ್ದುಪಡಿ ಶಿಷ್ಟಾಚಾರದ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ, ಇದು ಸೇರ್ಪಡೆಗೊಂಡ ತೆರಿಗೆ ಒಪ್ಪಂದಗಳ ಪಠ್ಯವನ್ನು ನೇರವಾಗಿ ತಿದ್ದುಪಡಿ ಮಾಡುತ್ತದೆ. ಬದಲಾಗಿ, ಅಸ್ತಿತ್ವದಲ್ಲಿರುವ ತೆರಿಗೆ ಒಪ್ಪಂದಗಳೊಂದಿಗೆ ಬೆಇಪಿಎಸ್ ಕ್ರಮಗಳನ್ನು ಕಾರ್ಯಗತಗೊಳಿಸಲು ಅದರ ಅಳವಡಿಕೆಯನ್ನು ಮಾರ್ಪಡಿಸಲಾಗುವುದು. ಬಹುಪಕ್ಷೀಯ ಸನ್ನಿವೇಶದಲ್ಲಿ ಬಿಇಪಿಎಸ್ ಯೋಜನೆಯ ಅನುಷ್ಠಾನದಲ್ಲಿ ಸ್ಥಿರತೆ ಮತ್ತು ನಿಶ್ಚಿತತೆಯನ್ನು ಸಮಾವೇಶವು ಖಚಿತಪಡಿಸುತ್ತದೆ. ಸಮಾವೇಶವು ಒಂದು ನಿರ್ದಿಷ್ಟ ತೆರಿಗೆ ಒಪ್ಪಂದವನ್ನು ಹೊರತುಪಡಿಸುವ ಮತ್ತು ಮೀಸಲಾತಿಗಳ ಮೂಲಕ ನಿಬಂಧನೆಗಳ ಅಥವಾ ನಿಬಂಧನೆಗಳ ಭಾಗಗಳನ್ನು ಹೊರಗುಳಿಯಲು ಸಹ ನಮ್ಯತೆಯನ್ನು ಒದಗಿಸುತ್ತದೆ.
ಸಮಾವೇಶವನ್ನು 2016 ರ ಡಿಸೆಂಬರ್ 31 ರ ವೇಳೆಗೆ ಸಹಿಗಾಗಿ ತೆರೆಯಲಾಯಿತು ಮತ್ತು 2017 ರ ಜೂನ್ 7 ರಂದು ಮೊದಲ ಜಂಟಿ ಸಹಿ ಸಮಾರಂಭವನ್ನು ಪ್ಯಾರಿಸ್’ನಲ್ಲಿ ನಡೆಸಲಾಗುವುದು ಎಂದು ನಿಗದಿಪಡಿಸಲಾಗಿದೆ. ಸಮಾವೇಶಕ್ಕೆ ಬದ್ಧರಾಗಿರುವ ಸಮ್ಮತಿಯನ್ನು ವ್ಯಕ್ತಪಡಿಸುವ ಪ್ರಕ್ರಿಯೆಯಲ್ಲಿ ಸಹಿ ಮಾಡುವುದು ಮೊದಲ ಹೆಜ್ಜೆಯಾಗಿದೆ. ಅಂಗೀಕರಿಸುವಿಕೆಯ ಮೇಲೆ ಮಾತ್ರ ಜಾರಿಯಾಗಲಿದೆ. ಸೇರ್ಪಡೆಗೊಂಡ ತೆರಿಗೆ ಒಪ್ಪಂದಗಳ ಪಟ್ಟಿ ಮತ್ತು ದೇಶದಿಂದ ಆಯ್ಕೆ ಮಾಡಲ್ಪಟ್ಟ ಮೀಸಲಾತಿಗಳ ಮತ್ತು ಆಯ್ಕೆಗಳ ಪಟ್ಟಿಯನ್ನು ಸಹಿ ಮಾಡುವ ಸಮಯದಲ್ಲಿ ಅಥವಾ ದೃಢೀಕರಣದ ಪತ್ರವನ್ನು ದಾಖಲುಪಡಿಸುವ ಸಮಯದಲ್ಲಿ ನೀಡಬೇಕಾಗಿರುತ್ತದೆ.
ಭಾರತವು ಸಮಾವೇಶ ಒಪ್ಪಂದಕ್ಕೆ ಸಹಿಹಾಕಲು ಸಂಪುಟದ ಅನುಮೋದನೆ ಕೋರಲಾಗಿತ್ತು. ಜೂನ್, 2017 ರಂದು ಸಹಿ ಹಾಕುವ ಸಮಯದಲ್ಲಿ ಸೇರ್ಪಡೆಗೊಂಡ ತೆರಿಗೆ ಒಪ್ಪಂದಗಳ ತಾತ್ಕಾಲಿಕ ಪಟ್ಟಿ ಮತ್ತು ಮೀಸಲಾತಿಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲು ಸಹ ಪ್ರಸ್ತಾಪಿಸಲಾಗಿದೆ. ಧೃಡೀಕರಣೆಯ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಭಾರತವು ಈ ಎರಡರ ಅಂತಿಮ ಪಟ್ಟಿಗಳನ್ನು ಸಲ್ಲಿಸುತ್ತದೆ.
ಬಹುಪಕ್ಷೀಯ ಸಮಾವೇಶಕ್ಕೆ ಸಹಿ ಮಾಡುವುದರಿಂದ ಭಾರತದಲ್ಲಿ ಅಸ್ತಿತ್ವದಲ್ಲಿರುವ ತೆರಿಗೆ ಒಪ್ಪಂದಗಳನ್ನು ತ್ವರಿತವಾಗಿ ಮಾರ್ಪಡಿಸುವುದರ ಮೂಲಕ ಬಿಇಪಿಎಸ್ ಫಲಿತಾಂಶಗಳನ್ನು ಅನ್ವಯಿಸಲು ಸಾಧ್ಯವಾಗಲಿದೆ. ಒಪ್ಪಂದದ ಎಲ್ಲ ಪಾಲುದಾರರು ಬಿಇಪಿಎಸ್ ನಿಂದನೆ ವಿರೋಧಿ ದುಷ್ಪರಿಣಾಮಗಳನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಆಸಕ್ತಿಯನ್ನು ಸಹ ಹೊಂದಿದೆ. ಸಮಾವೇಶದ ಒಪ್ಪಂದಕ್ಕೆ ಸಹಿ ಹಾಕುವಿಕೆಯು ಒಪ್ಪಂದದ ದುರ್ಬಳಕೆಯಿಂದ ಆದಾಯ ನಷ್ಟವಾಗುವುದನ್ನು ತಡೆಯುವುದು ಮತ್ತು ಮೂಲದ ಸವಕಳಿ ಮತ್ತು ಲಾಭ ವರ್ಗಾವಣೆ ಕಾರ್ಯತಂತ್ರಗಳ ಮೂಲಕ ಲಾಭವನ್ನು ಸೃಷ್ಟಿಸುವ ಮತ್ತು ಮೌಲ್ಯವು ಸೃಷ್ಟಿಯಾಗುವ ಕಾರ್ಯಕಲಾಪಗಳಿಂದಾಗುವ ಲಾಭಕ್ಕೆ ತೆತಿಗೆ ವಿಧಿಸುವುದನ್ನು ಧೃಡಪಡಿಸುತ್ತದೆ.
*****